This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ನೂತನ ಸಮುದಾಯ ಭವನ ಲೋಕಾರ್ಪಣೆ

ನೂತನ ಸಮುದಾಯ ಭವನ ಲೋಕಾರ್ಪಣೆ

ಬಾಗಲಕೋಟೆ

ಗುಡೂರಲ್ಲಿ ಬನಶಂಕರಿ ದೇವಿ ನೂತನ ಸಮೂದಾಯ ಭವನದ ಲೋಕಾರ್ಪಣೆಯ ಪ್ರಯುಕ್ತ ಶ್ರೀ ಬನಶಂಕರಿ ದೇವಿಗೆ ಅರ್ಪಿಸುವ ಬೆಳ್ಳಿ ಪ್ರಭಾವಳಿಯ ಮೆರವಣಿಗೆಯೂ ಬಹಳ ವಿಜೃಂಭಣೆಯಿಂದ ಜರುಗಿತು.

ಗುಡೂರ ಎಸ್ ಸಿ ಗ್ರಾಮದ ಶ್ರೀ ಬನಶಂಕರಿ ದೇವಿ ದೇವಾಲಯದಲ್ಲಿ ನೂತನ ಸಮುದಾಯ ಲೋಕಾರ್ಪಣೆ ಅಂಗವಾಗಿ ಎಸ್ ಎಸ್ ಕೆ ಸಮಾಜದ ಹಿರಿಯರಾದ ಶ್ರೀಯುತ ದೇವೇಂದ್ರಸಾ ಜಂಪಣ್ಣಸಾ ಜಿತೂರಿ ಹಾಗೂ ಕುಟುಂಬದ ಸದಸ್ಯರು ಶ್ರೀ ಬನಶಂಕರಿ ದೇವಿಗೆ ಬೆಳ್ಳಿ ಪ್ರಭಾವಳಿ ಕಾಣಿಕೆ ನೀಡಿ ತಮ್ಮ ಭಕ್ತಿ ಸಮರ್ಪಿಸಿದರು.

ಶನಿವಾರ ಸಂಜೆ ವಿಶೇಷ ಪೂಜಾ ಕಾರ್ಯಗಳ ನಂತರ ಜಿತೂರಿ ಮನೆತನದಿಂದ ಹೊರಟ ಬೆಳ್ಳಿ ಪ್ರಭಾವಳಿಯ ಮೆರವಣಿಗೆಯೂ ವಿಜಯಮಹಾಂತೇಶ ಮಠ, ಪ್ಯಾಟಿ ಬಸವೇಶ್ವರ ದೇವಾಲಯ, ವಿಜಯಮಹಾಂತೇಶ ಬ್ಯಾಂಕ್, ನಾಗಪ್ಪನ ಪಾದಗಟ್ಟಿ, ಹುಲ್ಲೇಶ್ವರ ದೇವಾಲಯ, ಕಾಯಿಪಲ್ಯ ಮಾರುಕಟ್ಟೆ, ರಾಮಪ್ಪನ ಮಸೀದಿ, ಮಾಬೂಸಾಬ ಕಟ್ಟಿಯ ಮಾರ್ಗವಾಗಿ ಶ್ರೀ ಬನಶಂಕರಿ ದೇವಿ ದೇವಾಲಯ ತಲುಪಿತು.

ಮೆರವಣಿಗೆ ನಂತರ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು., ಬಾಜಾ ಭಜಂತ್ರಿ., ಆರತಿ ಹಾಗೂ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಗೆ ಶೋಭೆ ತಂದರು. ಮೆರವಣಿಗೆಯಲ್ಲಿ ಶ್ರೀ ಬನಶಂಕರಿದೇವಿ ದೇವಾಂಗ ಕ್ಷೇಮಾಭಿವೃದ್ಧಿ ಸಂಘ., ಶ್ರೀ ದೇವಲ ಮಹರ್ಷಿ ತರುಣ ಸಂಘ., ಬನಶ್ರೀ ಮಹಿಳಾ ಸಂಘಟನೆಯ ಕಾರ್ಯಕರ್ತರು, ಹಿರಿಯರು ಮಹಿಳೆಯರು ಭಕ್ತರು ಹಾಗೂ ಇತರರಿದ್ದರು.

";