This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Education NewsLocal NewsNational NewsState News

ಭಾರತದ ಹೆಮ್ಮೆಯ ಪುತ್ರ ಡಾ.ಬಿ.ಆರ್.ಅಂಬೇಡ್ಕರ

ಭಾರತದ ಹೆಮ್ಮೆಯ ಪುತ್ರ ಡಾ.ಬಿ.ಆರ್.ಅಂಬೇಡ್ಕರ

ಬಾಗಲಕೋಟೆ:

ದೇಶಕ್ಕೆ ಸಂವಿಧಾನ ರಚಿಸುವ ಮೂಲಕ ಎಲ್ಲರೂ ಸಮಾನರಾಗಿ, ಘನತೆಯಿಂದ ಬದುಕುದಂತೆ ಮಾಡಿದ ಮಹಾನ ಮಾನತವಾದಿ, ಹೆಮ್ಮೆಯ ಪುತ್ರ ಡಾ.ಬಾಬಾ ಸಾಹೇಬ ಅಂಬೇಡ್ಕರ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿದ ಅವರು ನಾವೇಲ್ಲರೂ ಕೂಡಾ ಅಂಬೇಡ್ಕರ ಹಾಕಿಕೊಟ್ಟ ದಾರಿ, ಕನಸು ಹಾಗೂ ಅವರ ಅಶೋತ್ತರಗಳನ್ನು ಇಡೇರಿಸುವತ್ತ ಸಾಗಬೇಕಿದೆ ಎಂದರು.

ಅಂಬೇಡ್ಕರ ಹುಟ್ಟಿದ ದಿನವಾದ ಎಪ್ರೀಲ್ ೧೪ನ್ನು ಬುದ್ದವಂತರ ದಿನವನ್ನಾಗಿ ಆಚರಣೆ ಮಾಡುತ್ತಿದೆ. ಜ್ಞಾನದ ಬದಲಿಂದ ಅಜ್ಞಾನದ ಕೇಡು ನೋಡಯ್ಯ ಎಂಬ ಬಸವಣ್ಣನವರ ವಚನದಂತೆ ಅವಮಾನಗಳನ್ನು ಅನುಭವಿಸಿದಾಗ ಮಾತ್ರ ಮುಂದೆ ಸನ್ಮಾರ್ಗವನ್ನು ಹೊಂದಲು ಸಾದ್ಯವಾಗುತ್ತದೆ. ಶತಮಾನದ ಹಿಂದೆ ಅಂಬೇಡ್ಕರ ಸಾಕಷ್ಟು ತೊಂದರೆ, ಅವಮಾನಗಳನ್ನು ಅನುಭವಿಸಿ ಮುಂದೆ ಬಂದಿದ್ದಾರೆ. ಅವರು ನಡೆದು ಬಂದ ಹಾದಿಯಲ್ಲಿ ಹಾಗೂ ಅವರ ಮಾರ್ಗದರ್ಶನ, ತತ್ವ ಸಿದ್ದಾಂತ ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಸ್ವಾರ್ಥಕ ಪಡಿಸಿಕೊಳ್ಳಬೇಕು ಎಂದರು.

ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಅದೇ ರೀತಿ ಮನುಷ್ಯರ ದೃಷ್ಟಿಯಲ್ಲಿಯೂ ಎಲ್ಲರೂ ಸಮಾನರಾಗಬೇಕಿದೆ. ಸುಂದರ ಸಮಾಜ ಕಟ್ಟುವಲ್ಲಿ ಅವರ ಕನಸು ನನಸು ಮಾಡುವ ಮೂಲಕ ಆದರ್ಶ ಸಮಾಜ ನಿರ್ಮಾಣ ಮಾಡಬೇಕು. ಯಾರು ಶ್ರೇಷ್ಠ, ಕನಿಷ್ಟ ಅಲ್ಲ. ನಮ್ಮ ಮನಸ್ಥಿತಿ ಬದಲಾವಣೆಯಾಗಬೇಕು. ಅಂಬೇಡ್ಕರ ಅವರ ಕನಸು, ತ್ಯಾಗಕ್ಕೆ ಅರ್ಥ ಬರುವ ರೀತಿಯಲ್ಲಿ ನಡೆದುಕೊಂಡು ಅವರ ಜನ್ಮದಿನ ಸ್ಪೂರ್ತಿಯಾಗಬೇಕು ಎಂದು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಹನಮಂತಗೌಡ ಮಿರ್ಜಿ ಮಾತನಾಡಿ ವಿಶ್ವದ ಅಗ್ರಮಾನ್ಯ, ವಿಶೇಷ ವ್ಯಕ್ತಿಯಾದ ಡಾ.ಬಿ.ಆರ್.ಅಂಬೇಡ್ಕರ ಅವರು ೧೮೯೧ರಲ್ಲಿ ಮದ್ಯಪ್ರದೇಶದ ಮಾಹೋ ಎಂಬ ಊರಿನಲ್ಲಿ ಜನಿಸಿದವರು. ಅವರ ಬಾಲ್ಯ ಜೀವನ ಕಷ್ಟಕರಾಗಿದ್ದು, ೧೪ ಜನ ಮಕ್ಕಳಲ್ಲಿ ಕೊನೆಯ ಮಗುವೇ ಅಂಬೇಡ್ಕರ. ಕಷ್ಟದಿಂದ ಮೇಲೆ ಬಂದವರು. ಅವರ ಜೀವನ ತ್ಯಾಗ ಮಾಡಿ ಇತರರಿಗೆ ಬೆಳಕನ್ನು ನೀಡಿದವರು. ಚಿಕ್ಕ ವಯಸ್ಸಿನಲ್ಲಿ ಮದುವೆಯಾದರು ಶಿಕ್ಷಣವನ್ನು ಮುಂದುವರೆಸಿದ್ದರು ಎಂದು ತಿಳಿಸಿದರು.
ಭಾರತದ ಸಂವಿಧಾನ ಸಮಗ್ರ ವಿಷಯಗಳ ನಿರ್ದೇಶನ ನೀಡುವ ಮಾರ್ಗಸೂಚಿಯಾಗಿದ್ದು, ಇದರ ರಚನೆಯಲ್ಲಿ ಅಂಬೇಡ್ಕರ ಅವರಿಗಿದ್ದ ಪ್ರಬುತ್ವತೆ ಎತ್ತಿ ತೋರಿಸುತ್ತದೆ. ಅಂಬೇಡ್ಕರ ಒಬ್ಬ ಶ್ರೇಷ್ಠ ಅರ್ಥಶಾಸ್ತçಜ್ಞರಾಗಿದ್ದು, ದೇಶ-ವಿದೇಶಗಳಲ್ಲಿಯೂ ಆಗು ಹೋಗುಗಳನ್ನು ಗಮನದಲ್ಲಿಟ್ಟುಕೊಂಡು ನಮಗೆ ಬೇಕಾಗುವಂತ ಸಂವಿಧಾನ ರಚಿಸಿದ್ದಾರೆ. ಅವರು ರಚಿಸಿದ ಸಂವಿಧಾನ ಹಿಂದಿನ, ಇಂದಿನ ಹಾಗೂ ಮುಂದಿನ ಜನಾಂಗಕ್ಕೆ ಮಾರ್ಗಸೂಚಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಮರನಾಥ ರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಮರಟ್ಟಿ, ಸಮುದಾಯದ ಮುಖಂಡರಾದ ಯಲ್ಲಪ್ಪ ಸನಕ್ಯಾನವರ, ವಾಯ್.ವಾಯ್.ತಿಮ್ಮಾಪೂರ, ಗುರುಶಾಂತಪ್ಪ ಮದಿನಕರ, ಅಡಿಯಪ್ಪ ಚಂದಾವರಿ, ಹನಮಂತ ಚಿಮ್ಮಲಗಿ, ಎಚ್.ಎನ್.ನೀಲನಾಯಕ, ಸದಾನಂದ ಮಳ್ಳೇನ್ನವರ, ಶಂಕರ ಚಂದಾವರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

Nimma Suddi
";