ಬೆಂಗಳೂರು: ಇಷ್ಟು ಕಳಪೆ ಬಜೆಟ್ ನಾನು ಯಾವತ್ತೂ ನೋಡಿಲ್ಲ ಎಂದು ಕೇಂದ್ರದ ಬಜೆಟ್ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಕೇಂದ್ರ ಬಜೆಟ್ನಿಂದ ರಾಜ್ಯಕ್ಕೆ ಅನ್ಯಾಯ ಆಗಿದ್ದು, ಈ ಬಜೆಟ್ನಿಂದ ನಮಗೆ ಬಹಳ ನಿರಾಸೆಯಾಗಿದೆ. ಬಜೆಟ್ ಕಳಪೆ ಬಜೆಟ್ ಇದೇ ವೇಳೆ ದಕ್ಷಿಣ ಭಾರತದ ಕೂಗು ಎತ್ತಬೇಕಾಗುತ್ತೆ ಎಂಬ ಡಿಕೆ ಸುರೇಶ್ ಹೇಳಿಕೆ ವಿಚಾರ ‘ನಾನು ಅಖಂಡ ಭಾರತದವನು, ಅವರು ಜನರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ. ‘ನಾವೆಲ್ಲ ಅಖಂಡ ಭಾರತದವರು, ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಎಲ್ಲವೂ ಒಂದೇ. ಉತ್ತರ ಭಾರತಕ್ಕೆ ಸಿಕ್ಕಿರುವುದು ನಮಗೂ ಸಿಗಬೇಕು ಎಂಬುದು ಜನರ ಭಾವನೆ ಎಂದರು.
27 ಜನ ಸಂಸದರು ಏನು ತಂದಿದ್ದಾರೆ ನಮಗೆ?, ಆ ಎಲ್ಲ ಸಂಸದರು ಧರಣಿ ಮಾಡಿ ಅನ್ಯಾಯ ಸರಿಪಡಿಸಲಿದ್ದು, ಹಿಂದಿ ಬೆಲ್ಟ್ ಸೇರಿದಂತೆ ಯಾವ ಹಳ್ಳಿಗೂ ಅನ್ಯಾಯ ಆಗಬಾರದು ಎಂದು ಸ್ಪಷ್ಟಪಡಿಸಿದರು.ಚಿಕ್ಕಬಳ್ಳಾಪುರದಲ್ಲಿ ಬಜೆಟ್ ಕುರಿತು ಮಾತನಾಡಿದ ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ ‘ಇದು ಶ್ರೀಮಂತರ ಪರವಾದ ಬಜೆಟ್, ಬಡವರಿಗೆ ಪ್ರಯೋಜನವಿಲ್ಲ ಎಂದರು. ಮಧ್ಯಮ ವರ್ಗದವರಿಗೂ ಹಾಗೂ ಬಡವರಿಗೂ ಈ ಬಜೆಟ್ನಿಂದ ಯಾವ ಪ್ರಯೋಜನ ಇಲ್ಲ ಎಂದು ತಿಳಿಸಿದರು.