This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

National NewsState News

ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ಸಂದೇಶ: ಪಾನ್ ಕಾರ್ಡ್​ಗೆ ಆಧಾರ್ ಲಿಂಕ್; ಮೇ 31ಕ್ಕೆ ಡೆಡ್​ಲೈನ್

ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ಸಂದೇಶ: ಪಾನ್ ಕಾರ್ಡ್​ಗೆ ಆಧಾರ್ ಲಿಂಕ್; ಮೇ 31ಕ್ಕೆ ಡೆಡ್​ಲೈನ್

ನವದೆಹಲಿ: ಪ್ಯಾನ್ ಕಾರ್ಡ್​ಗೆ ಆಧಾರ್ ಅನ್ನು ಲಿಂಕ್ ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಹೇಳುತ್ತಲೇ ಬಂದಿದೆ.

ಮೇ 31ಕ್ಕೆ ಡೆಡ್​ಲೈನ್ ಇದ್ದು, ಅಷ್ಟರೊಳಗೆ ಲಿಂಕ್ ಮಾಡದೇ ಹೋದರೆ ಹೆಚ್ಚಿನ ಟಿಡಿಎಸ್ ಕಟ್ಟಬೇಕಾದೀತು. ಐಟಿ ಇಲಾಖೆ ಇಂದು ಎಕ್ಸ್​ನಲ್ಲಿ ಪೋಸ್ಟ್ ಹಾಕಿದ್ದು, ಈ ಸಂಬಂಧ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಆಧಾರ್​ಗೆ ಲಿಂಕ್ ಆಗದ ಪ್ಯಾನ್ ನಂಬರ್ ನಿಷ್ಕ್ರಿಯವಾಗಿರುತ್ತದೆ. ಅಂದರೆ ಇದನ್ನು ಬಳಸಲು ಆಗುವುದಿಲ್ಲ. ಆಧಾರ್​ಗೆ ಲಿಂಕ್ ಮಾಡಿದಲ್ಲಿ ಮಾತ್ರವೇ ಪ್ಯಾನ್ ಬಳಕೆಯೋಗ್ಯ ಎನಿಸುತ್ತದೆ.

ಈಗ ಆಧಾರ್​ಗೆ ಪ್ಯಾನ್ ಅನ್ನು ಲಿಂಕ್ ಮಾಡಲು ಶುಲ್ಕ ಪಾವತಿಸಬೇಕಾಗುತ್ತದೆ. ಉಚಿತವಾಗಿ ಮಾಡಲು ಇದ್ದ ಡೆಡ್​ಲೈನ್ ಬಹಳ ದಿನಗಳ ಹಿಂದೆಯೇ ಮುಗಿದುಹೋಗಿದೆ. ಈಗ ಶುಲ್ಕ ಪಾವತಿಸಿ ಆಧಾರ್​ಗೆ ಲಿಂಕ್ ಮಾಡುವ ಮೂಲಕ ಪ್ಯಾನ್ ಕಾರ್ಡ್ ಅನ್ನು ಸಕ್ರಿಯಗೊಳಿಸಬಹುದು.

ಮೇ 31ರೊಳಗೆ ನಿಮ್ಮ ಪ್ಯಾನ್ ಅನ್ನು ಆಧಾರ್ ಜೊತೆ ಜೋಡಿಸಿದರೆ ಐಟಿ ಸೆಕ್ಷನ್ 206ಎಎ ಮತ್ತು 206ಸಿಸಿ ಅಡಿಯಲ್ಲಿ ಹೆಚ್ಚಿನ ಟ್ಯಾಕ್ಸ್ ಪಾವತಿಯನ್ನು ತಪ್ಪಿಸಬಹುದು.

Nimma Suddi
";