This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

International NewsNational NewsState News

ಹಾನಗಲ್ ಶ್ರೀ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ

ಹಾನಗಲ್ ಶ್ರೀ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ

ಔಷಧಶಾಸ್ತದಲ್ಲಿ ಸಂಶೋಧನೆಗೆ ಆದ್ಯತೆ: ಡಾ.ಶಿವಪ್ರಕಾಶ ರತ್ನಮ್

ಬಾಗಲಕೋಟ-

ಔಷಧ ಶಾಸ್ತçದಲ್ಲಿ ಸಂಶೋಧನಗೆ ಹೆಚ್ಚಿನ ಆದ್ಯತೆ ಇದ್ದು ಅಹಮದಾಬಾದನಲ್ಲಿ ರಾಷ್ಟ್ರೀಯ ಯುವ ವಿಜ್ಞಾನಗಳ ಸಮಾವೇಶ ನಡೆಸಲಾಗುವುದು ಎಂದು ಇಂಡಿಯನ್ ಫಾರ್ಮಾಕಾಲಜಿಕಲ್ ಸೋಸೈಟಿ ಅಧ್ಯಕ್ಷ ಡಾ. ಶಿವಪ್ರಕಾಶ ರತ್ನಮ್ ಹೇಳಿದರು.

ಅವರು ಪ್ರತಿಷ್ಠಿತ ಬಿ.ವ್ಹಿ.ವ್ಹಿ.ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯ, ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಇಂಡಿಯನ್ ಫಾರ್ಮಾಕಾಲಜಿಕಲ್ ಸೋಸೈಟಿ, ಇವರ ಸಹಯೋಗದೊಂದಿಗೆ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಭ್ದಿ ಭವನದಲ್ಲಿ ನಡೆದ ೩ ದಿನಗಳ ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಉಧ್ಘಾಟಿಸಿ ಮಾತನಾಡಿದರು.

ಮೈಸೂರಿನಲ್ಲಿ ನಡೆದ ಸಮ್ಮೇಳನಕ್ಕಿಂತ ಬಾಗಲಕೋಟೆಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧಕರು ಭಾಗವಹಿಸಿದ್ದು ಸಮ್ಮೇಳನದ ಯಶಸ್ವಿಗೆ ಸಾಕ್ಷಿ, ಔಷಧ ಶಾಸ್ತçದಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ಇದ್ದು, ಫಾರ್ಮಾಕಾಲಜಿ ವಿಷಯದಲ್ಲಿ ಸಂಶೋಧನೆಗೆ ನಮ್ಮ ಸಂಸ್ಥೆಯು ಹೆಚ್ಚು ಆದ್ಯತೆ ನೀಡುತ್ತಿದ್ದು ಸಂಶೋಧಕರಿಗೆ ಅಗತ್ಯದ ಹಣಕಾಸಿನ ನೆರವು ನೀಡುತ್ತೇವೆ. ಔಷಧಶಾಸ್ತ್ರ ತಜ್ಞರು ಹೆಚ್ಚು ಹೆಚ್ಚು ಸಂಶೋಧನೆಯಲ್ಲಿ ತೊಡಗಿಸಿಕೋಳ್ಳಬೇಕು, ಅಹಮದಾಬಾದನಲ್ಲಿ ನಮ್ಮ ಪಾರ್ಮಾಜಿಕಾಲಜಿ ಸೋಸೈಟಿಯಿಂದ ರಾಷ್ಟೀಯ ಯುವ ವಿಜ್ಞಾನಿಗಳ ಸಮ್ಮೇಳನವನ್ನು ಆಯೋಜಿಸಲಾಗುವುದು, ಅದರಿಂದ ನಮ್ಮ ಯುವ ವಿಜ್ಞಾನಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದ ಅವರು ದೇಶದಲ್ಲಿ ವ್ಯಾಪಾರಸ್ಥರು,ಉದ್ಯಮಿಗಳು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೇಳಿಸಿದ್ದಾರೆ, ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯಾದರೆ,ದೇಶದ ಅಭಿವೃದ್ಧಿ ಸಾಧ್ಯ, ಉದಾರಣೆಗೆ ಬಿ.ವ್ಹಿ.ವಿ.ಸಂಘದ ಉತ್ತಮ ಗುಣಮಟ್ಟದ ಶಿಕ್ಷಣದ ದಾಸೋಹದ ಜೋತಗೆ ತಾನೂ ಅಭಿವೃದ್ಧಿಯಾಗುತ್ತ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೋಯ್ಯುತ್ತಿರುವುದು ಹೆವ್ಮ್ಮೆಯ ವಿಷಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಭೂಪಾಲ ಮತ್ತು ಜಮ್ಮುವಿನ AIIMS ನ ಅಧ್ಯಕ್ಷ ಡಾ.ವೈ.ಕೆ. ಗುಪ್ತಾ, ಶಿಕ್ಷಣ ವೆನ್ನುವುದು ಪುಸ್ತಕದ ಜೋತಗೆ ಸಾಮಾಜಿಕ ವ್ಯೆವಸ್ಥೆಯಿಂದ ಕಲಿಯುವುದು ನಿಜವಾದ ಶಿಕ್ಷಣವಾಗಿದ್ದು, ನಮ್ಮ ಭಾರತದ ಮಹಾವಿದ್ಯಾಲಯಗಳಲ್ಲಿ ಕಲಿಕಾ ಪದ್ದತಿಗಳು ಬದಲಾಗಬೇಕಿವೆ, ಪುಸ್ತಕ,ಪ್ರಾಯೋಗಿಕವಾಗಿ ಜೀವನದ ಸಮಾಜದ ಮೂಲಕ ಪಾಠವನ್ನು ಕಲಿಯುವ ಶೈಕ್ಷಣಿಕ ಪದ್ದತಿ ಬೇಕಾಗಿದೆ. ಬಾಗಲಕೋಟೆ ಕೃಷ್ಣಾನದಿ ತೀರದ ಮುಳಗಡೆ ಪ್ರದೇಶವಾದರು, ಉತ್ತಮ ವಾತಾವರಣ ಹೊಂದಿದ ನಗರವಾಗಿದೆ, ಬಸವೇಶ್ವರ ವೀರಶೈವ ವಿದ್ಯೆವರ್ಧಕ ಸಂಘ ತನ್ನ ಶೈಕ್ಷಣಿಗೆ ಅಭಿವೃದ್ಧಿಯೊಂದಿಗೆ ಬಾಗಲಕೋಟೆ ನಗರ ಗ್ರಾಮೀಣ ಅಭೀವೃದಿಯಾಗಿರುವುದಕ್ಕೆ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಜಿ ಶಾಸಕ,ಬಿ.ವ್ಹಿ.ವ್ಹಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಸಿ. ಚರಂತಿಮಠ ‘ನಮ್ಮ ಫಾರ್ಮಕಾಲಜಿ ಕಾಲೇಜು ಔಷಧಶಾಸ್ತçಜ್ಞರ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ವೇದಿಕೆಯಾಗುತ್ತಿರುವುದು ಹೆಮ್ಮೆಯ ವಿಷಯ. ಸಮ್ಮೇಳನದ ಫಲಿತಾಂಶ ಫಲಶ್ರುತಿಯಾಗಲಿ. ಸಮ್ಮೇಳನದಲ್ಲಿ ಚರ್ಚೆ ಮತ್ತು ಸಂವಾದಗಳು ನಡೆದು ಆರೋಗ್ಯಕರ ಸಮಾಜದ ಸ್ಥಾಪನೆಗೆ ನೆರವಾಗಲಿ ಎಂದರು.

ಕಾರ್ಯಕ್ರಮದ ವೇದಿಕೆ ಮೇಲೆ ಇಂಡಿಯನ್ ಫಾರ್ಮಾಕಾಲಜಿಕಲ್ ಸೋಸೈಟಿಯ ಕಾರ್ಯದರ್ಶಿ ಡಾ. ಬಿ. ಕಲಾಕುಮಾರ, ಓIPಇಖ ನ್ಯಾಶನಲ್ ಇನಸ್ಟೂö್ಯಟ ಆಫ್ ಫಾರ್ಮಾಸುಟಿಕಲ್ ಎಜುಕೇಶನ್ ಮತ್ತು ರಿಸರ್ಚ ಹೈದರಾಬಾದನ ವಿಶ್ರಾಂತ ನಿರ್ದೇಶಕ ಡಾ.ಪ್ರಕಾಶ ದಿವಾನ, ಕೇಂದ್ರ ಔಷಧ ನಿಯಂತ್ರಣ ಇಲಾಖೆ, ಹೈದರಾಬಾದನ ಉಪ ಔಷಧ ನಿಯಂತ್ರಕ ಡಾ. ಎ. ರಾಮಕಿಶನ, ಹಾಗೂ ರಾಷ್ಟಿçಯ ಡೋಪ ಟೆಸ್ಟಿಂಗ ಲ್ಯಾಬರೋಟರಿ, ಭಾರತ ಸರಕಾರ ನ್ಯೂ ದೆಹಲಿಯ ನಿರ್ದೇಶಕ ಡಾ.ಪೂರಣ ಎಲ್. ಸಾಹೂ,ಬಿ.ವ್ಹಿ.ವ್ಹಿ.ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಹಾನಗಲ್ ಶ್ರೀ ಕುಮಾರೇಶ್ವರ ಮಹಾವಿದ್ಯಾಲಯದ ಕಾರ್ಯಾಧ್ಯಕ್ಷ ಶ್ರೀ. ಮಲ್ಲಿಕಾರ್ಜುನ ಸಾಸನೂರ, ವೈದ್ಯಕೀಯ ಅಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಎಸ.ಎನ್.ಮೇಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪುರ, ಹಾಗೂ ಬಿ.ವಿ.ವಿ.ಸಂಘದ ಸದಸ್ಯರು ಉಪಸ್ಥಿತರಿದ್ದರು.
ಪ್ರಾಚಾರ್ಯರು ಡಾ. ವೈ. ಶ್ರೀನಿವಾಸ ಸ್ವಾಗತಿಸಿದರು, ಮತ್ತು ಡಾ.ವಿ.ಎಮ್. ಚಂದ್ರಶೇಖರ ವಂದಿಸಿದರು.
ಈ ಸಮ್ಮೇಳನದಲ್ಲಿ ದೇಶ ವಿದೇಶ ಗಳಿಂದ ಸುಮಾರು ೧೫೦೦ ಸಂಶೋಧಕರು, ಅದ್ಯಾಪಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಪಾಲ್ಗೊಂಡಿದ್ದರು. ಈ ಸಮಾರಂಬದಲ್ಲಿಸುಮಾರು ೨೬ ವೈಜ್ಞಾನಿಕ ಗೋಷ್ಠಿಗಳು ಜರುಗಿದವು ಹಾಗೂ ಇತರೆ ಸುಮಾರು ೫೦೦ ಸಂಶೋಧನಾ ಲೇಖನಗಳ ಮಂಡನೆ, ಚರ್ಚೆ, ಸಂವಾದ, ವಿಚಾರಗೋಷ್ಟಿಗಳ ಮೂಲಕ ಹೊಸ ವಿಚಾರಗಳ ಅನಾವರಣಗೊಂಡವು.

.

Nimma Suddi
";