This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsPolitics NewsState News

ಮಲ್ಟಿ ಬ್ರ್ಯಾಂಡ್ ಕೃಷಿ ಉತ್ಪನ್ನಗಳ ಮಳಿಗೆ ಪ್ರಾರಂಭೋತ್ಸವ

ಮಲ್ಟಿ ಬ್ರ್ಯಾಂಡ್ ಕೃಷಿ ಉತ್ಪನ್ನಗಳ ಮಳಿಗೆ ಪ್ರಾರಂಭೋತ್ಸವ

ಬಾಗಲಕೋಟೆ

ಜಮಖಂಡಿ ನಗರದಲ್ಲಿ ನೂತನವಾಗಿ ಪ್ರಾರಂಭಿಸಲಾದ ಮಲ್ಟಿ ಬ್ರ್ಯಾಂಡ್ ಕೃಷಿ ಉತ್ಪನ್ನಗಳ ಮಾರಟ ಮಳಿಗೆಗೆ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಬುಧವಾರ ಚಾಲನೆ ನೀಡಿದರು.

ಕೃಷಿ ಉತ್ಪನ್ನಗಳ ಮಳಿಗೆ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಾರ್ವಜನಿಕರಿಗೆ ದಿನ ನಿತ್ಯ ಬಳಕೆಗೆ ಬೇಕಾಗುವ ವಸ್ತುಗಳು ಒಂದೇ ಕಡೆ ಸಿಗಲು ಮಾಡಿರುವಂತ ಸೂಪರ್ ಮಾರ್ಕೆಟ್ ತರಹ ಕೃಷಿ ಮಾಡುವಂತ ರೈತನಿಗೆ ಒಂದು ಕಡೆ ಹೋದರೆ ತಮಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಔಷಧಿ ಸೇರಿದಂತೆ ಇತರೆ ವಸ್ತುಗಳು ಸಿಗುವ ಕಾರ್ಪೋರೇಟ ಕಂಪನಿಯವರು ಮಾಡಿದ್ದಾರೆ ಎಂದರು.

ಈ ತರಹದ ಮಳಿಗೆಯನ್ನು ರಾಜ್ಯದಲ್ಲಿ 150ಕ್ಕೆಊ ಹೆಚ್ಚು ತೆರೆಯಲಿದ್ದಾರೆ. ಅವರ ಈ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಅಲ್ಲದೇ ರೈತರಿಗೆ ವಿಡಿಯೋ ಕಾನ್ಪರೇನ್ಸ್ ಮೂಲಕ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಇದೊಂದು ಉತ್ತಮ ಕಾರ್ಯವಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು. ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ಉಧ್ಯಮಿ ಸಂಗಮೇಶ ನಿರಾಣಿ, ಕೃಷಿ ಆರ್‍ಗಾನಿಕ್ ಪಾರ್ಮನ ಹೆಚ್ಚುವರಿ ನಿರ್ದೇಶಕ ವೆಂಕಟರಮನ ರೆಡ್ಡಿ, ಮಹಾಲಕ್ಷ್ಮೀ ಟ್ರೇಡಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಬಾಗೇವಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

*ಸಮಗ್ರ ಕೃಷಿ ತಾಕುಗಳಿಗೆ ಸಚಿವರು ಭೇಟಿ, ವೀಕ್ಷಣೆ*
—————————————–
ಕಾರ್ಯಕ್ರಮದ ಪೂರ್ವದಲ್ಲಿ ರಬಕವಿ-ಬನಹಟ್ಟಿ ಹಾಗೂ ಜಮಖಂಡಿ ತಾಲೂಕಿನ ವಿವಿಧ ಸಮಗ್ರ ಕೃಷಿ ಮತ್ತು ಸಾವಯವ ಕೃಷಿ ಪದ್ದತಿ ಅಳವಡಿಕೆ ತಾಕುಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿ ವೀಕ್ಷಿಸಿದರು. ಜಗದಾಳದಲ್ಲಿ ಸದಾಶಿವ ಮಲ್ಲಪ್ಪ ಬಂಗಿ ಅವರ ಜಮೀನಿನಲ್ಲಿ ಸಮಗ್ರ ಕೃಷಿ ಮತ್ತು ಸಾವಯವ ಕೃಷಿ ಪದ್ದತಿಯಿಂದ ಅಳವಡಿಸಿರುವ ವಿವಿಧ ಘಟಕಗಳನ್ನು ವೀಕ್ಷಣೆ ಮಾಡಿದರು. ಹೊಸೂರಿನ ಮಹಾದೇವ ಚೋಳ ಅವರ ಜಮೀನಿನಲ್ಲಿ ಅವಳಡಿಸಿದ ವಿವಿಧ ಘಟಕಗಳಾದ 30 ಎಕರೆಯಲ್ಲಿ ಕಬ್ಬು ಬೆಳೆ, ಅರಿಶಿಣ, ಬಾಳೆ, ಬಯೋಡೈಜೆಸ್ಟರ, ಉಪ ಕಸಬುಗಳಾದ ಹೈನುಗಾರಿಕೆ ವಿಶಿಷ್ಟವಾಗಿದ್ದು, ಆಧುನಿಕ ಪದ್ದತಿಗಳನ್ನು ಅಳವಡಿಸಿರುವದನ್ನು ವೀಕ್ಷಿಸಿದರು.

ರಬಕವಿಯಲ್ಲಿ ಅಲ್ಲಮಬ್ರಭು ಎಂ. ನಾಶಿ ಅವರು ನಾಶಿ ಫುಡ್ ಪ್ರೋಡೆಕ್ಟ ಹೆಸರಿನಲ್ಲಿ 4 ತರಹದ ಪೊಟೆಟೋ ಚೀಪ್ಸ್, ಕುರುಕುರೆ, ನ್ಯಾಮಕಿನ್ಸ್, ಪಾಪಡಿ, ಘಾತಿ, ಸೇವ್, ಖಾರಾಬುಂದಿ, ಮಸಾಲಾ ಶೇಂಗಾ ಉತ್ಪನ್ನಗಳನ್ನು ವೀಕ್ಷಿಸಿದರು. ಘಟಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಾಹಿತಿ ಪಡೆದರು. ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಯಾದ್ಯಂತ ಮಾರುಕಟ್ಟೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ವಿವಿಧ ಜಿಲ್ಲೆಗಳಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಫಲಾನುಭವಿ ಅಲ್ಲಮಪ್ರಭು ನಾಶಿ ಹೇಳಿದರು.

ವಿವಿಧ ತಾಕುಗಳ ಭೇಟಿ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ಜಮಖಂಡಿ ಕೃಷಿ ಇಲಾಖೆಯ ಉಪನಿರ್ದೇಶಕ ಕೆ.ಎಸ್.ಅಗಸನಾಳ, ಕೃಷಿ ಸಹಾಯಕ ನಿದೇಶಕರಾದ ಎಸ್.ಬಿ.ಅಳ್ಳೊಳ್ಳಿ, ಪಾಂಡಪ್ಪ ರಾಠೋಡ, ಕೃಷಿ ಅಧಿಕಾರಿಗಳಾದ ಬಸವರಾಜ ಮಾಳೆ, ಎಸ್.ಎಂ.ಬಿರಾದಾರ ಸೇರಿದಂತೆ ಇತರರು ಇದ್ದರು.

Nimma Suddi
";