ಬಾಗಲಕೋಟೆ
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಬೀಳಗಿ ವಿಧಾನಸಭಾ ಕ್ಷೇತ್ರಕ್ಕೆ ಸಂಬAಧಪಟ್ಟAತೆ ಡಿ.೨೬ ರಂದು ಗದ್ದನಕೇರಿ ಕ್ರಾಸ್ ಹತ್ತಿರವಿರುವ ಸೀಮಿಕೇರಿಯ ಲಡ್ಡು ಮುತ್ಯಾ ದೇವಸ್ಥಾನದ ಸಭಾಂಗಣದಲ್ಲಿ ಜನತಾ ದರ್ಶನ ನಡೆಸಲಾಗುವುದು ಎಂದು ಅಪರ ಜಿಲ್ಲಾಕಾರಿ ಪರಶುರಾಮ ಶಿನ್ನಾಳಕರ್ ಹೇಳಿದರು.
ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ನಡೆಯುವ ಜನತಾ ದರ್ಶನದಲ್ಲಿ ಜಮಖಂಡಿ ಹಾಗೂ ಬಾಗಲಕೋಟೆ ಉಪವಿಭಾಗಾಕಾರಿ, ಬೀಳಗಿ, ಬಾಗಲಕೋಟೆ, ಬಾದಾಮಿ ತಾಲೂಕು ಮಟ್ಟದ ಅಕಾರಿಗಳು ಹಾಗೂ ನಾನಾ ಇಲಾಖೆಗಳ ಜಿಲ್ಲಾಮಟ್ಟದ ಅಕಾರಿಗಳು ಕಡ್ಡಾಯವಾಗಿ ಹಾಜರಿದ್ದು, ಸಾರ್ವಜನಿಕರಿಂದ ಸ್ವೀಕೃತವಾಗುವ ಅಹವಾಲು, ದೂರು ಮತ್ತು ಮನವಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲು ಕ್ರಮವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಸುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೇದಿಕೆ, ಬ್ಯಾನರ್, ನಾನಾ ಇಲಾಖೆಗಳ ಮಳಿಗೆ ಸ್ಥಾಪನೆ, ಕುಡಿವ ನೀರಿನ ವ್ಯವಸ್ಥೆ ಸೇರಿದಂತೆ ಈಗಿನಿಂದಲೇ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದ್ದು ಆರೋಗ್ಯ ಇಲಾಖೆಯವರು ವಯೋವೃದ್ಧರಿಗೆ, ಗರ್ಭೀಣಿಯರು, ಮಹಿಳೆಯರಿಗೆ ಮಾಸ್ಕ್ ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಿ. ಮುಂಜಾಗೃತೆಗಾಗಿ ಅಗತ್ಯ ವೈದ್ಯಾಕಾರಿ ಮತ್ತು ಸಿಬ್ಬಂದಿ ನಿಯೋಜಿಸಬೇಕು ಎಂದರು.
ಸಭೆಯಲ್ಲಿ ನಾನಾ ಇಲಾಖೆಗಳ ಜಿಲ್ಲಾಮಟ್ಟದ ಅಕಾರಿ ಹಾಗೂ ಸಿಬ್ಬಂದಿ ಇದ್ದರು.