This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Sports News

ಮೂರನೇ ಪಂದ್ಯ ಗೆಲ್ಲಲು ಕಾರಣ ಇವ್ರೆ

ಮೂರನೇ ಪಂದ್ಯ ಗೆಲ್ಲಲು ಕಾರಣ ಇವ್ರೆ

IND vs WI 3rd T20I Cricket: ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಸೋಲು ಕಂಡಿತ್ತು. ಆದರೆ ಮೂರನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದರು.

ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಏಳು ವಿಕೆಟ್‌’ಗಳ ಜಯ ಸಾಧಿಸಿದೆ, ಈ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ ಪ್ಲೇಯಿಂಗ್ 11ರಲ್ಲಿ ಏಳು ಬ್ಯಾಟಿಂಗ್ ಆಯ್ಕೆಗಳು ನಮಗೆ ಸಾಕು ಎಂದು ಹೇಳಿದ್ದಾರೆ.

ಪಂದ್ಯದ ನಂತರ ಹಾರ್ದಿಕ್ ಪಾಂಡ್ಯ ಮಾತನಾಡಿ, “ಒಂದು ತಂಡವಾಗಿ ನಾವು ಏಳು ಬ್ಯಾಟ್ಸ್‌ಮನ್‌ಗಳೊಂದಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದೇವೆ. ಇಂದಿನಂತೆ ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ಬ್ಯಾಟ್ಸ್‌ಮನ್‌’ಗಳು ರನ್ ಗಳಿಸಿದರೆ, ನಿಮಗೆ ಎಂಟನೇ ಸ್ಥಾನದಲ್ಲಿ ಯಾರೂ ಅಗತ್ಯವಿಲ್ಲ” ಎಂದರು.

“ಸೂರ್ಯಕುಮಾರ್ ಹೇಳಿದಂತೆ ತಿಲಕ್ ವರ್ಮಾ ಜೊತೆ ಆಡುತ್ತಾರೆ. ಸೂರ್ಯಕುಮಾರ್ ಅವರಂತಹ ಬ್ಯಾಟ್ಸ್ ಮನ್ ತಂಡದಲ್ಲಿ ಇರುವುದು ಒಳ್ಳೆಯದು. ಅವರು ಜವಾಬ್ದಾರಿಯನ್ನು ವಹಿಸಿಕೊಂಡಾಗ, ಅದು ಇತರರಿಗೂ ಒಂದು ರೀತಿಯ ಸಂದೇಶವನ್ನು ಕಳುಹಿಸುತ್ತಾರೆ.

ಸೂರ್ಯಕುಮಾರ್ ಯಾದವ್ ಅವರ ಅಬ್ಬರದ 44 ಎಸೆತಗಳ 83 ರನ್‌’ಗಳ ನೆರವಿನಿಂದ ಭಾರತವು ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೂರನೇ ಟಿ 20 ಅಂತರಾಷ್ಟ್ರೀಯ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು ಜೀವಂತವಾಗಿರಿಸಲು ನೆರವಾಯಿತು. 44 ಎಸೆತಗಳ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ್ದಲ್ಲದೆ, ಸೂರ್ಯಕುಮಾರ್ ಅವರು ತಿಲಕ್ ವರ್ಮಾ ಅವರೊಂದಿಗೆ ಮೂರನೇ ವಿಕೆಟ್‌’ಗೆ 51 ಎಸೆತಗಳಲ್ಲಿ 87 ರನ್‌ಗಳ ಆಕ್ರಮಣಕಾರಿ ಜೊತೆಯಾಟ ನಡೆಸಿದರು. ಈ ಮೂಲಕ ಪಂದ್ಯಕ್ಕೆ ಮತ್ತೆ ಕರೆತಂದರು. ಆದರೆ ತಿಲಕ್ ಅರ್ಧಶತಕ ವಂಚಿತರಾದರು. ಅವರು 37 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 49 ರನ್ ಗಳಿಸಿದರು.

Nimma Suddi
";