ಬೆಂಗಳೂರು: ಹೊಸ ಆಸ್ತಿ ತೆರಿಗೆ ಮತ್ತು ಖಾತಾ ವ್ಯವಸ್ಥೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ, ಇಂದು ಸಾಯಂಕಾಲ ಕೆಪಿಸಿಸಿ ಸಭೆಯೊಂದನ್ನು ನಡೆಸಿ ಉಳಿದ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯೊಂದನ್ನು ತಯಾರು ಮಾಡಲಿದೆ ಎಂದು ಹೇಳಿದರು.
ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಅಧಿಕಾರ ತನಗಿಲ್ಲ, ಪಟ್ಟಿಯನ್ನು ತೆಗೆದುಕೊಂಡು ದೆಹಲಿಗೆ ಹೋಗುತ್ತೇವೆ, ಅಭ್ಯರ್ಥಿಗಳ ಹೆಸರನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಪರಾಮರ್ಶೆ ನಡೆಸುತ್ತದೆ. ಕೆಪಿಸಿಸಿ ನೀಡಿದ ಪಟ್ಟಿಯನ್ನೇ ಸಿಇಸಿ ಅಂತಿಮಗೊಳಿಸುತ್ತದೆ ಅಂತಿಲ್ಲ, ಅವರು ಕೆಲ ಹೆಸರುಗಳನ್ನು ತೆಗೆದುಹಾಕಿ ತಮಗೆ ಸರಿಯೆನಿಸಿದ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಬಹುದು.
ಅಂತಿಮ ಪಟ್ಟಿಯನ್ನು ಸಹ ವರಿಷ್ಠರೇ ಘೋಷಣೆ ಮಾಡುತ್ತಾರೆ ಎಂದು ಶಿವಕುಮಾರ್ ಹೇಳಿದರು. ಬಿಜೆಪಿ ಇಂದು ಸಾಯಂಕಾಲ ಪಟ್ಟುಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದಾಗ, ಅವರ ರಾಜಕಾರಣವೇ ಬೇರೆ ಕಾಂಗ್ರೆಸ್ ರಾಜಕಾರಣವೇ ಬೇರೆ ಎಂದು ಕೆಪಿಸಿಸಿ ಅಧ್ಯಕ್ಷ ಹೇಳಿದರು.