This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Education NewsLocal NewsState News

2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ದೇಶ: ಎಂ. ಸಂಕರನ್

2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ದೇಶ: ಎಂ. ಸಂಕರನ್

ಬಾಗಲಕೋಟೆ;

ಭಾರತ ದೇಶವು ಜಾಗತಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪದೊಂದಿಗೆ ಧಾಪುಗಾಲಿಡುತ್ತಿದ್ದು 2047ಕ್ಕೆ ಭಾರತ ಸರ್ವಾಂಗಿಣ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಬೆಂಗಳೂರಿನ ಇಸ್ರೋದ ಯು.ಆರ್.ರಾವ್ ಸೆಟ್‌ಲೈಟ್ ಸೆಂಟರ್‌ನ ನಿರ್ದೇಶಕರಾದ ಎಮ್. ಸಂಕರನ್ ಹೇಳಿದರು.

ಅವರು ಬಾಗಲಕೋಟೆಯ ಪ್ರತಿಷ್ಠಿತ ಬಿ.ವ್ಹಿ,ವ್ಹಿ,ಸಂಘದ ಬಸವೇಶ್ವರ ಇಂಜನಿಯರಿಂಗ ಕಾಲೇಜಿನ ನೂತನ ಸಭಾಭವನದಲ್ಲಿ ಶನಿವಾರ ನಡೆದ 13ನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು.

ಜೀವನದ ಶ್ರೇಷ್ಠ ಮೌಲ್ಯಗಳನ್ನು ಅರಳಿಸುವ ಸಮಾಜದ ವಾರಸುದಾರರಾಗಿ ಪದವೀಧರರು ವಿಶಾಲ ಮತ್ತು ಆಳವಾದ ಜ್ಞಾನವನ್ನು ಬೆಳಿಸಿಕೊಳ್ಳಬೇಕು, ಹೊಸ ಜಗತ್ತಿಗೆ
ಪಾದಾರ್ಪಣೆ ಮಾಡುತ್ತಿರುವ ಸಂಧರ್ಭದಲ್ಲಿ ವೃತ್ತಿಪರ ಜ್ಞಾನ ಮತ್ತು ವೈಯಕ್ತಿಕ ಸ್ವಭಾವಗಳಿಂದ ವಿಶ್ವಾಸ ಮತ್ತು ಗೌರವ ಗಳಿಸಿಕೊಳ್ಳಿರಿ, ಜೀವನದಲ್ಲಿ ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ಸೃಜನ ಶೀಲತೆಯಿಂದ ಉತ್ಕೃಷ್ಟತೆಯನ್ನು ಸಾಧಿಸಿರಿ ಎಂದ ಅವರು
ವಿಶ್ವವು ಇಂದು ಜಾಗತಿಕ ಹಿಂಜರಿಕೆ, ಕರೋನಾ ಪ್ರಭಾವ, ನೈಸರ್ಗಿಕ ಸಂಪನ್ಮೂಲಗಳ ಬರಿದಾಗುವಿಕೆ, ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟಿ, ಭೂಮಿ ಮತ್ತು ಪರಿಸರವನ್ನು ಮುಂದಿನ ಪೀಳಿಗೆಯವರೆಗೆ ಸುರಕ್ಷಿತವಾಗಿ ತಲುಪಿಸುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಇನ್ನೂರ್ವ ಗೌರವಾನ್ವಿತ ಅತಿಥಿಗಳಾದ ಮೈಸೂರಿನ ಇನ್ಫೋಸಿಸ್ ಅಭಿವೃದ್ದಿ ಕೇಂದ್ರದ ಉಪಾಧ್ಯಕ್ಷ ಹಾಗೂ ಮುಖ್ಯಸ್ಥರಾದ ವಿನಾಯಕ ಪಿ ಹೆಗಡೆ ಮಾತನಾಡಿ ವೃತ್ತಿ ಜೀವನಕ್ಕೆ ಶಿಕ್ಷಣ ಭದ್ರ ಬುನಾದಿಯಾಗಿದ್ದು ವಿವಿಧ ಮೂಲಗಳಿಂದ ಪ್ರೇರಣೆಯನ್ನು ಪಡೆದುಕೊಂಡು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ, 30 ವರ್ಷಗಳ ಹಿಂದೆ ನೋಡಿದ ಬಾಗಲಕೋಟೆ ನಗರಕ್ಕೂ ಇವಾಗ ನೋಡುವ ಬಾಗಲಕೋಟೆ ತುಂಬಾನೆ ಬದಲಾವಣೆಯಾಗಿರುವಲ್ಲಿ ಬಿ.ವ್ಹಿ.ವ್ಹಿ, ಸಂಘದ ಪಾತ್ರ ದೊಡ್ಡದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಮಾತನಾಡಿದ ಬಿ.ವ್ಹಿ.ವ್ಹಿ, ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ, ಯುವ ವಿದ್ಯಾರ್ಥಿಗಳಾಗಿ ಪ್ರವೇಶ ಪಡೆದು ಉತ್ತಮ ಇಂಜನೀಯರ್ ಆಗಿ ಹೊರ ಬರುವುದು ಉತ್ತಮ ಬದಲಾವಣೆ. ಇದರೊಂದಿಗೆ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಹೊಸ ಸಂಶೋಧನೆ ಕಡೆಗೆ ಆಸಕ್ತಿ ಹೊಂದಿ ಇನ್ನೊಬ್ಬರಿಗೆ ಉದ್ಯೋಗ ನೀಡುವಂತೆ ಮತ್ತು ಸ್ವಾವಲಂಬಿಗಳಾಗುವಂತೆ ಬೆಳೆಯಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಮೊದಲ ಬಾರಿಗೆ ಐದು ವಿದ್ಯಾರ್ಥಿಗಳಿಗೆ ಬಿಇ (ಆನರ್ಸ) ಪದವಿಯನ್ನು ನೀಡಲಾಯಿತು. 2021-22ನೇ ಸಾಲಿನಲ್ಲಿ 729 ಬಿಇ ಪದವಿದರಿಗೆ 98 ಎಂಟೆಕ್ ಪದವಿದರಿಗೆ 2022-23ನೇ ಸಾಲಿನ 515 ವಿದ್ಯಾರ್ಥಿಗಳಿಗೆ ಬಿಇ ಪದವಿದರಿಗೆ ಹೀಗೆ ಒಟ್ಟು 1342 ಪದವಿದರರಿಗೆ ಪದವಿ ಪ್ರದಾನ ಮಾಡಲಾಯಿತು.

ಬವಿವ ಸಂಘದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಡಾ. ಆರ್. ಎನ್. ಹೆರಕಲ್ ಸ್ವಾಗತಿಸಿದರು. ಪ್ರಾಚಾರ್ಯರಾದ ಡಾ. ಎಸ್. ಎಸ್. ಇಂಜಗನೇರಿ ಅವರು ಅತಿಥಿಗಳನ್ನು ಪರಿಚಯಿಸಿ ಕಾಲೇಜಿನ ಸಮಗ್ರ ಅಭಿವೃದ್ಧಿಯ ಕುರಿತು ಪ್ರಾಸ್ತಾವಿಕ ಮಾತುಗಳನ್ನು ಆಡಿದರು.

ಡಾ. ರೇವಣ್ಣ ಬೆಣ್ಣೂರ ಹಾಗೂ ಶ್ರೀ ಪ್ರಸಾದ ಉಮರ್ಜಿ ಇವರ ಸಹಯೋಗದಲ್ಲಿ ಬಿಇಸಿ ಸ್ವರ ತಂಡದಿಂದ ಸ್ವಾಗತ ಗೀತೆಯನ್ನು ಪ್ರಸ್ತುತಪಡಿಸಲಾಯಿತು. ಪರೀಕ್ಷಾ ನಿಯಂತ್ರಾಧಿಕಾರಿಗಾಳದ ಡಾ. ಕೆ ಚಂದ್ರಶೇಖರ ವಂದನಾರ್ಪಣೆ ಮಾಡಿದರು.ಡಾ. ಎಸ್,ಜಿ ಕಂಬಾಳಿಮಠ, ಮತ್ತು ಡಾ. ವಿಜಯಲಕ್ಷ್ಮೀ ಜಿಗಜಿನ್ನಿ ಅವರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಬವಿವ ಸಂಘದ ವಿವಿಧ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರುಗಳು, ಸದಸ್ಯರಗಳು, ವಿವಿಧ ಕಾಲೇಜುಗಳ ಪ್ರಾಚಾರ್ಯರುಗಳು ಅಧಿಕಾರಿಗಳು ಮತ್ತು ಪದವಿ ಪಡೆದ ವಿದ್ಯಾರ್ಥಿಗಳ ಪಾಲಕರುಗಳು ಉಪಸ್ಥಿತರಿದ್ದರು.

Nimma Suddi
";