This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsPolitics NewsState News

ಜಗದೀಶ್‌ ಶೆಟ್ಟರ್ ಸೋತಿದ್ದಾರೆ, ಸೋತ ಎಲ್ಲ ವೇಸ್ಟ್ ಬಾಡಿಗಳನ್ನು ಕರ್ಕೊಂಡು ಹೋಗಲಿ : ಬಸನಗೌಡ ಪಾಟೀಲ್‌ ಯತ್ನಾಳ್‌

ಜಗದೀಶ್‌ ಶೆಟ್ಟರ್ ಸೋತಿದ್ದಾರೆ, ಸೋತ ಎಲ್ಲ ವೇಸ್ಟ್ ಬಾಡಿಗಳನ್ನು ಕರ್ಕೊಂಡು ಹೋಗಲಿ : ಬಸನಗೌಡ ಪಾಟೀಲ್‌ ಯತ್ನಾಳ್‌

ವಿಜಯಪುರ : ಜಗದೀಶ ಶೆಟ್ಟರ್ ಎಷ್ಟು ಮಂದಿನ ಕರ್ಕೊಂಡು ಹೋಗ್ತಾರೋ ಹೋಗಲಿ, ಎಲ್ಲ ವೇಸ್ಟ್ ಬಾಡಿಗಳು ಹೋಗಲಿ. ಹೊಸ ಹೊಸ ಜನ ಬರ್ತಾರೆ, ಹೊಸ ಹೊಸ ಯುವಕರು ಬಿಜೆಪಿಗೆ ಬರಬೇಕಾಗಿದೆ. ಹೋಗೋರ್‌ ಹೋಗ್ತಾರೆ, ಅವರಿಗೇನು ಮಾಡೋಕಾಗುತ್ತೆ? ಎಂದು ಬಿಜೆಪಿ ಶಾಸಕನ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ರಾಮಣ್ಣ ಲಮಾಣಿ ಸೇರಿ ಅನೇಕ ಮಾಜಿ ಶಾಸಕರು ಜಗದೀಶ್‌ ಶೆಟ್ಟರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಅವರು, ನೋಡ್ರಿ ರಾಮಣ್ಣ ಲಮಾಣಿ ಹೋದರೆ ಏನಾಗುತ್ತೆ? ಅಲ್ಲಿ ಹಾಲಿ ಶಾಸಕ ಬಿಜೆಪಿಯವರೇ ಆರಿಸಿ ಬಂದಿದ್ದಾರೆ. ಅವರಿಗೆ ದೇಶ ಬೇಕಾಗಿಲ್ಲ, ಧರ್ಮ ಬೇಕಾಗಿಲ್ಲ, ಅವರು ಬರಿ ಎಂಎಲ್‌ಎ ಆಗಬೇಕು ಅಂತಾರೆ. ಜಗದೀಶ್‌ ಶೆಟ್ಟರ್ ಅವರು ಸೋತಿದ್ದಾರೆ, ಸೋತವರನ್ನೆಲ್ಲಾ ತಗೊಂಡು ಹೋಗಲಿ ಎಂದು ಹೇಳಿದರು.

ಮುಂದೆ ಹೊಸ ಹೊಸ ನಾಯಕರು ಬರಲಿ, ಹೊಸ ಯುವಕರು ಬರಲಿ. ಜಗದೀಶ್‌ ಶೆಟ್ಟರ್‌ ಎಲ್ಲ ಅನುಭವಿಸಿದ್ದಾರೆ, 75 ವರ್ಷದ ಮೇಲೂ ಎಲ್ಲಾ ಆಗಬೇಕು ಅಂದ್ರೆ ಹೆಂಗೆ? ಬೇರೆಯವರಿಗೂ ಬಿಟ್ಟುಕೊಡಬೇಕು, ಹೊಸ ನೀರು ಬರಬೇಕು, ಹಳೆ‌ನೀರು ರಿಟೈಡ್ ಆಗಬೇಕು. ಲಕ್ಷ್ಮಣ್‌ ಸವದಿ, ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ಗೆ ಹೋಗಿದ್ದರಿಂದ ಬಿಜೆಪಿಗೆ ಹಿನ್ನಡೆ ಆಗಿಲ್ಲ ಎಂದರು.

ಒಳ ಮೀಸಲಾತಿ, ಗ್ಯಾರಂಟಿಗಳಿಂದ ನಮಗೆ ಹಿನ್ನಡೆ ಆಗಿದೆ. ಮತ್ತು ನಮ್ಮ ಆಡಳಿತದಲ್ಲಿರುವ ಲೋಪದೋಷಗಳಿಂದ ಹಿನ್ನಡೆ ಆಗಿದೆ. ಈ‌ ಮಹಾತ್ಮರು ಹೋಗಿದ್ದರಿಂದ ಏನೂ ಎಫೆಕ್ಟ್ ಆಗಿಲ್ಲ. ಯಾರಿಗೂ ಗೊತ್ತಿಲ್ಲದೇ ದಿಢೀರ್‌ ಒಳ‌ ಮೀಸಲಾತಿ ಮಾಡಿಬಿಟ್ರು, ಇದರಿಂದ ನಮ್ಮ ಸಾಂಪ್ರದಾಯಿಕ ಮತದಾರರು ಕಿತ್ತುಕೊಂಡು ಹೋದರು. ಪಂಚ ಗ್ಯಾರಂಟಿ, ಪುಕ್ಕಟೆ ಕರೆಂಟ್ ಪುಕ್ಕಟೆ ಬಸ್, ಎರಡು ಸಾವಿರ ರೂಪಾಯಿ ಎಂದ ಕೂಡಲೇ ಮತದಾರರು ಹೋಗಿದ್ದಾರೆ ಎಂದು ಹೇಳಿದರು.

ಪ್ರತಿ ಬಿಪಿಎಲ್ ಕಾರ್ಡಗೆ ಮೂರು ಸಾವಿರ ರೂಪಾಯಿ ಮಾಡಿ ಎಂದು ನಮ್ಮವರಿಗೆ ಮೊದಲೇ ಹೇಳಿದ್ದೆವು. ಸಬ್ಸಿಡಿ ಕೊಟ್ಟು ದೇಶ ದಿವಾಳಿ ಆಗೋದು ಬೇಡ ಎಂದು ನಮ್ಮ‌ ಮೋದಿಯವರು ಮಾಡಲಿಲ್ಲ. ನಾವು ಯಾವ ಯೋಜನೆ ತಂದ್ರೂ ಬಡವರಿಗೆ ಅನುಕೂಲ ಆಗುತ್ತೆ. ಇವತ್ತು ಕೇಂದ್ರ ಸರ್ಕಾರದಿಂದ ಬಡವರಿಗೆ ಐದು ಕಿಜಿ ಅಕ್ಕಿ ಉಚಿತ ಕೊಡ್ತಿದೀವಿ. ಇವರು ಹತ್ತು ಕೆಜಿ ಕೊಡ್ತಿನಿ ಅಂದ್ರು, ಎಲ್ಲಿ ಕೊಟ್ರು? ನಮ್ಮ‌ ಐದು ಕೆಜಿಯನ್ನು ತಾವು ಕೊಡ್ತೀವಿ ಅಂತಾರೆ ಎಂದರು.

ಕೊರೊನಾ ವೇಳೆ ಮೋದಿ ಹತ್ತು ಕೆಜಿ ಅಕ್ಕಿ, ಲಸಿಕೆಯನ್ನು ಉಚಿತ ಕೊಟ್ಟರು. ದಿನಾಲೂ ನಾವು ಎಲ್ಲವನ್ನೂ ಕೊಟ್ಟರೆ ದುಡಿಯುವವರು ಯಾರು? ಎಲ್ಲರೂ ಅದರ ಮೇಲೆ ಚೈನಿ ಹೊಡಕೋತ ಆರಾಮ ಇರ್ತಾರೆ ಎಂದ ಅವರು, ಕೈ ಮುಗಿತೆನೆ ವಿಪಕ್ಷ ನಾಯಕನ ಆಯ್ಕೆ ಮಾಡಿ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಏನಾಗುತ್ತೋ ಗೊತ್ತಿಲ್ಲ, ಏನೋ ದೊಡ್ಡದು ನಡೆದಿದೆ. ನಮ್ಮವರು ಮೇಲಿನವರು ಏನು ಮಾಡ್ತಿಲ್ಲ ಅಂದ್ರೆ ಏನೋ ಇರಬೇಕು. ವಿರೋಧ ಪಕ್ಷ ಬೇಡವೇ ಬೇಡಪ್ಪ, ಒಮ್ಮೆಲೆ ಮುಖ್ಯಮಂತ್ರಿ ಮಾಡೋಣ ಎಂಬುದು ಇದ್ರೆ? ಎಂದು ಮಾರ್ಮಿಕವಾಗಿ ನುಡಿದರು.

ಕಾಂಗ್ರೆಸ್ ನಲ್ಲಿ ಲಿಂಗಾಯತ ಅಧಿಕಾರಿಗಳ ಮೂಲೆಗುಂಪು ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಸರ್ಕಾರದಲ್ಲಿ ಲಿಂಗಾಯತರ ಕಡೆಗಣನೆ ಆಗಿದೆ. ಈ ಸಲ ಲಿಂಗಾಯತರು ಅವರಿಗೆ ಬೆಂಬಲಿಸಿದ್ದರಿಂದಲೇ ಅವರಿಗೆ 135 ಸೀಟ್ ಬಂದಿವೆ. ಶಾಮನೂರು ಶಿವಶಂಕರಪ್ಪನವರು ಹೇಳಿರುವುದು ಸತ್ಯ ಇದೆ. ಅದನ್ನು ನಾನು ಸ್ವಾಗತಿಸುತ್ತೇನೆ. ಲಿಂಗಾಯತ ಅಧಿಕಾರಿಗಳಿಗೆ ಅವಮಾನ ಆಗಿದೆ. ಯಾವೊಬ್ಬ ಡಿಸಿ ಇಲ್ಲ, ಎಸ್‌ಪಿ ಇಲ್ಲ, ಉನ್ನತ ಅಧಿಕಾರದಲ್ಲಿ ಯಾರೂ ಇಲ್ಲ. ಎಲ್ಲರನ್ನೂ ಮೂಲೆಗುಂಪು ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಂದರೆ ಮೊದಲನೇಯದ್ದು ಹಿಂದೂ ವಿರೋಧಿ, ಎರಡನೇಯದ್ದು ಲಿಂಗಾಯತ ವಿರೋಧಿ ಎಂದರು.

ಅಲ್ಪಸಂಖ್ಯಾತ, ಮುಸ್ಲಿಂ ಅಧಿಕಾರಿಗಳೆಲ್ಲ ಒಳ್ಳೆ ಒಳ್ಳೆ ಪೋಸ್ಟ್‌ ಗೆ ಬಂದಿದ್ದಾರೆ. ಹಣಕಾಸು ಕಾರ್ಯದರ್ಶಿಯಿಂದ ಹಿಡಿದು, ಸಿದ್ದರಾಮಯ್ಯನವರ ಮುಖ್ಯಮಂತ್ರಿ ಕಚೇರಿಯಲ್ಲಾ ಅವರದ್ದೇ ಆಗಿದೆ. ಕಮಿಷನರ್ ಸೇರಿದಂತೆ ಎಲ್ಲ ಒಳ್ಳೆಯ ಹುದ್ದೆಗಳನ್ನೆಲ್ಲ ಅವರಿಗೆ ಕೊಟ್ಟಿದ್ದಾರೆ. ಅಲ್ಪಸಂಖ್ಯಾತರ ತುಷ್ಠೀಕರಣ, ಅವರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬುದು ಇದೆ ಎಂದು ಹೇಳಿದರು.

ಲಿಂಗಾಯತ ಸಮುದಾಯದ ಹೆಚ್ಚು ಶಾಸಕರು ಬಂದರೂ ಅಲ್ಲಿನ ಲಿಂಗಾಯತ ಶಾಸಕರಿಗೆ ಅಷ್ಟು ಧಮ್‌ ಇಲ್ಲ. ಧೈರ್ಯ ಮಾಡೋದಿಲ್ಲಾ, ಆಳಂದದ ಬಿಆರ್ ಪಾಟಿಲ್, ಬಸವರಾಜ ರಾಯರೆಡ್ಡಿ ಮಾತಾಡಿದರು ಸುಮ್ಮನಾದರು. ನಮ್ಮಂಗೆ ಮಾತನಾಡಿದರೆ ಯಾಕೆ ಕೊಡೊದಿಲ್ಲ?. ಶಾಮನೂರು ಶಿವಶಂಕರಪ್ಪನವರು ಸೋನಿಯಾಗಾಂಧಿ ಬಳಿ ಹೋಗಬೇಕು. ಇಲ್ಲದಿದ್ರೆ ಲೋಕಸಭಾ ಎಲೆಕ್ಷನ್ ನಲ್ಲಿ ನಮ್ಮ ಜನ ಪಾಠ ಕಲಿಸ್ತಾರೆ ಎಂದು ಹೇಳಬೇಕು. ಮಾತಾಡಿ ಕೊಡಿಸಬೇಕು ನೊಡೋಣ? ವಯಸ್ಸಾಗಿದ್ದರೂ ಇಷ್ಟಾದ್ರೂ ಮಾತಾಡ್ತಾರೆ ಎಂದ್ರೆ ಅವರೇ ಚೋಲೋ ಅಂತಿವಿ‌ ನಾವು ಎಂದರು

Nimma Suddi
";