ಬಾಗಲಕೋಟೆ
ಜಿಲ್ಲೆಯ ಅಮೀನಗಡ ಪಟ್ಟಣದ ಶಿಕ್ಷಕ ಸಾಹಿತಿ ಮಹಾದೇವ ಬಸರಕೋಡ ಅವರ ಒಳಗಣ ಬೆಳಗು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್‌ನ ೨೦೨೦ನೇ ಸಾಲಿನ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಸ್ಥಾಪಿಸಲಾದ ದತ್ತಿ ಪ್ರಶಸ್ತಿಗೆ ಆಯ್ಕೆ ಆಗಿದೆ. ಸಾಹಿತ್ಯ, ಅಂಕಣ ಬರಹ, ಭಾವಗೀತೆ, ಸಾಮಾಜಿಕ ಚಟುವಟಿಕೆ ಮೂಲಕ ಮಹಾದೇವ ಬಸರಕೋಡ ಶಿಕ್ಷಕರಾಗಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಸದ್ಯ ಸೂಳೇಬಾವಿ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬದುಕು ಬೆಳಕು, ಒಡಲುಗೊಂಡವ, ತಮಂಧ ಘನ ಕಳೆದು, ಹಸಿವೆಂಬ ಹೆಬ್ಬಾವು, ಎಲ್ಲ ಎಲ್ಲೆಗಳ ದಾಟಿ, ಒಳಗಣ ಬೆಳಗು, ನಿಂದ ಹೆಜ್ಜೆಯ ಮೀರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
Nimma Suddi > Education News > ಒಳಗಣ ಬೆಳಗು:ದತ್ತಿ ಪ್ರಶಸ್ತಿ
ಒಳಗಣ ಬೆಳಗು:ದತ್ತಿ ಪ್ರಶಸ್ತಿ
Team One10/08/2023
posted on

Leave a reply