ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಲೋಕಸಭಾ ಚುನಾವಣೆಗಾಗಿ ಏರ್ಪಟ್ಟಿರುವ ಮೈತ್ರಿಯಿಂದ ಎರಡೂ ಪಕ್ಷ ಪಕ್ಷಗಳಿಗೆ ಲಾಭವಿದೆ, ಜೆಡಿಎಸ್ ಪ್ರಾಬಲ್ಯ ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿ ತನ್ನದೇ ಆದ ವೋಟ್ ಶೇರ್ ಹೊಂದಿದೆ ಮತ್ತು ಬಿಜೆಪಿ ಬಲಿಷ್ಠವಾಗಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ಸಹ ಮತಗಳನ್ನು ಹೊಂದಿದೆ, ಹಾಗಾಗಿ ಬಹುಪಾಲು ವೋಟುಗಳು ತಮ್ಮ ಮೈತ್ರಿಗೆ ಸಿಗಲಿರುವುದರಿಂದ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕೆಂದು ಇನ್ನೂ ತೀರ್ಮಾನವಾಗಿಲ್ಲ, ಇಂದು ಸಂಜೆ ರಾಷ್ಟ್ರೀಯ ನಾಯಕರು ಸಭೆ ನಡೆಸಲಿದ್ದಾರೆ ಮತ್ತು ಸೀಟು ಹೊಂದಾಣಿಕೆ ಸಮಗ್ರ ಚಿತ್ರಣ ಸಭೆಯ ಬಳಿಕ ಸಿಗಲಿದೆ ಎಂದು ಜೋಶಿ ಹೇಳಿದರು. ಮಂಡ್ಯ ಕ್ಷೇತ್ರದ ಬಗ್ಗೆ ನಿರ್ದಿಷ್ಟವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ, ಟಿಕೆಟ್ ಸುಮಲತಾ ಅಂಬರೀಶ್ ಅವರಿಗೆ ಕೊಡಬೇಕೋ ಅಥವಾ ಜೆಡಿಎಸ್ ಗೆ ಬಿಟ್ಟುಕೊಡಬೇಕೋ ಅನ್ನೋದು ಇವತ್ತು ಸಾಯಂಕಾಲ ತೀರ್ಮಾನವಾಗಲಿದೆ, ಯಾವುದನ್ನೂ ತಾನು ಊಹಿಸಿ ಹೇಳಲಾರೆ ಎಂದರು.