ದಾವಣಗೆರೆ: ಸೋಶಿಯಲ್ ಮಿಡಿಯಾ ಮತ್ತು ಡಿಜಿಟಲ್ ಮಾಧ್ಯಮ ಬಂದ ಮೇಲೆ ಫೇಕ್ ನ್ಯೂಸ್‌ಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಬೇಸರ ವ್ಯಕ್ತಪಡಿಸಿದರು.
ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ೩೮ನೇ ಸಮ್ಮೇಳನದಲ್ಲಿ ಮಾತನಾಡಿದ ಅವರು, ಗುಣಮಟ್ಟದ ಸುದ್ದಿ ನೀಡಿದರೆ ಜನರು ಖಂಡಿತ ನಮ್ಮನ್ನು ಸ್ವೀಕರಿಸುತ್ತಾರೆ. ಮುದ್ರಣ ಮಾಧ್ಯಮಗಳಲ್ಲಿ ವಿದೇಶಗಳು ವಿವಿಧ ಪತ್ರಿಕೆಗಳು ಮುಚ್ಚುತ್ತಿವೆ, ಆದರೆ ಕರ್ನಾಟಕದಲ್ಲಿ ಹೊಸ ಹೊಸ ಪತ್ರಿಕೆ ಹುಟ್ಟಿಕೊಳ್ಳುತ್ತಿವೆ. ಆ ಪತ್ರಿಕೆಗಳು ಗುಣಮಟ್ಟ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಕೋವಿಡ್ ನಂತರ ಮುದ್ರಣ ಮಾಧÀ್ಯಮಗಳ ಕಥೆ ಮುಗಿತು, ಡಿಜಿಟಲ್, ಯೂಟ್ಯೂಬ್ ಚಾನಲ್ ಎಂದು ಆತಂಕ ಮೂಡಿತ್ತು. ಆದರೆ ಕೋವಿಡ್ ಸವಾಲು ಎದುರಿಸಿ ವಸ್ತುನಿಷ್ಟ ವರದಿ ನೀಡಿದ್ದರಿಂದ ತನ್ನ ಅಸ್ತಿತ್ವ ಉಳಿಸಿಕೊಂಡಿವೆ ಎಂದರು.
ಜಿಲ್ಲಾ ಪತ್ರಕರ್ತರ ಒಕ್ಕೂಟವು ಶಿವಾನಂದ ಅವರು ಬಂದ ಮೇಲೆ ತುಂಬಾ ಕ್ರಿಯಾಶೀಲವಾಯಿತು. ಪತ್ರಕರ್ತರಿಗೆ ಆರ್ಥಿಕ, ಸೌಕರ್ಯ ಕೊಡುವಲ್ಲಿಯೂ ಸಹಕಾರಿಯಾಯಿತು.
ಬಸ್ ಪಾಸ್ ವ್ಯವಸ್ಥೆ, ಕುಟುಂಬ ವರ್ಗದವರಿಗೆ ವಿದ್ಯಾಭ್ಯಾಸಕ್ಕೂ ಬಹಳ ಅನುಕೂಲವಾಯಿತು ಎಂದು ಹೇಳಿದರು.