This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

National NewsPolitics NewsState News

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಗಲಿದೆ, ವಿಧಾನಸಭೆ ಚುನಾವಣೆಗೆ ಸಮಯ ದೂರವಿಲ್ಲ’ : ಪ್ರಧಾನಿ ಮೋದಿ

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಗಲಿದೆ, ವಿಧಾನಸಭೆ ಚುನಾವಣೆಗೆ ಸಮಯ ದೂರವಿಲ್ಲ’ : ಪ್ರಧಾನಿ ಮೋದಿ

ಉಧಂಪುರ: ‘ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಗಲಿದೆ, ವಿಧಾನಸಭೆ ಚುನಾವಣೆಗೆ ಸಮಯ ದೂರವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಇಂದು ಜಮ್ಮು – ಕಾಶ್ಮೀರದ ಉಧಂಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ, ಮಾತನಾಡಿದ್ದು, ಈ ಚುನಾವಣೆ ಕೇವಲ ಸಂಸದರನ್ನು ಆಯ್ಕೆ ಮಾಡುವ ಚುನಾವಣೆಯಲ್ಲ, ಇದು ದೇಶದಲ್ಲಿ ಪ್ರಬಲ ಸರ್ಕಾರವನ್ನು ರಚಿಸುವ ಚುನಾವಣೆಯಾಗಿದೆ. ಸರ್ಕಾರವು ಪ್ರಬಲವಾದಾಗ ಅದು ಉತ್ತಮ ಕೆಲಸ ಮಾಡುತ್ತದೆ. ನನ್ನನ್ನು ನಂಬಿ ಮತ್ತು 60 ವರ್ಷಗಳ ಸಮಸ್ಯೆಗಳನ್ನು ನಾನು ಪರಿಹರಿಸುತ್ತೇನೆ ನಾನು ಬಡವರಿಗೆ ಭರವಸೆ ನೀಡಿದ್ದೇನೆ. ಎರಡು ಹೊತ್ತಿನ ಊಟದ ಬಗ್ಗೆ ಚಿಂತಿಸಬೇಕಾಗಿಲ್ಲ, ಇಂದು ಜಮ್ಮು ಮತ್ತು ಕಾಶ್ಮೀರದ ಲಕ್ಷಾಂತರ ಕುಟುಂಬಗಳು ಮುಂದಿನ 5 ವರ್ಷಗಳವರೆಗೆ ಉಚಿತ ಪಡಿತರವನ್ನು ಪಡೆಯಲಿದೆ ಎಂದರು.

ಇನ್ನು ಇಂಡಿಯಾ ಒಕ್ಕೂಟ ಹಾಗೂ ಕಾಂಗ್ರೆಸ್​​​​ ವಿರುದ್ಧ ಕೀಡಿಕಾರಿದ ಮೋದಿ, ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಇತರ ಎಲ್ಲಾ ಪಕ್ಷಗಳು ಜಮ್ಮು ಮತ್ತು ಕಾಶ್ಮೀರವನ್ನು ಆ ಹಳೆಯ ದಿನಗಳಿಗೆ ಹಿಂತಿರುಗಿಸಲು ಬಯಸುತ್ತವೆ. ಜಮ್ಮು ಮತ್ತು ಕಾಶ್ಮೀರಕ್ಕೆ ಯಾರೂ ಹಾನಿ ಮಾಡಿಲ್ಲ. ಈ ಕುಟುಂಬ ನಡೆಸುವ ಪಕ್ಷಗಳು ಕುಟುಂಬದಿಂದ ಮತ್ತು ಕುಟುಂಬಕ್ಕಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.

ಮೋದಿ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಹಾಗಾಗಿ ಇಲ್ಲಿಯವರೆಗೆ ನಡೆದಿರುವುದು ಕೇವಲ ಟ್ರೇಲರ್. ನಾನು ಹೊಸ ಜಮ್ಮು ಮತ್ತು ಕಾಶ್ಮೀರ ಹಾಗೂ ಅದ್ಭುತವಾದ ಯೋಚನೆಗಳನ್ನು ನೀಡಲು ಕೆಲಸ ಮಾಡುತ್ತೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಸೆಂಬ್ಲಿ ಚುನಾವಣೆ ನಡೆಯುವ ಸಮಯ ದೂರವಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಗುತ್ತದೆ. ನಿಮ್ಮ ಕನಸುಗಳನ್ನು ನಿಮ್ಮ ಶಾಸಕರು ಮತ್ತು ನಿಮ್ಮ ಮಂತ್ರಿಗಳೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡುತ್ತೇನೆ ಎಂದು ವಿಶ್ಲೇಷಿಸಿದರು.

ಕಾಂಗ್ರೆಸ್​​ ಅಧಿಕಾರಕ್ಕಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ 370 ರ ಗೋಡೆಯನ್ನು ನಿರ್ಮಿಸಿದ್ದಾರೆ. ನಿಮ್ಮ ಆಶೀರ್ವಾದದಿಂದ 370 ನೇ ವಿಧಿಯ ಗೋಡೆಯನ್ನು ಕೆಡವಿದ್ದೇವೆ. ಆ ಗೋಡೆಯ ಅವಶೇಷಗಳನ್ನು ನೆಲದಲ್ಲಿ ಹೂತುಹಾಕಿದೆ. ನಾನು ಭಾರತದ ಯಾವುದೇ ರಾಜಕೀಯ ಪಕ್ಷಕ್ಕೆ, ವಿಶೇಷವಾಗಿ ಕಾಂಗ್ರೆಸ್‌ಗೆ ಮತ್ತೆ ನಿಮಗೆ ಧೈರ್ಯವಿದ್ದರೆ 370 ನೇ ವಿಧಿಯನ್ನು ಮರಳಿ ತರಲಿ ಎಂಬ ಸವಾಲು ಹಾಕುತ್ತೇನೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಮೋದಿ ಕಿ ಗ್ಯಾರಂಟಿ ಯಾನಿ ಗ್ಯಾರಂಟಿ ಪುರ ಹೋನೇ ಕಿ ಗ್ಯಾರಂಟಿ ಹಿಂದೆ ಕಾಂಗ್ರೆಸ್​​​ನ ದುರ್ಬಲ ಸರ್ಕಾರಗಳು ಶಹಪುರಕಂಡಿ ಅಣೆಕಟ್ಟನ್ನು ದಶಕಗಳಿಂದ ಹೇಗೆ ಸ್ಥಗಿತಗೊಳಿಸಿದ್ದವು ಎಂಬುದು ನಿಮಗೆ ನೆನಪಿದೆ. ಜಮ್ಮುವಿನ ರೈತರ ಹೊಲಗಳು ಒಣಗಿತ್ತು ಮತ್ತು ಹಳ್ಳಿಗಳು ಕತ್ತಲೆಯಲ್ಲಿತ್ತು, ನಮ್ಮ ರವಿಯ ನೀರು ಪಾಕಿಸ್ತಾನಕ್ಕೆ ಹೋಗುತ್ತಿದೆ. ಇದನ್ನೆಲ್ಲ ಸರಿ ಮಾಡಬೇಕಿದೆ. ಈಗಾಗಲೇ ರೈತರ ಬೇಡಿಕೆಗಳನ್ನು ಈಡೇರಿಸಿದ್ದೇನೆ ಎಂದು ಸೂಚಿಸಿದರು.

Nimma Suddi
";