ಯುವಯುವತಿಯರು ಮತ್ತು ಯುವಕರು ಪಾರ್ಟಿ ಮೋಜು ಮಸ್ತಿಯೆಂದು ಈ ಮದ್ಯಪಾನದ ದಾಸರಾಗಿದ್ದಾರೆ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯು ಕುಡಿತಕ್ಕೆ ದಾಸನಾಗಿ ಬಿಟ್ಟಿದ್ದರೆ ಕುಟುಂಬ ಸದಸ್ಯರು ಕಣ್ಣೀರಲ್ಲೇ ಕೈತೊಳೆಯಬೇಕಾಗುತ್ತದೆ.
ಮದ್ಯವನ್ನು ಸೇವಿಸುವುದು ಆರೋಗ್ಯಕ್ಕೆ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ದುತ್ತದೆ. ಇದರಿಂದ ಯಾವುದೇ ರೀತಿಯ ಪೋಷಕಾಂಶಗಳು ಇಲ್ಲದಿರುವುದರಿಂದ, ದೇಹವು ಪೋಷಕಾಂಶಗಳ ಕೊರತೆಯನ್ನು ಎದುರಿಸಬಹುದು. ಅದಲ್ಲದೇ ಲಿವರ್ ಸೇರಿದಂತೆ ದೇಹದ ಪ್ರಮುಖ ಅಂಗಗಳಿಗೆ ಹಾನಿಯಾಗುವ ಸಾಧ್ಯತೆಯು ಹೆಚ್ಚಾಗಿದೆ.
ಈ ಪಾನೀಯ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನ
ನೀರು
ಕಪ್ಪು ಉಪ್ಪು
ಜೇನು ತುಪ್ಪ
ಒಂದು ಲೋಟ ಬಿಸಿ ನೀರಿಗೆ ಕಪ್ಪು ಉಪ್ಪು ಹಾಗೂ ಜೇನು ತುಪ್ಪ ಬೆರೆಸಿದರೆ ಈ ಪಾನೀಯ ಸಿದ್ಧವಾಗುತ್ತಿದ್ದು, ಇದನ್ನು ಕುಡಿತದ ಚಟವಿರುವವರಿಗೆ ದಿನನಿತ್ಯ ಕುಡಿಯಲು ನೀಡಿದರೆ ಈ ಚಟವನ್ನು ಸುಲಭವಾಗಿ ಬಿಡಿಸಬಹುದು ಎಂದು ಮಾಹಿತಿ ಬೆಳಕಿಗೆ ಬಂದಿದೆ.