ಚಂಡೀಗಢ: ನಾನು ಬಿಜೆಪಿಯ ‘ಭಕ್ತ’. ಸಂದರ್ಭಗಳು ಬದಲಾಗುತ್ತಲೇ ಇರುತ್ತವೆ, ಆದರೆ ನಾನು ಪಕ್ಷಕ್ಕಾಗಿ ಪ್ರತಿ ಸಂದರ್ಭದಲ್ಲೂ ದುಡಿದಿದ್ದೇನೆ. ನಾನು ಇಂದು ಮತ್ತು ಹೆಚ್ಚಿನ ಶಕ್ತಿಯಿಂದ ಕೆಲಸ ಮಾಡುತ್ತೇನೆ. ಪರಿಸ್ಥಿತಿಗಳು ಬದಲಾಗಬಹುದು ಆದರೆ ನಾನು ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಚಂಡೀಗಢಕ್ಕೆ ತೆರಳುವ ಮೊದಲು ಅಂಬಾಲಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್ ವಿಜ್ ತಿಳಿಸಿದರು.
ಮಂಗಳವಾರ ಬಿಜೆಪಿ 2024 ರ ಲೋಕಸಭಾ ಚುನಾವಣೆಗೆ ಕೆಲವೇ ವಾರಗಳ ಮುಂಚೆಯೇ ರಾಜ್ಯದಲ್ಲಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಒಬಿಸಿ ನಾಯಕ ನಯಾಬ್ ಸಿಂಗ್ ಸೈನಿ ಅವರನ್ನು ಹರ್ಯಾಣದಮುಖ್ಯಮಂತ್ರಿಯನ್ನಾಗಿ ನೇಮಿಸಿದ್ದು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ನಯಾಬ್ ಸಿಂಗ್ ಸೈನಿ ಅವರು ಮನೋಹರ್ ಲಾಲ್ ಖಟ್ಟರ್ ಮತ್ತು ಅವರ ಸಂಪುಟದ ನಾಟಕೀಯ ರಾಜೀನಾಮೆಯ ಗಂಟೆಗಳ ನಂತರ ರಾಜಭವನದ ಸಮಾರಂಭದಲ್ಲಿ ಐದು ಸಚಿವರೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಕುರುಕ್ಷೇತ್ರದ ಸಂಸದ ನಯಾಬ್ ಸೈನಿ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ ಕೂಡಲೇ ಶಾಸಕಾಂಗ ಪಕ್ಷದ ಸಭೆಯಿಂದ ಅನಿಲ್ ವಿಜ್ ಎದ್ದು ಹೋಗಿದ್ದು, ಹಲವು ಊಹಾಪೋಹಕ್ಕೆ ಕಾರಣವಾಗಿತ್ತು. ಅಂಬಾಲಾ ಕಂಟೋನ್ಮೆಂಟ್‌ನಿಂದ ಆರು ಬಾರಿ ಶಾಸಕರಾಗಿರುವ ಅನಿಲ್ ವಿಜ್ ಅಸಮಾಧಾನಗೊಂಡಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಹಾಜರಾಗಲಿಲ್ಲ. ಅವರ ಹೆಸರು ಸಚಿವ ಸಂಪುಟದ ಪಟ್ಟಿಯಲ್ಲಿದ್ದರೂ ಸಹ ವಿಜ್, ತಮ್ಮ ಮನೆಯಲ್ಲೇ ಕುಳಿತಿದ್ದರು.
ಅನಿಲ್ ವಿಜ್ ಅವರನ್ನು ಶೀಘ್ರದಲ್ಲೇ ಸಂಪರ್ಕಿಸುತ್ತೇವೆ. ಅದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ಮನೋಹರ್ ಲಾಲ್ ಖಟ್ಟರ್ ಹೇಳಿದ್ದರು. ಮುಖ್ಯಮಂತ್ರಿಯಾಗಿ ಖಟ್ಟರ್ ಅವರ ಎರಡನೇ ಅವಧಿ ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿದ್ದು, ನಂತರ ವಿಧಾನಸಭಾ ಚುನಾವಣೆ ನಡೆಯಲಿವೆ ಎಂದು ಸೂಚಿಸಿದರು.