This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Health & FitnessState News

ಕೋವಿಶೀಲ್ಡ್ ​ ಲಸಿಕೆ ಪಡೆದವರು ಫ್ರಿಜ್​ ನೀರು, ಐಸ್​ ಕ್ರೀಮ್​ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು ಎಂಬುವುದು ಸುಳ್ಳು ಸುದ್ದಿ

ಕೋವಿಶೀಲ್ಡ್ ​ ಲಸಿಕೆ ಪಡೆದವರು ಫ್ರಿಜ್​ ನೀರು, ಐಸ್​ ಕ್ರೀಮ್​ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು ಎಂಬುವುದು ಸುಳ್ಳು ಸುದ್ದಿ

ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಕೋವಿಶೀಲ್ಡ್ ​ ಲಸಿಕೆ ಪಡೆದವರು ಫ್ರಿಜ್​ ನೀರು, ಐಸ್​ ಕ್ರೀಮ್​ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು ಎಂಬುವುದು ಸುಳ್ಳು ಸುದ್ದಿಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆರೋಗ್ಯ ಇಲಾಖೆಯು ತಿಳಿಸಿರುವ ಮಾಹಿತಿಯ ಪ್ರಕಾರ, ಎಲ್ಲ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ರೀತಿಯ ಫ್ರಿಜ್​ ನೀರು, ಐಸ್​ ಕ್ರೀಮ್​ ಮತ್ತಯ ತಂಪು ಪಾನೀಯಗಳನ್ನು ಕುಡಿಯಬಾರದು. ಏಕೆಂದರೆ ಕೊರೊನಾ ಸಂದರ್ಭದಲ್ಲಿ ಕೋವಿಶೀಲ್ಡ್​​ ಲಸಿಕೆ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು ದಿಢೀರ್​ ಹೃದಯಾಘಾತ ಸಂಭವಿಸಿ ಪ್ರಾಣ ಹಾನಿಯಾಗುತ್ತಿದೆ.ಮೇಲೆ ತಿಳಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು ಎಂದು ಖಾಸಗಿ ಕಾಲೇಜು ಸುತ್ತೋಲೆ ಹೊರಡಿಸಿತ್ತು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ರೀತಿಯ ಸುದ್ದಿ ಸುಳ್ಳಾಗಿದ್ದು, ಇಂತಹ ಯಾವುದೇ ಸುತ್ತೋಲೆ ಇಲಾಖೆ ಹೊರಡಿಸಿಲ್ಲ. ಗಾಬರಿ ಗೊಳ್ಳದಿರಿ, ತಪ್ಪು ಮಾಹಿತಿ ಬಗ್ಗೆ ಜಾಗೃತಿ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ರೀತಿ ಸೂಚನೆ ನೀಡಿರುವ ಕಾಲೇಜುಗಳಿಗೆ ಕಾರಣ ಕೇಳಿ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.

 

Nimma Suddi
";