ಬೆಂಗಳೂರು: ಸಿದ್ದರಾಮಯ್ಯ ಕಾಲಿಟ್ಟರೆ ಅಲ್ಲಿ ಬರಗಾಲ, ಪರಿಣಾಮವಾಗಿ ರಾಜ್ಯದಲ್ಲಿ ಕುಡಿಯೋಕೆ ನೀರಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಗಂಭೀರವಾಗಿ ಟೀಕಿಸಿದರು.
ಜಯನಗರ 4 ಬ್ಲಾಕ್ ನಲ್ಲಿ ಗುರುವಾರ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಮುಂದೆ ಎರಡು ಆಯ್ಕೆ ನೀಡಿದೆ. ಬೇಜಾರಾದಾಗ ವಿದೇಶಕ್ಕೆ ಹೋಗುವ ರಾಹುಲ್ ಗಾಂಧಿ ಬೇಕಾ ಅಥವಾ ಕಳೆದ ಹತ್ತು ವರ್ಷ ರಜೆ ತೆಗೆದುಕೊಳ್ಳದ ನರೇಂದ್ರ ಮೋದಿ ಬೇಕಾ? ಎಂದು ಪ್ರಶ್ನಿಸಿದರು.
ಮೋದಿ ಬಂದು ನಿಂತರೆ ಪಾಕಿಸ್ತಾನ ಉಢೀಸ್ ಆಗುತ್ತದೆ. ಕಾಂಗ್ರೆಸ್ ಬಂದರೆ ಎಲ್ಲರೂ ಒಳಗಡೆ ಬರ್ತಾರೆ. ಬೆಂಗಳೂರು ದಕ್ಷಿಣ ಬಿಜೆಪಿ ಭದ್ರಕೋಟೆ. ಈ ನಿಟ್ಟಿನಲ್ಲಿ ತೇಜಸ್ವಿ ಸೂರ್ಯ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ಕಾಲಿಟ್ಟರೆ ಬರಗಾಲ. ಕುಡಿಯೋಕೆ ನೀರಿಲ್ಲ. ಆದರೆ ಬಾರ್ ಗಳು ಫುಲ್ ಆಗಿವೆ. ತೆರಿಗೆ ಹೆಚ್ಚಳವಾಗಿದೆ. ಅಲಿಬಾಬ 40 ಕಳ್ಳರು ಕರ್ನಾಟಕವನ್ನು ನಡೆಸುತ್ತಿದ್ದಾರೆ. ಈ ದೇಶವನ್ನು ಕಾಪಾಡುವ ಶಕ್ತಿ ಮೋದಿಗೆ ಮಾತ್ರ ಇರುವುದು ಎಂದರು.
ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಬೆಂಗಳೂರು ದಕ್ಷಿಣದಲ್ಲಿ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಬಿಜೆಪಿ ಗೆಲ್ಲಲಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಹಗಲು ರಾತ್ರಿ ಕೆಲಸ ಮಾಡಬೇಕು. ಕಾಂಗ್ರೆಸ್ ಇಲ್ಲಿ ನೆಪಮಾತ್ರಕ್ಕೆ ನಿಂತಿದೆ. ಆದರೆ ಗೆಲ್ಲುವುದು ಬಿಜೆಪಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.