This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ನಂಗೂ ಬಿಜೆಪಿಗೇನು ಸಂಬಂಧ? ನಾನ್ಯಾಕೆ ಶ್ರೀರಾಮುಲುಗೆ ಟಿಕೆಟ್‌ ನೀಡೋದಕ್ಕೆ ವಿರೋಧ ವ್ಯಕ್ತಪಡಿಸಲಿ: ಜನಾರ್ದನ ರೆಡ್ಡಿ

ನಂಗೂ ಬಿಜೆಪಿಗೇನು ಸಂಬಂಧ? ನಾನ್ಯಾಕೆ ಶ್ರೀರಾಮುಲುಗೆ ಟಿಕೆಟ್‌ ನೀಡೋದಕ್ಕೆ ವಿರೋಧ ವ್ಯಕ್ತಪಡಿಸಲಿ: ಜನಾರ್ದನ ರೆಡ್ಡಿ

ಗಂಗಾವತಿ: ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಬಿಜೆಪಿ ಟಿಕೆಟ್‌ ನೀಡಿದರೆ ಸೋಲ್ತಾರೆ ಎಂಬ ವರದಿ ಬಂದಿದ್ದು, ಅದಕ್ಕೆ ಟಿಕೆಟ್‌ ನೀಡಬಾರದು ಅನ್ನೋ ಲೆಕ್ಕಾಚಾರದಲ್ಲಿ ಬಿಜೆಪಿಯವರಿದ್ದಾರೆ. ನಂಗೂ ಬಿಜೆಪಿಗೇನು ಸಂಬಂಧ? ನಾನ್ಯಾಕೆ ಶ್ರೀರಾಮುಲುಗೆ ಟಿಕೆಟ್‌ ನೀಡೋದಕ್ಕೆ ವಿರೋಧ ವ್ಯಕ್ತಪಡಿಸಲಿ ಎಂದು ಗಂಗಾವತಿಯ ಕೆಆರ್‌ಪಿಪಿ ಶಾಸಕ ಜನಾರ್ದನ ರೆಡ್ಡಿ ತಿಳಿಸಿದರು.

ಶ್ರೀರಾಮುಲುಗೆ ಬಿಜೆಪಿ ಟಿಕೆಟ್‌ ನೀಡಲು ಜನಾರ್ದನ ರೆಡ್ಡಿ ವಿರೋಧ ಎಂಬ ವಿಚಾರಕ್ಕೆ ಆನೆಗುಂದಿಯಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ರಾಜ್ಯಾಧ್ಯಕ್ಷನು ಅಲ್ಲ, ಆ ಪಕ್ಷದ ಕೋರ್‌ ಕಮಿಟಿಯಲ್ಲಿ ಕೂಡ ಇಲ್ಲ, ಬಿಜೆಪಿಯ ಮಿತ್ರಪಕ್ಷದಲ್ಲಿಯೂ ನಾನು ಇಲ್ಲ. ಹೀಗಾಗಿ ನಾನು ಶ್ರೀರಾಮುಲುಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸುತ್ತಿದ್ದೇನೆ ಎನ್ನುವುದು ಸುಳ್ಳು ಎಂದು ಹೇಳಿದರು.

. ಬಳ್ಳಾರಿಯಲ್ಲಿ ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿದರೆ ಸೋಲ್ತಾರೆ ಎಂದು ಸರ್ವೇ ರಿಪೋರ್ಟ್ ಬಂದಿದೆ. ಹೀಗಾಗಿ ಶ್ರೀರಾಮುಲುಗೆ ಟಿಕೆಟ್ ನೀಡಬಾರದು ಅನ್ನೋ ಲೆಕ್ಕಾಚಾರ ಇರಬಹುದು. ವಿಧಾನಸಭೆ ಚುನಾವಣೆಯಲ್ಲಿ ಕೂಡಾ ಎಲ್ಲಾ ಸರ್ವೇಗಳಲ್ಲಿ ಕೂಡ ಶ್ರೀರಾಮುಲು ಸೋಲ್ತಾರೆ ಎಂದು ಬಂದಿತ್ತು ಎಂದರು.

ದೆಹಲಿಯಲ್ಲಿ ಇನ್ನೊಂದು ವರ್ಗವಿದೆ. ರಾಜ್ಯದಲ್ಲಿ ಬಿಜೆಪಿ ಜವಾಬ್ದಾರಿ ತೆಗೆದುಕೊಂಡವರಿಗೆ ವಿರೋಧ ಮಾಡೋ ಬಣವಿದೆ. ಅವರಿಗೆ ಶ್ರೀರಾಮುಲುಗೆ ಟಿಕೆಟ್ ಕೊಡಿಸಿ, ಗೆದ್ದರೇ ನಮ್ಮ ಕ್ಯಾಂಡಿಡೇಟ್ ಗೆಲ್ತಾನೆ. ಸೋತರೆ ರಾಜ್ಯದಲ್ಲಿ ಜವಾಬ್ದಾರಿ ತೆಗೆದುಕೊಂಡವರ ಮೇಲೆ ತೆಂಗಿನಕಾಯಿ ಒಡೆದಂತಾಗುತ್ತದೆ ಅಂತ ಕೂತಿದ್ದಾರೆ ಎಂದು ವಿಶ್ಲೇಷಿಸಿದರು.

";