This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಶಾಲಾ ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿ: ನೌಕರರಿಗೆ ನಿರ್ದಿಷ್ಟ ಪಿಂಚಣಿ ಬಿಡುಗಡೆ

ಶಾಲಾ ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿ: ನೌಕರರಿಗೆ ನಿರ್ದಿಷ್ಟ ಪಿಂಚಣಿ ಬಿಡುಗಡೆ

ಬೆಂಗಳೂರು : ಖಾಸಗಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಿ:01-04-2006ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ನಿರ್ದಿಷ್ಟ ಪಿಂಚಣಿ ಬಿಡುಗಡೆ ಕುರಿತಂತೆ ಶಾಲಾ ಶಿಕ್ಷಣ ಇಲಾಖೆ ಯಿಂದ ಮಹತ್ವದ ಆದೇಶ ಹೊರಡಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ(1)ರ ಪತ್ರದಲ್ಲಿ ಖಾಸಗಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಿ:01-04-2006ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನಾ ವ್ಯಾಪ್ತಿಗೆ ಒಳಪಡಿಸುವ ಕುರಿತು ಅನುಬಂಧದಲ್ಲಿ ಮಾಹಿತಿ ಭರ್ತಿ ಮಾಡಿ ಸರ್ಕಾರಕ್ಕೆ ಸಲ್ಲಿಸುವಂತೆ ನಿರ್ದೇಶನವಾಗಿರುತ್ತದೆ.

ಸದರಿ ಮಾಹಿತಿಯು ಅನುಬಂಧ-01 ರಲ್ಲಿ ಸಲ್ಲಿಸಲು ವಿಭಾಗದ ಎಲ್ಲಾ ಉಪನಿರ್ದೇಶಕರು(ಆಡಳಿತ) ರವರಿಗೆ ಉಲ್ಲೇಖ(2)ರನ್ವಯ ತಿಳಿಸಲಾಗಿದ್ದು, ಉಲ್ಲೇಖಿತ(3)ರ ಪತ್ರದಲ್ಲಿ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರ ಆಪ್ತ ಕಾರ್ಯದರ್ಶಿ ರವರ ದಿನಾಂಕ:18-12-2023ರ ಟಿಪ್ಪಣಿ ಮತ್ತು ಅದರ ಅಡಕಗಳನ್ನು ಇದರೊಡನೆ ಲಗತ್ತಿಸಿ. ಲ್ಲೇಖಿತ(4) ರನ್ವಯ ದಿನಾಂಕ:01-04-2006ರ ಪೂರ್ವದಲ್ಲಿ ನೇಮಕವಾಗಿದ್ದು ದಿನಾಂಕ:01-04-2006ರ ನಂತರ ವೇತನಾನುದಾನಕ್ಕೆ ಒಳಪಟ್ಟು ನಿವೃತ್ತರಾಗಿರುವ/ಮರಣಹೊಂದಿರುವ /ಹಾಲಿ ಸೇವೆಯಲ್ಲಿದ್ದು ಮುಂದೆ ನಿವೃತ್ತರಾಗಿರುವ ಅನುದಾನಿತ ಪಿಂಚಣಿ ವಂಚಿತ ಶಿಕ್ಷಕ ನಿಶ್ಚಿತ ಪಿಂಚಣಿ ಅಥವಾ ನಿರ್ದಿಷ್ಟ ಪಿಂಚಣಿ ಬಿಡುಗಡೆ ಮಾಡುವಂತೆ ಕೋರಿರುವ ಬಗ್ಗೆ ನಿಯನಾನುಸಾರ ಪರಿಶೀಲಿಸಲು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಾಪ್ಟ್ ಪ್ರತಿಯನ್ನು ಇ-ಮೇಲ್ ವಿಳಾಸಕ್ಕೆ ಮತ್ತು ಹಾರ್ಡ ಪ್ರತಿಯನ್ನು ಕೊಡಲೇ ಸರ್ಕಾರಕ್ಕೆ ಸಲ್ಲಿಸುವಂತೆ ಮಾನ್ಯ ಸರ್ಕಾರದಿಂದ ನಿರ್ದೇಶನವಾಗಿರುತ್ತದೆ ಎಂದು ಮಾಹಿತಿ ಕಂಡು ಬಂದಿದೆ.

Nimma Suddi
";