ಹಿರೇಸಿಂಗನಗುತ್ತಿ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ & ಮಹಾಯೋಗಿ ವೇಮನ ದೇವಸ್ಥಾನ ಉದ್ಘಾಟನೆ,
ಬಾಗಲಕೋಟೆ
ಜಿಲ್ಲೆಯ ಇಳಕಲ್ ತಾಲೂಕಿನ ಹಿರೇ ಸಿಂಗನಗುತ್ತಿ ಗ್ರಾಮದಲ್ಲಿ ಶ್ರೀ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾ ಯೋಗಿ ವೇಮನ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮತ್ತು ಐದು ದಿನಗಳ ಪ್ರವಚನ ಹಾಗೂ ಪೂಜಾ ಕಾರ್ಯಕ್ರಮ ನೆರವೇರಲಿದೆ.
ದಿನಾಂಕ 9, 8 ,2024ರಂದು ಪೂಜಾ ಕಾರ್ಯಕ್ರಮಗಳೊಂದಿಗೆ
ಹೇಮರೆಡ್ಡಿ ಮಲ್ಲಮ್ಮ& ವೇಮನರ ದೇವಸ್ಥಾನಗಳ ಉದ್ಘಾಟನೆ ಹಾಗೂ ಧರ್ಮ ಸಭೆ ಸಮಾರಂಭ ಡಾ. ಎಸ್ ಎನ್ ಅಮಾತ್ಯಪ್ಪನವರ ವೇದಿಕೆಯಲ್ಲಿ ನಡೆಯಲಿದೆ.
ಈ ಧರ್ಮಸಭೆಯಲ್ಲಿ ದಿವ್ಯ ಸಾನಿಧ್ಯವನ್ನು ರೆಡ್ಡಿ ಗುರು ಪೀಠದ ಪೂಜ್ಯರಾದ ಶ್ರೀ ವೇಮಾನಂದ ಮಹಾಸ್ವಾಮಿಗಳು, ಆಳಂದ ನಂದವಾಡಗಿಯ ಶ್ರೀ ಮಹಾಂತ ಲಿಂಗಶಿವಾಚಾರ್ಯರು, ಚಿತ್ತರಗಿ ಇಳಕಲ್ ನ ಗುರುಮಹಾಂತ ಸ್ವಾಮಿಗಳು, ಗುಡದೂರಿನ ನೀಲಕಂಠಯ್ಯ ತಾತನವರು, ಅಂಕಲಿಮಠದ ವೀರಭದ್ರ ಮಹಾಸ್ವಾಮಿಗಳು, ಸಜ್ಜಲಗುಡ್ಡದ ದೊಡ್ಡಬಸವಾರ್ಯ ತಾತನವರು, ಸಿದ್ದ ಬಸವ ಕಬಿರಾನಂದ ಸ್ವಾಮಿಗಳು ಎಲ್ಲ ಪೂಜ್ಯರು ದಿವ್ಯ ಸಾನಿಧ್ಯವನ್ನು ಅಲಂಕರಿಸುವವರಿದ್ದಾರೆ.
ಈ ಕಾರ್ಯಕ್ರಮದ ಗೌರವ ಅಧ್ಯಕ್ಷತೆಯನ್ನು ಮಾಜಿ ಸಚಿವ ಎಸ್ ಆರ್ ಪಾಟೀಲ ಅಧ್ಯಕ್ಷತೆಯನ್ನು ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ವಹಿಸಿಕೊಳ್ಳಲಿದ್ದಾರೆ.
ಉದ್ಘಾಟಕರಾಗಿ ಸಚಿವರುಗಳಾದ ಎಚ್ ಕೆ ಪಾಟೀಲ್, ರಾಮಲಿಂಗ ರೆಡ್ಡಿ, ಶರಣಬಸಪ್ಪ ದರ್ಶನಾಪುರ್, ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪುರ, ವೇಮನ ಮೂರ್ತಿ ಅನಾವರಣಗೊಳಿಸಲಿರುವ ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ಹಾಗೂ ವಿವಿಧ ಕ್ಷೇತ್ರದ ಶಾಸಕರುಗಳು ಮಾಜಿ ಶಾಸಕರುಗಳು ಸಚಿವರು ಮಾಜಿ ಶಾಸಕ ಸಚಿವರು ಆಗಮಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಹಾಗೂ ಧರ್ಮಸಭೆಗೆ ರಾಜ್ಯದ ಮೂಲೆ ಮೂಲೆಗಳಿಂದ ಸಾರ್ವಜನಿಕರು ಆಗಮಿಸಲಿದ್ದಾರೆ ಹೀಗಾಗಿ ಈ ಭವ್ಯ ಕಾರ್ಯಕ್ರಮಕ್ಕೆ ತಾಲೂಕಿನ ಸರ್ವಧರ್ಮದ ಸಾರ್ವಜನಿಕರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹಿರೇ ಸಿಂಗನಗುತ್ತಿ ಗ್ರಾಮದ ಗುರುಹಿರಿಯರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.