This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಪಿಎಂ ಕಿಸಾನ್ ಹಣ ಬಂದಿಲ್ಲವಾ? ಆಗಿದ್ದರೆ ಇಲ್ಲಿ ಒಮ್ಮೆ ವಿಚಾರಿಸಿ

ಪಿಎಂ ಕಿಸಾನ್ ಹಣ ಬಂದಿಲ್ಲವಾ? ಆಗಿದ್ದರೆ ಇಲ್ಲಿ ಒಮ್ಮೆ ವಿಚಾರಿಸಿ

ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಬುಧವಾರ 16ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ಮಹಾರಾಷ್ಟ್ರದ ಯವತ್ಮಾಲ್​ನಲ್ಲಿ ರಿಮೋಟ್ ಬಟನ್ ಒತ್ತುವುದರ ಮೂಲಕ ಅವರು 21,000 ರೂಗೂ ಹೆಚ್ಚು ಹಣವನ್ನು 9 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಹೆಚ್ಚಿನ ಮಂದಿಗೆ ನಿನ್ನೆಯೇ 2,000 ರೂ ಹಣ ತಲುಪಿರಬದಿದ್ದು, ಕೆಲವರಿಗೆ ತುಸು ವಿಳಂಬವಾಗಬಹುದು. ಒಂದು ವೇಳೆ ನೀವು ಯೋಜನೆಯಲ್ಲಿ ನೊಂದಾಯಿಸಿದ್ದರೂ ಹಣ ಬರುತ್ತಿಲ್ಲ ಎಂದಲ್ಲಿ ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಇಕೆವೈಸಿ ಅಪ್​ಡೇಟ್ ಆಗಿರದಿದ್ದರೆ, ಅಥವಾ ಕೆವೈಸಿ ದಾಖಲೆ ಸರಿಯಾಗಿ ಹೊಂದಾಣಿಕೆ ಆಗಿಲ್ಲದೇ ಇದ್ದರೆ ಹಣ ಬಂದಿಲ್ಲದೇ ಇರಬಹುದು.ಒಂದು ವೇಳೆ ನೀವು ಯೋಜನೆಯ ಫಲಾನುಭವಿಯಾಗಿ ಇಕೆವೈಸಿ ಮಾಡಿದ್ದರೂ ಹಣ ಬಂದಿಲ್ಲದಿದ್ದರೆ ದೂರು ಸಲ್ಲಿಸಲು ಅವಕಾಶ ಇದೆ.

ಹೆಲ್ಪ್ ಡೆಸ್ಕ್ ತೆರೆದಿರುತ್ತದೆ, ಸಹಾಯವಾಣಿ ನಂಬರ್​ಗಳಿವೆ. ಪಿಎಂ ಕಿಸಾನ್ ಪೋರ್ಟಲ್​ಗೆ ಹೋಗಿ (pmkisan.gov.in/) ನೇರವಾಗಿ ದೂರು ಸಲ್ಲಿಸುವ ಅವಕಾಶ ಇದೆ.

ದೂರು ಸಲ್ಲಿಸುವ ಮಾಹಿತಿ
ಇಮೇಲ್ ಐಡಿ: [email protected] ಮತ್ತು [email protected]
ಪಿಎಂ ಕಿಸಾನ್ ಹೆಲ್ಪ್​ಲೈನ್ ನಂಬರ್: 155261 / 011-24300606
ಪಿಎಂ ಕಿಸಾನ್ ಟೋಲ್ ಫ್ರೀ ನಂಬರ್: 1800-115-526
ಪೋರ್ಟಲ್​ನಲ್ಲಿ ನೇರ ಲಿಂಕ್: pmkisan.gov.in/Grievance.aspx
ಇಲ್ಲಿ ಪೋರ್ಟಲ್​ನಲ್ಲಿ ನೀವು ಮೇಲಿನ ದೂರು ಪುಟ ತೆರೆದರೆ, ಅದರಲ್ಲಿ ನಿಮ್ಮ ಆಧಾರ್ ನಂಬರ್ ಅಥವಾ ಅಕೌಂಟ್ ನಂಬರ್, ಅಥವಾ ಮೊಬೈಲ್ ನಂಬರ್ ಅನ್ನು ನಮೂದಿಸಿ, ‘ಗೆಟ್ ಡೀಟೇಲ್ಸ್’ ಕ್ಲಿಕ್ ಮಾಡಿ.

 

Nimma Suddi
";