This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Politics News

ರೈತ ಅನ್ನ ನೀಡಿದರೆ-ನೇಕಾರ ಮಾನ ಕಾಪಾಡುತ್ತಾನೆ : ಸವದಿ

ನೇಕಾರ ನಿಗಮಗಳಿಗೆ ೨ ಸ್ಥಾನಕ್ಕೆ ಆಗ್ರಹ

ನಿಮ್ಮ ಸುದ್ದಿ ಬಾಗಲಕೋಟೆ

ಜನರ ಮೂಲ ಸೌಕರ್ಯ ಒದಗಿಸುವಲ್ಲಿ ಎರಡು ಜನಾಂಗದ ಕಾರ್ಯ ಶ್ಲಾಘನೀಯವಾಗಿದ್ದು, ರೈತ ಅನ್ನ ನೀಡಿ ಸಲುಹಿದರೆ, ನೇಕಾರ ಪ್ರತಿಯೊಬ್ಬರ ಮಾನ ಕಾಪಾಡುತ್ತಾನೆಂದು ತೇರದಾಳ ಶಾಸಕರು ಆಗಿರುವ ರಾಜ್ಯ ಕೈವiಗ್ಗ ಅಭಿವೃದ್ದಿ ನಿಗಮದ ಅದ್ಯಕ್ಷ ಸಿದ್ದು ಸವದಿ ಹೇಳಿದರು.

ನವನಗರದ ಕಾಳಿದಾಸ ಕಲ್ಯಾಣ ಮಂಟಪದಲ್ಲಿ ರವಿವಾರ ಬಾಗಲಕೋಟೆ ಜಿಲ್ಲಾ ನೇಕಾರ ಸಹಕಾರಿ ಸಂಘಗಳ ಮಹಾಮಂಡಳದಿಂದ ಆಯೋಜಿಸಲಾಗಿದ್ದ ಜಿಲ್ಲಾ ಕೇಂದ್ರ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಗೆ ಸನ್ಮಾನ ಸಮಾರಂಭವನ್ನು ನೂಲಿನ ಚರಕ ತಿರುಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿಯೇ ಬಾಗಲಕೊಟೆ ಜಿಲ್ಲೆಯಲ್ಲಿ ನೇಕಾರರ ಸಂಖ್ಯೆ ಹೆಚ್ಚಾಗಿದ್ದು, ಆ ಜನಾಂಗದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಸ್ಥಿತಿವಂತರಾಗಿದ್ದಾರೆ. ಉಳಿದವರೆಲ್ಲ ನೇಕಾರಿಕೆಯನ್ನೇ ನಡೆಸಿ ಬದುಕು ಸಾಗಿಸುತ್ತಿದ್ದಾರೆ ಎಂದರು.

ಇಂದು ಒಬ್ಬ ಕಟ್ಟಡ ಕಾರ್ಮಿಕನಿಗೂ ಸಿಗದಷ್ಟು ಕೂಲಿ ನೇಕಾರರಿಗೆ ಸಿಗುತ್ತಿಲ್ಲ. ನೇಕಾರರು ಸಂಘಟನಾತ್ಮಕವಾಗಿ ಬಂದ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು. ರೈತರಿಗೆ ಪಿಕೆಪಿಎಸ್‌ನಲ್ಲಿ ದೊರೆತ ಸಾಲದಂತೆ ಪ್ರತಿ ನೇಕಾರರ ಕುಟುಂಬಕ್ಕೂ ಕನಿಷ್ಟ ೨೫ ಸಾವಿರ ಸಾಲವನ್ನು ಬಿಡಿಸಿಸಿ ಬ್ಯಾಂಕ್ ನೀಡಲು ಮುಂದಾಗಬೇಕು ಎಂದರು.

ಮಹಾಮಾರಿ ಕೊರೊನಾದಿಂದಾಗಿ ಕೈಮಗ್ಗ ಉದ್ದಿಮೆ ಹಾಗೂ ನೇಕಾರರು ಸಂಕಷ್ಟದಲ್ಲಿದ್ದಾರೆ. ಕಚ್ಚಾ ಮಾಲಿನ ಬೆಲೆ ಏರಿಕೆಯಾಗಿ ಪಕ್ಕಾ ಮಾಲಿನ ಬೆಲೆಗೆ ಬೇಡಿಕೆ ಇಲ್ಲದಿರುವದರಿಂದ ನೇಕಾರರ ಸಹಕಾರಿ ಸಂಘಗಳು ತೊಂದರೆಗೆ ಒಳಗಾಗಿವೆ. ಈ ವಿಷಯವನ್ನು ಸದನದಲ್ಲಿ ಚರ್ಚಿಸಿ ನೇಕಾರರ ಸಮಸ್ಯೆಗಳನ್ನು ಸರಕಾರಕ್ಕೆ ತಿಳಿಸುವುದಾಗಿ ಸವದಿ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪತ್ತಿನ ಸಂಘಗಳ ಮಹಾಮಂಡಳದ ನಿರ್ದೇಶಕ ರವೀಂದ್ರ ಕಲಬುರ್ಗಿ ಜಿಲ್ಲೆಯಲ್ಲಿ ತಾಲೂಕಾ ಪಂಚಾಯತಿ, ಜಿಲ್ಲಾ ಪಂಚಾಯತಿಗಳಲ್ಲಿ ಈ ಬಾರಿ ನೇಕಾರರ ಪ್ರತಿನಿಧಿಗಳಿಲ್ಲದೇ ಇರುವುದು ನೇವು ತಂದಿತ್ತು. ಆದರೆ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾದ್ಯಕ್ಷ ಸ್ಥಾನವನ್ನು ನೇಕಾರರ ಸಮುದಾಯಕ್ಕೆ ಒದಗಿಸಿಕೊಟ್ಟ ಬಿಡಿಸಿಸಿ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದರು.

ನೇಕಾರರಿಗೆ ರೈತರಷ್ಟೆ ಪ್ರಾತಿನಿದ್ಯ ಕೊಟ್ಟು ಶೂನ್ಯ ಬಡ್ಡಿದರದಲ್ಲಿ ಇಲ್ಲವೇ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಬೇಕು. ನೇಕಾರರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಶಿಷ್ಯವೇತನ, ಆರೋಗ್ಯ ವಿಮೆ ಒದಗಿಸುವದು ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಸರಕಾರ ನೆರವೇರಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ನೇಕಾರರ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ವಿದ್ಯುತ್ ಚಾಲಿತ ನೇಕಾರರಿಗೆ ಒಂದು ಸ್ಥಾನ, ಕೈಮಗ್ಗ ನೇಕಾರರಿಗೆ ಒಂದು ಸ್ಥಾನ ನೀಡಿ ನೇಕಾರ ಅಭಿವೃದ್ದಿ ನಿಗಮವನ್ನು ಸ್ಥಾಪಿಸಲು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಬಾಗಲಕೋಟೆ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಮಂಡಳಿಯವರನ್ನು ಸನ್ಮಾನಿಸಲಾಯಿತು.

ಸಾನಿಧ್ಯವನ್ನು ಗುಳೇದಗುಡ್ಡ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಪಟ್ಟದಾರ್ಯ ಸ್ವಾಮಿಗಳು, ಹಂಪಿ ಹೇಮಕೂಟ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮಿಗಳು, ದೊಡ್ಡಬಳ್ಳಾಪೂರ ಪುಷ್ಪಾಂಡಜ ಮಹರ್ಷಿ ಆಶ್ರಮದ ಜ್ಞಾನಾನಂದಗಿರಿ ಸ್ವಾಮಿಗಳು, ಹಳೇ ಹುಬ್ಬಳ್ಳಿಯ ಶಿವಶಂಕರ ಸ್ವಾಮಿಜಿ, ಹರಿಹರದ ಪ್ರಭುಲಿಂಗ ಸ್ವಾಮಿಜಿ ಹಾಗೂ ಬಾಗಲಕೋಟೆಯ ನೀರಕೇರಿ ಸಿದ್ದಾರೂಢ ಮಠದ ಘನಲಿಂಗ ಮಹಾಸ್ವಾಮಿಗಳು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಮಾಜಿ ಸಚಿವ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ಎಚ್.ವಾಯ್.ಮೇಟಿ, ನಿರ್ದೇಶಕರಾದ ರಾಮಣ್ಣ ತಳೇವಾಡ, ಶಿವನಗೌಡ ಅಗಸಿಮುಂದಿನ, ನಂದಕುಮಾರ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದುಂಡಪ್ಪ ಮಾಚಕನೂರ ಸ್ವಾಗತಿಸಿದರು. ರಮೇಶ ಜಮಖಂಡಿ ವಂದಿಸಿದರು. ರವಿ ಕಂಗಳ ನಿರೂಪಿಸಿದರು.

 

Nimma Suddi
";