ಬಸವಾಪಟ್ಟಣ: ಭತ್ತದ ಗದ್ದೆಯ ಹುಲ್ಲಿನ ಹತೋಟಿಗೆ ಸಿಂಪಡಿಸಿದ ಕಳೆ ನಾಶಕದ ಪರಿಣಾಮ ಗದ್ದೆಯ ಪಕ್ಕದ ಸುಮಾರು 330 ಅಡಕೆ ಗಿಡಗಳು ಸುಟ್ಟು ನಾಶವಾಗಿರುವ ಘಟನೆ ಚನ್ನಗಿರಿ ತಾಲೂಕು ಕಣಿವೆಬಿಳಚಿ ಗ್ರಾಮದಲ್ಲಿ ನಡೆದಿದೆ ಎಂದು ಮಾಹಿತಿ ತಿಳಿದು ಬಂದಿದೆ.
”ಪಕ್ಕದ ಜಮೀನಿನವರು ಭತ್ತದ ನಾಟಿ ಮಾಡಿ ಕೀಟನಾಶಕವನ್ನು ಭತ್ತದ ಗದ್ದೆಗೆ ಹಾಕಿದ್ದು, ಗದ್ದೆಯ ಪಕ್ಕದ ಬದುವಿನಲ್ಲಿರುವ ಆಂಜನಾಬೋವಿ ಅವರಿಗೆ ಸೇರಿದ 230 ಮತ್ತು ಹನುಮಂತಪ್ಪಗೆ ಸೇರಿದ 100 ಮರಗಳು ಸುಳಿ ಒಣಗಿ ಗಿಡಗಳು ಸಂಪೂರ್ಣ ನಾಶವಾಗಿವೆ.
8 ತಿಂಗಳ ಹಿಂದೆ ಪಕ್ಕದ ಜಮೀನಿನವರಾದ ಚೌಡಕ್ಕ ದೊಡ್ಡವೆಂಕಟಾಬೋವಿ ಎಂಬುವರು ಭತ್ತದ ನಾಟಿ ಮಾಡಲು ಬೇರೆಯವರಿಗೆ ಜಮೀನು ಗುತ್ತಿಗೆ ನೀಡಿದ್ದು, ಗುತ್ತಿಗೆ ಪಡೆದವರು ಭತ್ತದ ಕಳೆಯನ್ನು ನಿವಾರಿಸಲು ಕಳೆನಾಶಕ ಸಿಂಪಡಿಸಿದ ಪರಿಣಾಮ ಸುಮಾರು ನಾಲ್ಕರಿಂದ ಐದು ತಿಂಗಳ ಒಳಗೆ ಮರಗಳು ಒಣಗುತ್ತಾ ನಾಶವಾಗಿವೆ ಎಂದು ರೈತ ದೂರಿನಲ್ಲಿ ತಿಳಿಸಿದರು.
ಜಮೀನಿಗೆ ಕಳೆನಾಶಕ ಸಿಂಪಡಿಸಿದ ವ್ಯಕ್ತಿ ಮತ್ತು ಔಷಧ ಕಂಪನಿ ಮಾಲೀಕ, ಔಷಧಿ ಮಾರಾಟಗಾರನ ವಿರುದ್ಧ ಶುಕ್ರವಾರ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿದೂರು ದಾಖಲು ಮಾಡಿದ್ದೇನೆ” ಎಂದು ರೈತ ಆಂಜನಾಬೋವಿ ‘ಮಾದ್ಯಮಕ್ಕೆ ತಿಳಿಸಿದರು.
ನಾಶವಾಗಿರುವ ಫಸಲು ಬಿಡುವ 12 ವರ್ಷದ ಅಡಕೆ ಗಿಡಗಳು, ಕಣಿವೆಬಿಳಚಿ ಗ್ರಾಮದ ರೈತರಾದ ಆಂಜನಾಬೋವಿ ಮತ್ತು ಹನುಮಂತಪ್ಪ ಎಂಬುವರಿಗೆ ಸೇರಿದ್ದಾಗಿದೆ. ಗದ್ದೆಯ ಪಕ್ಕದಲ್ಲಿರುವ ಅಡಕೆ ಗಿಡಗಳಿಗೆ ಬೇರುಗಳ ಮೂಲಕ ಕಳೆನಾಶಕ ಔಷ ತಗುಲಿ, ಮರಗಳು ಸುಟ್ಟಿವೆ.