ಬೆಂಗಳೂರು: 100 ಕ್ಕೆ 100 ರಷ್ಟು ಎಚ್ಚರಿಕೆ ನೀಡುತ್ತೇನೆ, ಕನ್ನಡದ ತಂಟೆಗೆ ಬಂದರೆ ಹುಷಾರ್! ಎಂದು
– ಮಹಾರಾಷ್ಟ್ರ ಸರ್ಕಾರಕ್ಕೆ ವಾರ್ನಿಂಗ್ ಮಾಡಿದ್ದು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಎಂದು ಮಾಹಿತಿ ತಿಳಿದು ಬಂದಿದೆ.
ಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಬಗ್ಗೆ ನ್ಯಾಯಾಲಯ ಏನು ಹೇಳುತ್ತೆ ನೋಡೋಣ. ನ್ಯಾಯಾಲಯದ ಮೇಲೆ ನಮಗೆ ಗೌರವವಿದೆ. ನಾವು ಮಹಾರಾಷ್ಟ್ರದಲ್ಲಿ ಕನ್ನಡ ಬೋರ್ಡ್ ಹಾಕಿ ಅಂತ ಹೇಳಿದ್ದೀವಾ? ಕರ್ನಾಟಕದಲ್ಲಿ ನಾಮಫಲಕ ಕಡ್ಡಾಯ ಮಾಡಿ ಎಂದು ಆದೇಶ ಮಾಡಿದ್ದೇವೆ ಎಂದರು.
ಕರ್ನಾಟಕ ಸೌಲಭ್ಯಗಳನ್ನು ಪಡೆದುಕೊಂಡು ನಮ್ಮ ವಿರುದ್ಧ ಮಾತನಾಡುತ್ತಾರೆ. ನಮ್ಮ ರಾಜ್ಯಕ್ಕಾಗಿ ಕಾನೂನು ತಂದಿದ್ದೇವೆ ಇದರಲ್ಲಿ ಮಹಾರಾಷ್ಟ್ರಕ್ಕೆ ಏನು ಕೆಲಸ? ಎಂದು ಹೇಳಿದರು.