ಬಾಗಲಕೋಟೆ
ನಗರದಲ್ಲಿ ಶಿವಾಜಿ ಮೂರ್ತಿ ಸ್ಥಾಪನೆಯ ಸ್ಥಳ ವಿಚಾರವಾಗಿ ಮರಾಠ ಸಮುದಾಯದ ನಾಯಕರಲ್ಲಿ ಪರ, ವಿರೋಧ ವಾದದ ಮಧ್ಯೆ ಭಾನುವಾರ ರಾತ್ರೋ ರಾತ್ರಿ ಅಲ್ಲಿ ಶಿವಾಜಿಯ ಮೂರ್ತಿಯೊಂದು ಸ್ಥಾಪನೆಗೊಂಡಿದೆ.
ಮರಾಠ ಸಮಯದಾಯದಲ್ಲೇ ಕೆಲವರು ಸ್ಥಳ ಬದಲಾವಣೆಗೆ ಸೂಚಿಸಿದ್ದರು. ಇನ್ನೂ ಕೆಲವರು ಆಯ್ಕೆಯಾದ ಸ್ಥಳದಲ್ಲೇ ಮೂರ್ತಿ ಸ್ಥಾಪನೆಗೆ ಒತ್ತಾಯಿಸಿದ್ದರು.
ಆದರೆ ಇಂದು ನಿಗದಿಯಾದ ಸ್ಥಳದಲ್ಲೇ ಪುಟ್ಟ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಆಗಿದೆ. ಈಗಾಗಲೇ ಪ್ರತಿಷ್ಠಾಪನೆಗೆ ಬೃಹತ್ ಶಿವಾಜಿ ಮೂರ್ತಿ ಸಿದ್ಧವಾಗಿದ್ದು ನಿಗದಿಯಾದ ಸ್ಥಳದಲ್ಲಿ ಇಂದು ಚಿಕ್ಕದಾದ ಶಿವಾಜಿ ಮೂರ್ತಿ ಸ್ಥಾಪನೆಯಾಗಿದೆ.
ಘಟನೆ ಬೆನ್ನಲ್ಲೆ ಸ್ಥಳಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಭೇಟಿ ನೀಡಿ ಶಿವಾಜಿ ಮೂರ್ತಿಯನ್ನು ಅಭಿಮಾನಿಗಳು ಸ್ಥಾಪನೆ ಮಾಡಿರುವುದಕ್ಕೆ ಸ್ವಾಗತಿಸಿದರು.
ಈ ಸಂಬಂಧ ಈಗಾಗಲೇ ಸರ್ಕಾರದ ಅನುಮತಿ ಪಡೆದು ನಿರ್ಧಾರ ಮಾಡಲಾಗಿತ್ತು. ಆದರೆ ಕೆಲವರು ಅಭಿಮಾನಿಗಳು ಇಂದು ಮೂರ್ತಿ ಸ್ಥಾಪನೆ ಮಾಡಿದ್ದಾರೆ.ಈಗ ಬೃಹತ್ ಶಿವಾಜಿ ಮೂರ್ತಿಯನ್ನು ಶೀಘ್ರದಲ್ಲಿಯೇ ಸ್ಥಾಪನೆ ಮಾಡಲಾಗುವುದೆಂದು ಮೂರ್ತಿ ಪ್ರತಿಷ್ಠಾಪನೆ ಸಮಿತಿ ಸದಸ್ಯರು ತಿಳಿಸಿದರು.