ಬಾಗಲಕೋಟೆ:
ಎಲ್ಲರಲ್ಲಿಯೂ ಪ್ರತಿಭೆ ಇದ್ದು, ಅವಕಾಶ ಮತ್ತು ಪ್ರೋತ್ಸಾಹ ದೊರೆತಲ್ಲಿ ಪ್ರತಿಭಾವಂತರಾಗಿ ಹೊರಹೊಮ್ಮಲು ಸಾಧ್ಯವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನವನಗರದ ಅಂಜುಮನ್ ಸಂಸ್ಥೆಯ ಆವರಣದಲ್ಲಿ ಗುರುವಾರ ವಿವಿಕೆ ಪೌಂಡೇಶನ್ ವತಿಯಿಂದ ೨೦೦ ವಿದ್ಯಾರ್ಥಿಗಳಿಗೆ ಕೆ.ಎ.ಎಸ್ ಹಾಗೂ ಪಿ.ಎಸ್.ಐ ಪರೀಕ್ಷೆಯ ಉಚಿತ ತರಬೇತಿ ಮತ್ತು ಅಕಾಡೆಮಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಜನರಿಗೂ ಉನ್ನತ ಹುದ್ದೆ ದೊರೆಯಲಿ ಎಂಬ ಸದುದ್ದೇಶದಿಂದ ವಿವಿಕೆ ಪೌಂಡೇಶನ್ ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಬಡವರು ಸಹ ಇಂತಹ ಪರೀಕ್ಷೆ ಪಾಸು ಮಾಡಬೇಕು. ಆ ಮೂಲಕ ಶಕ್ತಿ ತುಂಬಿ ಆಡಳಿತ ಯಂತ್ರದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಉತ್ತಮ ಕೆಲಸವೆಂದರು.
ವಿವಿಕೆ ಪೌಂಡೇಶನ್ ಹುಟ್ಟುಹಾಕಿ ಅದರ ಮೂಲಕ ಸಮಾಜ ಸೇವೆಗೆ ಮುಂದಾಗಿದೆ. ರೈತರಿಗೆ ಉಪಯುಕ್ತವಾರ ತರಬೇತಿ, ಸ್ವಯಂ ಉದ್ಯೋಗ ಕೈಗೊಳ್ಳಲು ಮಹಿಳೆಯರಿಗೆ ತರಬೇತಿ ನೀಡುವರ ಜೊತೆಗೆ ಸಮಾಜದಲ್ಲಿ ಅವಕಾಶ ವಂಚಿತರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಬಡ ವಿದ್ಯಾರ್ಥಿಗಳ ಕೆಎಎಸ್, ಐಪಿಎಸ್ ಕನಸನ್ನು ನನಸು ಮಾಡುವ ಕಾರ್ಯದಲ್ಲಿ ತೊಡಗಿ ಸಮಾಜದ ಋಣ ಅದನ್ನು ತಿರಿಸುವ ಕಾರ್ಯದಲ್ಲಿ ವಿವಿಕೆ ಪೌಂಡೇಶನ್ ತೊಡಗಲಿದೆ ಎಂದು ತಿಳಿಸಿದರು.
ಸರಕಾರದ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಅದರಲ್ಲಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷಿö್ಮ ಯೋಜನೆಗಳನ್ನು ಜಾತಿಗೆ ತರಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ೩೮ ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಲಾಗುತ್ತಿದೆ. ಮುಂದಿನ ವರ್ಷ ೫೮ ಸಾವಿರ ಕೋಟಿ ರೂ.ಗಳ ಹಣ ಖರ್ಚು ಮಾಡಲಾಗುತ್ತಿದೆ. ಕೇವಲ ಗೃಹಲಕ್ಷಿö್ಮÃ ಯೋಜನೆ ೧೮ ಸಾವಿರ ಕೋಟಿ ಖರ್ಚು ಮಾಡುತ್ತೇವೆ. ಮುಂದಿನ ವರ್ಷ ೩೭ ಸಾವಿರ ಕೋಟಿ ಖರ್ಚು ಮಾಡಲಾಗುತ್ತದೆ ಎಂದರು.
ಗೃಹಲಕ್ಷಿö್ಮÃ ಯೋಜನೆಯಲ್ಲಿ ೧.೧೭ ಕೋಟಿ ನೊಂದಣಿ ಮಾಡಿದ್ದು, ಅದರಲ್ಲಿ ೧.೧೦ ಕೋಟಿ ಮಹಿಳೆಯರಿಗೆ ೨ ಸಾವಿರ ರೂ. ನೀಡಲಾಗುತ್ತಿದೆ. ಡಿಸೆಂಬರ ಕೊನೆಯವರೆಗೆ ೧.೧೭ ಕೋಟಿ ಮಹಿಳೆಯರಿಗೆ ನೀಡಲಾಗುತ್ತಿದೆ. ಜೂನ್ ೧೧ ರಿಂದ ಪ್ರಾರಂಭವಾದ ಶಕ್ತಿ ಯೋಜನೆಯಿಂದ ಮಹಿಳೆಯರು ಉಚಿತವಾಗಿ ಪ್ರಮಾಣ ಮಾಡುತ್ತಿದ್ದಾರೆ. ೨೪ರ ನಂತರ ಪ್ರಯಾಣಿಕರ ಸಂಖ್ಯೆ ೧೦೦ ಕೋಟಿ ದಾಟಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಗಿನೆಲೆ ಗುರುಪೀಠದ ನಿರಂಜನಾನAಣದಪುರಿ ಶ್ರೀ, ಯಲ್ಲಾಲಿಮಗ ಶ್ರೀಮಠದ ಡಾ.ಮುರುಘರಾಜೇಂದ್ರ ಶ್ರೀ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮ ಶ್ರೀ, ಕೂಡಲಸಂಗ ಬಸವಜಯ ಮೃತ್ಯುಂಜಯ ಶ್ರೀ, ಡಾ.ಜಯಬಸವ ಶ್ರೀ, ಗುರುಮಹಾಂತ ಶ್ರೀ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಭಗೀರಥಾನಂದಪುರಿ ಶ್ರೀ, ಹಜರತ ಸೈಯದ ಸಾಹೇಬ, ಸಿದ್ದಲಿಂಗ ಶಿವಾಚಾರ್ಯ ಸೇರಿದಂತೆ ಇತರೆ ಶ್ರೀಗಳು ಸಾನಿಧ್ಯ ವಹಿಸಿದ್ದರು. ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ಶಾಸಕರಾದ ಎಚ್.ವಾಯ್.ಮೇಟಿ, ಜೆ.ಟಿ.ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ, ವಿವಿಕೆ ಪೌಂಡೇಶನ ಸಂಸ್ಥಾಪಕಿ ವೀಣಾ ಕಾಶಪ್ಪನವರ ಇದ್ದರು.