ಬಸವನಬಾಗೇವಾಡಿ: ತಾಲೂಕಿನ ಜಾಯವಾಡಗಿ ಸೋಮನಾಥ ಶಿವಪ್ಪ ಮುತ್ಯಾನ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಬಸವನ ಬಾಗೇವಾಡಿ ತಾಲ್ಲೂಕಿನ ಜಾಯವಾಡಗಿ ಸೋಮನಾಥ ಶಿವಪ್ಪ ಮುತ್ಯಾನ ರಥೋತ್ಸವ ಪ್ರತಿ ಯುಗಾದಿ ಪಾಡ್ಯ ದಿನದಂದು ಜರುಗುತ್ತದೆ
ಇಂದು ಬೆಳಗ್ಗೆ ತೇರಿನ ಶೃಂಗಾರ ಜರುಗಿತು .
ಬ್ಯಾಕೋಡ ಗ್ರಾಮಸ್ಥರಿಂದ ರಥೋತ್ಸವ ಕಳಸ ಹಾಗೂ ಸೋಲವಾಡಗಿ ಗ್ರಾಮಸ್ಥರ ರಿಂದ ರಥದ ಮಿಣಿ ಮುದ್ದೇಬಿಹಾಳ ತಾಲ್ಲೂಕಿನ ಅಗಸಬಾಳ ಗ್ರಾಮಸ್ಥರಿಂದ ರಥದ ಬೆಳ್ಳಿ ಛತ್ರಿ ಆಗಮನ ಹಾಗೂ ಶ್ರೀ ಗಳ ನೇತೃತ್ವದಲ್ಲಿ ಅದ್ದೂರಿ ಯಾಗಿ ರಥೋತ್ಸವವು ಭಕ್ತರ ಜಯಘೊಷ ದೊಂದಿಗೆ ಜರುಗಿತು.
ಮುದ್ದೇಬಿಹಾಳ ವಿಜಯಪುರ ಮುಖ್ಯ ರಸ್ತೆ ಟ್ರಾಫಿಕ್ ಜಾಮ ತಪ್ಪಿಸಲು ಪೋಲಿಸರು ಪರದಾಡ ಬೇಕಾಯಿತು .
ನಾಳೆ ಜಾನುವಾರ ಜಾತ್ರೆ ಪ್ರಾರಂಭ ಗೊಳ್ಳುವುದು ಹಾಗು ಭಾರವಾದ ಚೀಲ ಎತ್ತುವುದು ನಂತರ ಭಾರವಾದ ಚೀಲ ಸಾಗ ಹೊತ್ತು ಕೊಂಡು ಹೋಗುವುದು ನಂತರ ಬಹುಮಾನ ವಿತರಣೆ ನಡೆಯಲಿದೆ.