This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Education NewsEntertainment NewsInternational NewsLocal NewsNational NewsState News

೨೦೨೫-೨೬ ರಲ್ಲಿ ಭಾರತಿಯರನ್ನು ಬಾಹ್ಯಾಕಾಶಕ್ಕೆ ಕಳಿಸಲಿದ್ದೆವೆ

೨೦೨೫-೨೬ ರಲ್ಲಿ ಭಾರತಿಯರನ್ನು ಬಾಹ್ಯಾಕಾಶಕ್ಕೆ ಕಳಿಸಲಿದ್ದೆವೆ

*೨೦೪೦ ವೆಳೆಗೆ ಚಂದ್ರನ ಮೇಲೆ ಭಾರತಿಯ ಇಳಿಯಲಿದ್ದಾನೆ*
*೨೦೩೫ಕ್ಕೆ ನಮ್ಮದೆ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ*
*೨೦೨೪ ರಲ್ಲಿ ಚಂದ್ರನ ಮೇಲಿನ ಮಣ್ಣಿನ ಮಾದರಿ ತರುವುದು*
*೨೦೨೫-೨೬ ರಲ್ಲಿ ಭಾರತಿಯರನ್ನು ಬಾಹ್ಯಾಕಾಶಕ್ಕೆ ಕಳಿಸಲಿದ್ದೆವೆ*

ಬಾಗಲಕೋಟೆ: ೨೦೩೫ ಕ್ಕೆ ನಮ್ಮದೆ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಿ ೨೦೪೦ ಕ್ಕೆ ಭಾರತಿಯರನ್ನು ಚಂದ್ರನ ಮೇಲೆ ಇಳಿಸಲಿದ್ದೆವೆ ಎಂದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ) ದ ಲೀಕ್ವಿಡ್ ಪ್ರಪಲ್ಶನ್ ಕೇಂದ್ರದ ನಿರ್ದೇಶಕ ಡಾ.ವಿ.ನಾರಾಯಣ ಹೇಳಿದರು.

ಅವರು ಮುದೋಳದಲ್ಲಿ ಬಿ,ವ್ಹಿ,ವ್ಹಿ.ಸಂಘದ ಸ್ಥಳೀಯ ಬೀಳೂರು ಗುರುಬಸವ ಮಹಾಸ್ವಾಮಿಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ) ದ ಲೀಕ್ವಿಡ್ ಪ್ರಪಲ್ಶನ್ ಕೇಂದ್ರದ ಸಹಯೋಗದೊಂದಿಗೆ ದಿನಾಂಕ ೨೩ ಮತ್ತು ೨೪ ರಂದು “ಅಂತರಾಷ್ಟ್ರೀಯ ಬಾಹ್ಯಾಕಾಶ ಸಪ್ತಾಹ – ೨೦೨೩ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವು ಮೂಲಕ ಚಾಲನೆ ನೀಡಿ ಮಾತನಾಡಿದರು,

ಚಂದ್ರಯಾಣ ೩ರ ಯಶಸ್ವಿ ನಂತರ ೨೦೨೪ ಕ್ಕೆ ಚಂದ್ರನ ಮೇಲಿನ ಮಣ್ಣಿನ ಮಾದರಿ ತರುವುದು ಹಾಗೂ ೨೦೨೫-೨೬ ಕ್ಕೆ ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳಿಸುವುದು ಅಲ್ಲದೆ ೨೦೩೫ ಕ್ಕೆ ಭಾರತದ ಸ್ವತಂತ್ರ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಿ ೨೦೪೦ ಕ್ಕೆ ಚಂದ್ರನ ಮೇಲೆ ಭಾರತೀಯರನ್ನು ಇಳಿಸಿ ಸುರಕ್ಷಿತವಾಗಿ ಕರೆತರಲಿದ್ದೆವೆ ಈನಿಟ್ಟಿನಲ್ಲಿ ಇಸ್ರೋದ ೧೭೫೦೦ ಸಿಬ್ಬಂದಿಗಳು ಸತತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ,

ಈಗಾಗಲೆ ಸೂರ್ಯನ ಎಲ್.೧ ಪಾಯಿಂಟ್‌ನ್ನು ನಾವು ಜನವರಿಯಲ್ಲಿಯೆ ತಲುಪಿದ್ದೆವೆ, ಈ ಮೈಲುಗಲ್ಲು ಪ್ರತಿ ಭಾರತೀಯನು ಹೆಮ್ಮೆಪಡುವ ವಿಷಯವಾಗಿದೆ,ಭಾರತ ನಾಲ್ಕೆನೆ ದೇಶವಾಗಿದೆ, ನಮ್ಮ ಭಾರತ ನಿರ್ಮಿತ ಬಾಹ್ಯಾಕಾಶ ನೌಕೆಯಿಂದ ನಾವು ನಮ್ಮ ಜನರನ್ನು ಬಾಹ್ಯಾಕಾಶದಲ್ಲಿ ಸುತ್ತಾಡಿಸಲು ಪ್ರಯತ್ನಸುತ್ತಿದ್ದೆವೆ, ನಮ್ಮ ಪ್ರಧಾನ ಮಂತ್ರಿಗಳು ತಮ್ಮ ಸಲಹೆ ನೀಡುತ್ತಿದ್ದಾರೆ,೨೦೩೫ಕ್ಕೆ ನಮ್ಮದೆಯಾದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಲಿದ್ದೆವೆ ಎಂದ ಅವರು ನಮಗೆ ತಿಳಿದಿರುವ ಹಾಗೆ ೧೯೫೭ ಅಕ್ಟೋಬರ ೪ ರಂದು ಬಾಹ್ಯಾಕಾಶದ ಜಗತ್ತಿನಲ್ಲಿ ಮೊದಲ ರಾಕೇಟ್ ಉಡಾವಣೆ ಆಯಿತು, ಅಲ್ಲಿಂದ ಇಲ್ಲಿವರೆಗೆ ೬೦ ರಿಂದ ೬೬ ವರ್ಷದ ವರೆಗೆ ಜಾಗತಿಕವಾಗಿ ನೋಡುವುದಾದರೆ ೫೭೨೨ ಬಾಹ್ಯಾಕಾಶ ಉಡಾವಣಾ ನೌಕೆಗಳು ಉಡಾವಣೆಯಾಗಿವೆ,೧೧.೦೦೦ ಕ್ಕೂ ಹೆಚ್ಚು ಉಪಗ್ರಹಗಳು ಉಡಾವಣಯಾಗಿವೆ,೪೮೦೦ ಕ್ಕೂ ಹೆಚ್ಚು ಉಪಗ್ರಹಗಳು ಬಾಹ್ಯಾಕಾಶದಲ್ಲಿ ಸೇವೆ ನೀಡುತ್ತಿವೆ, ಈ ಉಪಗ್ರಹಗಳ ಸಹಾಯದಿಂದ ಅಹಾರ ಭದ್ರತೆ, ನೀರಿನ ಭದ್ರತೆ, ದೇಶದ ತಾಪಮಾನಗಳನ್ನು, ದೇಶದ ಸಮಗ್ರ ಬೇಳವಣಿಗೆಗೆ ತನ್ನದೆಯಾದ ಕೊಡುಗೆ ನೀಡಿವೆ ಎಂದರು.

ಮುಖ್ಯ ಅತಿಥಿಗಳಾಗಿ ಲೀಕ್ವಿಡ್ ಪ್ರಪಲ್ಶನ್ ಕೇಂದ್ರದ ಉಪನಿರ್ದೇಶಕರಾದ ಕೆ ಶಾಂಬಯ್ಯ ಮಾತನಾಡಿ ಉತ್ತರ ಕರ್ನಾಟಕದ ಮಕ್ಕಳಿಗೆ ಬಾಹ್ಯಾಕಾಶ ಜ್ಞಾನ ಅರಿವು ಮೂಡಿಸುವು ಉದ್ದೇಶದಿಂದ ಈ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದ್ದು ಇಂದಿನ ಮಕ್ಕಳು ಮುಂದೆ ಇಸ್ರೋದಲ್ಲಿ ಕೆಲಸ ಮಾಡಬಹುದಾಗಿದೆ ಎಂದರು,ಎಲ್ಲ ವಿಜ್ಞಾನಿಗಳು ಹಳ್ಳಿಯ ಬಡಕುಟುಂಬದಿಂದಲೆ ಬಂದವರಾಗಿದ್ದಾರೆ, ತಂದೆ ತಾಯಿ ಹಾಗೂ ಶಿಕ್ಷಕರಲ್ಲಿ ದೇವರನ್ನು ಕಾಣಿರಿ ಜೋತೆಗೆ ಸಾಧನೆಗೆ ನಿರ್ದಿಷ್ಟ ಗುರಿ,ಶೃದ್ದೆ,ಶ್ರಮದ ಅಗತ್ಯವಿದೆ ಎಂದರು.
BGMITಕಾರ್ಯಕಾರಣಿ ಮಂಡಳಿಯ ಕಾರ್ಯಾಧ್ಯಕ್ಷರಾದ ಮಹಾಂತೇಶ ಶೆಟ್ಟರ ಮಾತನಾದಿ ವಿಜ್ಞಾನಿಗಳ ಸಾಧನೆಯಿಂದ ದೇಶ ವಿಶ್ವಗುರುವಾಗುವ ನಿಟ್ಟಿನಲ್ಲಿ ಸಾಗುತ್ತಿದೆ ಎಂದ ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದಿನ ಯುವಕರೆ ಸಂಶೂಧನೆ ಮೂಲಕ ಭಾರತವನ್ನು ಮುಂಚೂನಿಗೆ ತರುವ ಕಾರ್ಯವಾಗಬೇಕಿದೆ, ಬೆಂಗಳೂರಿನ ಬಿಡದಿಯಲ್ಲಿರುವು ಬಿ.ವ್ಹಿ.ವ್ಹಿ.ಸಂಘದ ತಾಂತ್ರಿಕ ಮಹಾವಿದ್ಯಾಲಯದಲ್ಲಿಯೂ ಈ ಬಾಹ್ಯಾಕಾಶ ಸಪ್ತಾಹವನ್ನು ಹಮ್ಮಿಕೊಳ್ಳುವಂತೆ ವಿನಂತಿಸಿದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಇಸ್ರೋ ವಿಜ್ಞಾನಿಗಳ ಸಾಧನೆ ಅಪ್ರತಿಮವಾಗಿದ್ದು, ನಮ್ಮ ಮಹಾವಿದ್ಯಾಲಯದಲ್ಲಿ ನಡೆದ ಅಂತರಾಷ್ಟ್ರೀಯ ಬಾಹ್ಯಾಕಾಶ ಸಪ್ತಾಹ ಯಶಸ್ವಿಯಾಗಿ ನಡೆಸಿದ ಎಲ್ಲ ವಿಜ್ಞಾನಿಗಳಿಗೆ ಶುಭಕೋರಿದರು.

ವೇದಿಕೆ ಮೇಲೆ ಮುಧೋಳ ತಾಲೂಕಿನ ಬ್ಲಾಕ್ ಶಿಕ್ಷಣ ಅಧಿಕಾರಿಗಳಾದ .ಎಸ್.ಎಮ್.ಮುಲ್ಲಾ,ಬಾಹ್ಯಾಕಾಶ ಸಪ್ತಾಹದ ಕಾರ್ಯಾಧ್ಯಕ್ಷರಾದ ಡಾ.ಎಮ್ ಕಾರ್ತಿಕೇಯನ್, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶ್ರವಣಕುಮಾರ ಕೆರೂರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ವಿಜ್ಞಾನಿಗಳನ್ನು ಸಂಘದ ಮಹಾವಿದ್ಯಾಲಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿ ಹಾಗೂ ಇಸ್ರೋ ಹೊರತಂದಿರುವ ಚಂದ್ರಯಾನ೩ ರ ಯಶಸ್ವಿ ದಾರಿಯ ಚಿತ್ರಪಟಗಳನ್ನು ಬಿಡುಗಡೆ ಮಾಡಿ ವಿವಿಧ ಶಾಲೆಗಳಿಗೆ ವಿತರಿಸಲಾಯಿತು.

ಗಮನ ಸೇಳೆದ ಬಾಹ್ಯಾಕಾಶ ಉಪಕರಣಗಳ ಪ್ರದರ್ಶನ : ಎರಡು ದಿನಗಳ ಕಾರ್ಯಕ್ರಮದಲ್ಲಿ ಇಸ್ರೊದ ೭೦ಕ್ಕೂ ಹೆಚ್ಚು ವಿಜ್ಞಾನಿಗಳ ತಂಡದಿಂದ ವಿವಿಧ ಸ್ಯಾಟಲೈಟ್,ರಾಕೇಟ, ಇಂಜೀನ್‌ಗಳ & ಬಾಹ್ಯಾಕಾಶ ಉಪಕರಣಗಳ ಮಾದರಿಗಳನ್ನು ಪ್ರದರ್ಶಿಸಲಾಗುವುದು ಮುಧೋಳ ತಾಲೂಕಿನ ಎಲ್ಲಾ ಹೈಸ್ಕೂಲ್, PU ಕಾಲೇಜ್ ಮತ್ತು ಡಿಪ್ಲೊಮಾ ಕಾಲೇಜಗಳ ವಿಧ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಬಾಹ್ಯಾಕಾಶದ ವಿವಿಧ ವಿಷಯಗಳ ಮೇಲೆ ಸ್ವರ್ಧೆಗಳಲ್ಲಿ ಹೆಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಾಗವಹಿಸಿದ್ದರು, .ಎಲ್ಲಾ ಶಾಲೆಗಳ ವಿಧ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಇಸ್ರೊ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮವು ಜರುಗಿತು,

Nimma Suddi
";