This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Education NewsLocal NewsState News

ಭಾರತ ಜಗತ್ತಿನ ಅಧ್ಯಾತ್ಮದ ಚುಂಬಕ ಶಕ್ತಿ

ಭಾರತ ಜಗತ್ತಿನ ಅಧ್ಯಾತ್ಮದ ಚುಂಬಕ ಶಕ್ತಿ

ಲಿಂಗೈಕ್ಯ ಪ್ರಭುರಾಜೇಂದ್ರ ಸ್ವಾಮೀಜಿ ಜನ್ಮಶತಮಾನೋತ್ಸವ, ಬಸವ ಪುರಾಣ ಆರಂಭ

ಅಮೀನಗಡ

ಜಗತ್ತು ಇಂದಿಗೂ ಭಾರತದತ್ತ ನೋಡುತ್ತಿರುವುದಕ್ಕೆ ಕಾರಣ ಇಲ್ಲಿನ ಅಧ್ಯಾತ್ಮಕ ಚುಂಬಕ ಶಕ್ತಿ ಆಗಿದ್ದು, ದೇಶ ಸಾಂಸ್ಕೃತಿಕ ಹಾಗೂ ಅಧ್ಮಾತ್ಮಿಕವಾಗಿ ಶ್ರೀಮಂತ ರಾಷ್ಟçವಾಗಿದೆ ಎಂದು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿನ ಪ್ರಭುಶಂಕರೇಶ್ವರ ಅನುಭವ ಮಂಟಪದಲ್ಲಿ ಲಿಂ.ಪ್ರಭುರಾಜೇAದ್ರ ಸ್ವಾಮೀಜಿಗಳ ಜನ್ಮಶತಮಾನೋತ್ಸವ, ಎಸ್‌ವಿವಿ ಸಂಘದ ಅಮೃತ ಮಹೋತ್ಸವ, ಪ್ರಭುಶಂಕರೇಶ್ವರ ಅನುಭವ ಮಂಟಪ ಲೋಕಾರ್ಪಣೆ ನಿಮಿತ್ತ ಹಮ್ಮಿಕೊಂಡ ಬಸವ ಪುರಾಣ ಆರಂಭೋತ್ಸವದಲ್ಲಿ ಅವರು ಮಾತನಾಡಿದರು.

ವೈಜ್ಞಾನಿಕವಾಗಿ ಅಭೂತಪೂರ್ವ ಸಂಶೋಧನೆಗಳಾಗುತ್ತಿವೆ. ಅಂತಹ ಪ್ರಾಕೃತಿಕ ಸತ್ಯಗಳನ್ನು ಸಂಶೋಧನೆಗೂ ಮೊದಲೇ ತಮ್ಮ ಅನುಷ್ಠಾನ, ದಿವ್ಯದೃಷ್ಠಿಯಿಂದ ಕಂಡವರು ಭಾರತೀಯ ಸಂತ, ಮಹಾತ್ಮರು ಎಂಬುದು ಹೆಮ್ಮೆಯ ಸಂಗತಿ. ದೇಶದ ಪ್ರತಿ ವ್ಯಕ್ತಿಯ ನರನಾಡಿಯಲ್ಲಿ ಧರ್ಮ, ಅಧ್ಯಾತ್ಮದ ರಕ್ತ ಹರಿಯುತ್ತಿದೆ. ಅನ್ಯ ಧರ್ಮದಂತೆ ನಿರ್ದಿಷ್ಟ ಸಂದರ್ಭದಲ್ಲಿ ಮಾತ್ರ ಧರ್ಮದ ಆಚರಣೆಯಿರದೆ ದಿನದ ಪ್ರತಿ ನಿಮಿಷವೂ ದೇವರು ನಮ್ಮನ್ನು ಬಿಟ್ಟು ಅಗಲಿಲ್ಲ ಎಂಬ ಸಂಗತಿಯನ್ನು ಎಲ್ಲರೂ ಅರಿಯಬೇಕಿದೆ ಎಂದರು.

ಭಕ್ತ ಮತ್ತು ಭಗವಂತನ ಮಧ್ಯೆ ನಿಕಟ ಸಂಬAಧವಿದೆ. ಇಂತಹ ದೇಶದಲ್ಲಿ ಬದುಕಿರುವ ನಾವೇ ಧನ್ಯರು. ಬಸವೇಶ್ವರರ ದಯವೇ ಧರ್ಮದ ಮೂಲ ಎಂಬ ವಾಣಿಯನ್ನು ಎಲ್ಲರೂ ಅರಿಯಬೇಕಿದೆ. ರಾಜ್ಯದಲ್ಲಿ ವೀರಶೈವ ಮಠಗಳು ಅಭೂತಪೂರ್ವ ಸೇವೆ ಸಲ್ಲಿಸುತ್ತಿದೆ. ಇಡೀ ಮಠದ ಆಸ್ತಿಯನ್ನು ಸಾರ್ವಜನಿಕರ ಶ್ರೇಯಸ್ಸಿಗಾಗಿ ಧಾರೆ ಎರೆದಿವೆ. ಅಂತಹ ಪರಂಪರೆ ಇಲ್ಲಿನ ಪ್ರಭುಶಂಕರೇಶ್ವರ ಗಚ್ಚಿನಮಠಕ್ಕೆ ಇದೆ ಎಂದು ಹೇಳಿದರು.

ಬಸವ ಪುರಾಣ ಉದ್ಘಾಟಿಸಿದ ಮುಂಡರಗಿಯಯ ಅನ್ನದಾನೇಶ್ವರ ಸಂಸ್ಥಾನಮಠದ ಡಾ.ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿದರು. ಸ್ಥಳೀಯ ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇAದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಪ್ರವಚನ ಆರಂಭಿಸಿದರು.

ಸಿಂಧಗಿ ಸಾರಂಗಮಠದ ಪ್ರಭುಸಾರಂಗ ಶಿವಚಾರ್ಯರು, ಮುನವಳ್ಳಿಯ ಮುರಘೇಂದ್ರ ಶ್ರೀ, ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಕೆಲೂರ-ಶಿವಗಂಗಾ ಕ್ಷೇತ್ರದ ಡಾ.ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.

ಕಮತಗಿಯ ಹೊಳೆ ಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮೀಜಿ, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಖೇಡಗಿಯ ಶಿವಬಸವರಾಜೇಂದ್ರ ಸ್ವಾಮೀಜಿ, ಎಸ್‌ಐ ಜ್ಯೋತಿ ವಾಲಿಕಾರ, ಪಪಂ ಮುಖ್ಯಾಧಿಕಾರಿ ಸುರೇಶ ಪಾಟೀಲ, ಮಾಜಿ ಶಾಸಕ ರಾಜಶೇಖರ ಶೀಲವಂತರ, ಹೆಸ್ಕಾಂ ಶಾಖಾಧಿಕಾರಿ ಗೋಪಾಲ ಪೂಜಾರಿ, ಎಸ್‌ವಿವಿ ಸಂಘದ ಚೇರ್‌ಮನ್ ಐ.ಎಸ್.ಲಿಂಗದಾಳ, ಸಂತೋಷ ಐಹೊಳ್ಳಿ, ವಿಜಯಕುಮಾರ ಕನ್ನೂರ, ಶಿವಕುಮಾರ ಹಿರೇಮಠ, ಜಂಬಣ್ಣ ಚಿನಿವಾಲರ, ಉಪಪ್ರಾಚಾರ್ಯ ಆರ್.ಜಿ.ಸನ್ನಿ, ವಿ.ಯು.ಕಂಬಾಳಿಮಠ ಸೇರಿದಂತೆ ಎಸ್‌ವಿವಿ ಸಂಘದ ನಾನಾ ಶಾಲೆ, ಕಾಲೇಜ್ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ ಇದ್ದರು.

 

Nimma Suddi
";