ಶ್ರೀಶೈಲಂ ಪುಣ್ಯ ಕ್ಷೇತ್ರದಲ್ಲಿ ಬಿವಿವಿಎಸ್ ನಿತ್ಯ ಅನ್ನದಾನ ಛತ್ರದ ಕಟ್ಟಡದ ಉಧ್ಘಾಟನೆ ಹಾಗೂ ಪೂಜಾ ಕಾರ್ಯಕ್ರಮ.
ನಿಮ್ಮ ಸುದ್ದಿ ಬಾಗಲಕೋಟೆ
ಶೈಕ್ಷಣಿಕ ಸಾಧನೆ ಜತೆಗೆ ಧಾರ್ಮಿಕ ಕಾರ್ಯದಲ್ಲೂ ಸೇವೆ ಅಣಿಯಾದ ಬಿವಿವಿ ಸಂಘದ ಕಾರ್ಯ ಶ್ಲಾಘನಿಯ- ಶ್ರೀಶೈಲ ಜಗದ್ಗುರು ಡಾ,ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು.
ತಿರುಪತಿ, ರಾಮೇಶ್ವರಂ ಹಾಗೂ ಅಯೋದ್ಯೆಯಲ್ಲೂ ಅನ್ನದಾನ ಛತ್ರದ ನಿರ್ಮಾಣದ ಯೋಜನೆ ಇಟ್ಟುಕೊಂಡು ಶ್ರೀಶೈಲದಲ್ಲಿ ನಿತ್ಯ ಅನ್ನದಾನ ಛತ್ರವನ್ನು ಸೇವೆಗೆ ಅನಿಗೊಳಿಸುವ ಮೂಲಕ ಧಾರ್ಮಿಕ ಕಾರ್ಯದಲ್ಲಿ ಬಹುದೊಡ್ಡ ಹೆಜ್ಜೆ ನಿಟ್ಟ ಬಿವಿವಿ ಸಂಘದ ಕಾರ್ಯ ಶ್ಲಾಘನಿಯ, ಇದು ಮಠ ಮಾನ್ಯಗಳು ಮಾಡಬೇಕಾದ ಕಾರ್ಯವನ್ನು ಬಾಗಲಕೋಟೆಯ ಬಿವಿವಿ ಸಂಘ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶ್ರೀಶೈಲದ ೧೦೦೮ ಜಗದ್ಗುರು ಡಾ,ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಬಾಗಲಕೋಟೆ ಪ್ರತಿಷ್ಠಿತ ಬಸವೇಶ್ವರ ವಿರಶೈವ ವಿದ್ಯಾವರ್ಧಕ ಸಂಘದಿಂದ ಆಂದ್ರಪ್ರದೇಶದ ಶ್ರೀಶೈಲಂ ಪುಣ್ಯಕ್ಷೇತ್ರದಲ್ಲಿ 12 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಬಿವಿವಿಎಸ್ ನಿತ್ಯ ಅನ್ನದಾನ ಛತ್ರದ (ಕಟ್ಟಡದ) ವಾಸ್ತುಶಾಂತಿ, ಹೋಮ ಹಾಗೂ ಪೂಜಾ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಆಶಿರ್ವಚನ ನೀಡಿದ ಗುರುಗಳು, ಪುಣ್ಯಕ್ಷೇತ್ರಗಳು ಎಲ್ಲ ರೀತಿಯ ಸೌಲಬ್ಯಗಳಿಂದ ಅಭಿವೃದ್ದಿ ಹೊಂದುತ್ತಿವೆ, ಪುಣ್ಯಕ್ಷೇತ್ರಗಳ ಬರುವ ಭಕ್ತರಿಗಾಗಿ ನಿತ್ಯ ಅನ್ನದಾನ ಛತ್ರವನ್ನು ನಿರ್ಮಿಸಿ ಅದನ್ನು ಇಂದು ಸೇವೆಗೆ ಅಣಿಮಾಡಿದ್ದು ಒಂದು ಪುಣ್ಯದ ಕಾರ್ಯವಾಗಿದೆ ಎಂದರು.
ಸಮಾರಂಭದ ಸಾನ್ನಿಧ್ಯವನ್ನು ವಾರಣಾಶಿಯ (ಕಾಶಿ) ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಆಶಿರ್ವಚನದಲ್ಲಿ ದೇಶದ ಪ್ರಧಾನ ಮಂತ್ರಿಗಳು ದೇಶದಜ್ಯೋರ್ತಿಲಿಂಗ ಕ್ಷೇತ್ರಗಳನ್ನು ಮಾಡುತ್ತಿದ್ದು ಕೇಧಾರ,ಕಾಶಿ, ಉಜ್ಜಯನಿ ಅಭಿವೃದ್ದಿಯಾಗಿವೆ ಅದೇ ನಿಟ್ಟಿನಲ್ಲಿ ಶ್ರೀಶೈಲ ಕ್ಷೇತ್ರ ಅಬಿವೃದ್ಧಿ ಮಾಡುವುದರಲ್ಲಿ ಸಂದೇಹವಿಲ್ಲ, ಕ್ಷೇತ್ರದ ಅಭಿವೃದ್ದಿಯಾಗಬೇಕು, ಭಕ್ತಾಧಿಗಳ ಸಂಖ್ಯೆ ಕೂಡಾ ಹೇಚ್ಚಾಗಿದ್ದು ಎಲ್ಲ ಭಕ್ತಾಧಿಗಳ ಅನುಕೂಲಕ್ಕಾಗಿ ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘ ಶೈಕ್ಷಣಿಕ ಕ್ಷೇತ್ರಗಳಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದು ಶ್ರೀಶೈಲದಲ್ಲಿ ನಿತ್ಯ ಅನ್ನಧಾನ ಛತ್ರ ನಿರ್ಮಿಸುವ ಮೂಲಕ ಧಾರ್ಮೀಕ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿರುವುದು ಸಂಘದ ಹಾಗೂ ಕಾರ್ಯಾಧ್ಯಕ್ಷರ ಶ್ರಮ ಸಾರ್ಥಕವಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷರಾದ ಚರಂತಿಮಠದ ಪ್ರಭುಸ್ವಾಮಿಗಳು ತಮ್ಮ ನುಡಿಯಲ್ಲಿ ಸಂಘದ ಕಾರ‍್ಯಾಧ್ಯಕ್ಷರ ಹಾಗೂ ಎಲ್ಲ ಸದಸ್ಯರ ಶ್ರಮದಿಂದ ಇಂತಹ ಪುಣ್ಯ ಕಾರ್ಯವಾಗಿದ್ದು, ಶ್ಲಾಘನೀಯ.
ಸಮಾರಂಭದಲ್ಲಿ ಕಾರ್ಯಾಧ್ಯಕ್ಷರಾದ ಹಾಗೂ ಶಾಸಕರಾದ ಡಾ,ವೀರಣ್ಣ ಚರಂತಿಮಠರಿಂದ ಎಲ್ಲ ಜಗದ್ಗುರುಗಳಿಗೆ ಸನ್ಮಾನಿಸಿದರು.
ಶ್ರೀ ಶಿವಲಿಂಗೇಶ್ವರ ಸೋಪ್ಪಿಮಠ ಇವರು ಉಪಸ್ಥಿತರಿದ್ದರು. ಶ್ರಿಶೈಲ ದೇವಸ್ಥಾನದ ಟ್ರಸ್ಟಿಗಳಾದ ಚಕ್ರಪಾಣಿ ರೆಡ್ಡಿ, ಕಾರ್ಯಕಾರಣಿ ಸದಸ್ಯರುಗಳು. ಬಿವಿವಿ ಸಂಘದ ಗೌರವ ಕಾರ್ಯದರ್ಶಿಗಳಾದ ಮಹೇಶ ಅಥಣಿ. ಕಟ್ಟಡ ವಿಭಾಗದ ಚೇರಮನರಾದ ಮಹೇಶ ಕಕರಡ್ಡಿ, ಶಾಲಾ ಆಡಳಿತ ಮಂಡಳಿಯ ಕಾರ್ಯಧ್ಯಕಷರಾದ ಮಹಾಂತೇಶ ಶೇಟ್ಟರ, ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಜಿ,ಎಸ್ ಸೂಳಿಬಾವಿ ಸೇರಿದಂತೆ ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಅನ್ನದಾನ ಛತ್ರದ ನೂತನ ಕಟ್ಟಡದ ವಾಸ್ತುಶಾಂತಿ,ಹೋಮ,ಪೂಜಾ ಸಮಾರಂಭ,ಜಗದ್ಗುರುಗಳ ಪಾದಪೂಜೆ ಜರುಗಿತು.