ಕೋಲ್ಕತಾ: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ, ಐಎನ್‌ಡಿಐಎ ಮೈತ್ರಿಕೂಟಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಘಾತ ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕುರಿತಾದ ಮಾತುಕತೆ ನಡುವೆ, ಬಂಗಾಳದ ಎಲ್ಲಾ 42 ಲೋಕಸಭೆ ಕ್ಷೇತ್ರಗಳಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದು, ಫಲಿತಾಂಶ ಪ್ರಕಟವಾದ ಬಳಿಕವಷ್ಟೇ ಪ್ಯಾನ್ ಇಂಡಿಯಾ ಮೈತ್ರಿಯನ್ನು ಪರಿಗಣಿಸುವುದಾಗಿ ತಿಳಿಸಿದರು.
ಬಂಗಾಳದಲ್ಲಿ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವ ಕುರಿತು ಈ ಹಿಂದೆಯೂ ಮಮತಾ ಹೇಳಿದ್ದು, ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷವು ತನ್ನ ಸ್ಪರ್ಧೆಗೆ ಲೆಕ್ಕಾಚಾರ ಹಾಕುತ್ತಿರುವಾಗ ಅವರು ನೀಡಿರುವ ಹೇಳಿಕೆ, ಮೈತ್ರಿಕೂಟದಲ್ಲಿನ ಬಿರುಕನ್ನು ಮತ್ತಷ್ಟು ವಿಸ್ತರಿಸಿದೆ.”
ನನಗೂ ಕಾಂಗ್ರೆಸ್‌ಗೂ ಯಾವ ಸಂಬಂಧವೂ ಇಲ್ಲ. ನಾವು ಒಂಟಿಯಾಗಿ ಹೋರಾಡಲಿದ್ದು, ಚುನಾವಣೆ ಬಳಿಕ ರಾಷ್ಟ್ರ ಮಟ್ಟದ ಮೈತ್ರಿಯನ್ನು ನಿರ್ಧರಿಸಲಿದ್ದೇವೆ” ಎಂದಿರುವ ಮಮತಾ, ಒಪ್ಪಂದಗಳ ಬಗ್ಗೆ ಕಾಂಗ್ರೆಸ್ ಜತೆ ಮಾತನಾಡಿಲ್ಲ ಎಂದು ಸೂಚಿಸಿದ್ದಾರೆ.