ಬೆಂಗಳೂರು:
ಉಗಾರ ಖುರ್ದ್-ಕುಡಚಿ ನಡುವಿನ ಜೋಡಿ ಮಾರ್ಗದಲ್ಲಿ ಎಂಜಿನಿಯರಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರ ಸೇವೆಯಲ್ಲಿ ಬದಲಾವಣೆಯಾಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಹುಬ್ಬಳ್ಳಿ-ಮೀರಜ್ ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 17332), ಮೀರಜ್ -ಕ್ಯಾಸಲ್ ರಾಕ್ ಡೈಲಿ – ಎಕ್ಸ್‌ಪ್ರೆಸ್ ರೈಲು ಸಂಖ್ಯೆ 17333), ಕ್ಯಾಸಲ್ ರಾಕ್ – ಮೀರಜ್ ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 17334) ರೈಲುಗಳನ್ನು ಸೆ.4ರಿಂದ 8ರವರೆಗೆ ರದ್ದು ಮಾಡಲಾಗಿದೆ. ಮೀರಜ್-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 17331) ರೈಲನ್ನು ಸೆ.5 ರಿಂದ 9 ರವರೆಗೆ ರದ್ದುಗೊಳಿಸಲಾಗಿದೆ.
ಸೆ.3ರಿಂದ 7ರವರೆಗ ತಿರುಪತಿ-ಕೊಲ್ಲಾಪುರ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 17415) ಅನ್ನು ಬೆಳಗಾವಿ-ಕೊಲ್ಲಾಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಿದ್ದು, ಈ ರೈಲು ಸೇವೆ ಬೆಳಗಾವಿಯಲ್ಲಿ ಕೊನೆಯಾಗಲಿದೆ. ಕೊಲ್ಲಾಪುರ-ತಿರುಪತಿ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 17416) ಅನ್ನು ಸೆ.4ರಿಂದ 8ರವರೆಗೆ ಭಾಗಶಃ ರದ್ದುಗೊಳಿಸಿದ್ದು, ಈ ರೈಲು ಕೊಲ್ಲಾಪುರ ನಿಲ್ದಾಣದ ಬದಲು ಬೆಳಗಾವಿ ನಿಲ್ದಾಣದಿಂದ ಪ್ರಾರಂಭವಾಗಲಿದೆ.