This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ರೆಡ್‌ಕ್ರಾಸ್‌ನ ಉಪಸಭಾಪತಿಯಾಗಿ ಜಿಗಜಿನ್ನಿ ಆಯ್ಕೆ

ನಿಮ್ಮ ಸುದ್ದಿ ಬಾಗಲಕೋಟೆ

ಅಂತರಾಷ್ಟ್ರೀಯ ಸೇವಾ ಸಂಸ್ಥೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಉಪಸಭಾಪತಿಗಳಾಗಿ ಬಾಗಲಕೋಟೆಯ ಆನಂದ ಜಿಗಜಿನ್ನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಏಪ್ರಿಲ್ ೧ ರಂದು ಬೆಂಗಳೂರಿನ ರೆಡ್‌ಕ್ರಾಸ್ ಭವನದಲ್ಲಿ ನಡೆದ ಚುನಾವಣೆಯಲ್ಲಿ ಪತ್ರಕರ್ತ ಆನಂದ ಜಿಗಜಿನ್ನಿ ಅವರನ್ನು ೨೦೨೨-೨೦೨೫ ಅವಧಿವರಗೆ ಉಪಸಭಾಪತಿಯನ್ನಾಗಿ ಅವಿರೋಧವಾಗಿ ಚುನಾಯಿಸಲಾಯಿತು. ಸಭಾಪತಿಗಳಾಗಿ ರಾಯಚೂರಿನ ವಿಜಯಕುಮಾರ ಪಾಟೀಲ್ ಆಯ್ಕೆಯಾಗಿದ್ದಾರೆ.

೨೦೧೯ ರಲ್ಲಿ ಜಿಲ್ಲೆಯಲ್ಲಿ ಭೀಕರ ಪ್ರವಾಹ ಸಂದರ್ಭದಲ್ಲಿ ಸುಮಾರು ೪೮ ದಿನಗಳ ಕಾಲ ರೆಡ್ ಕ್ರಾಸ್ ಸೇವಾಕರ್ತರ ಜೊತೆಗೂಡಿ ಸಂತ್ರಸ್ತರನ್ನು ಕಾಪಾಡುವುದರಿಂದ ಹಿಡಿದು ಅವರಿಗೆ ೭೦೦೦ ಆಹಾರ ಕಿಟ್ ಹಾಗೂ ಅವಶ್ಯಕ ಸಾಮಗ್ರಿಗಳನ್ನು ಒದಗಿಸಿ ಸುಮಾರು ಎರಡು ನೂರು ಫ್ಯಾಮಿಲಿ ಟೆಂಟುಗಳನ್ನು ಒದಗಿಸಲಾಗಿತ್ತು. ಇದಕ್ಕಾಗಿ ಗೌರವಾನ್ವಿತ ರಾಜ್ಯಪಾಲ ವಜುಬಾಯಿ ವಾಲಾ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದರು.

ಅದೇ ರೀತಿ ಕಳೆದ ವರ್ಷ ಕೋವಿಡ್-೧೯ ಪಿಡುಗಿನ ಸಂದರ್ಭದಲ್ಲಿಯೂ ಕೂಡ ಜಿಲ್ಲಾಡಳಿತದೊಂದಿಗೆ ಜಿಲ್ಲೆಯಾದ್ಯಂತ ಜನಜಾಗೃತಿ ಮೂಡಿಸಿ ಮಾಸ್ಕ, ಸ್ಯಾನಿಟೈಸರ್‌ಗಳನ್ನು ಉಚಿತವಾಗಿ ಹಂಚಲಾಯಿತು. ರಾಜ್ಯ ಘಟಕದಿಂದ ಬಂದAತಹ ವೆಂಟಿಲೇಟರ್, ಆಕ್ಸಿಜನ್ ಕನ್ಸೆಂಟ್ರೇ ಟರ್ ಹಾಗೂ ಪಲ್ಸರ್ ಆಕ್ಸಿ ಮೀಟರ್‌ಗಳನ್ನು ಉಚಿತವಾಗಿ ನೀಡಲಾಯಿತು. ಈ ಕಾರ್ಯವನ್ನು ಮೆಚ್ಚಿ ೨೦೨೧ರಲ್ಲಿ ಗೌರವಾನ್ವಿತ ರಾಜ್ಯಪಾಲರಿಂದ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ರಕ್ತದಾನ ಶಿಬಿರ,ಆರೋಗ್ಯ ಶಿಬಿರಗಳು ಹಾಗೂ ಪ್ರಥಮ ಚಿಕಿತ್ಸೆ, ಬೇಸಿಕ್ ಲೈಫ್ ಸಪೋರ್ಟ್ ನಂತಹ ಕಾರ್ಯಗಾರಗಳನ್ನು, ಕ್ಯಾನ್ಸರ್ ಜಾಗೃತಿ ಅಭಿಯಾನ ಮತ್ತು ಉಚಿತ ಚಿಕಿತ್ಸೆ ಹೀಗೆ ಸಮಾಜದ ವಿವಿಧ ವರ್ಗಗಳ ಜನರಿಗೆ ನೀಡಲಾಗುತ್ತಿದೆ.

ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಗೆ ಉಪಸಭಾಪತಿ ಗಳಾಗಿ ಆಯ್ಕೆಯಾಗಿರುವುದು ಗೌರವದ ಹಾಗೂ ಸವಾಲಿನ ಕಾರ್ಯವಾಗಿದ್ದು ಇದನ್ನು ಅತ್ಯಂತ ನಿಷ್ಠೆಯಿಂದ ರೆಡ್ ಕ್ರಾಸ್ ಸಂಸ್ಥೆಯ ಎಲ್ಲ ದೆಯೋದ್ದೇಶಗಳ ಸಾಧನೆಗೆ ಕ್ಷಮಿಸುವ ಭರವಸೆಯನ್ನು ಆನಂದ ಜಿಗಜಿನ್ನಿ ನೀಡಿದ್ದಾರೆ.

ವಿವಿಧ ಗಣ್ಯರಿಂದ ಅಭಿನಂದನೆ
ರೆಡ್ ಕ್ರಾಸ್ ಸಂಸ್ಥೆ ಉಪಸಭಾಪತಿ ಸ್ಥಾನಕ್ಕೆ ಆಯ್ಕೆಯಾದ ಆನಂದ ಜಿಗಜಿನ್ನಿಯವರಿಗೆ ಜಿಲ್ಲಾಧಿಕಾರಿಗಳು ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಚೇರಮನ್ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ರಾಜ್ಯ ಸರ್ಕಾರಿ ನೌಕರರ ರಾಜ್ಯ ಉಪಾಧ್ಯಕ್ಷರಾದ ಎಂ.ಬಿ.ಬಳ್ಳಾರಿ, ನ್ಯಾಯವಾದಿ ಬಸವರಾಜ್ ಬಾದಾಮಿ, ಪತ್ರಕರ್ತರು ಹಾಗೂ ಜಿಲ್ಲೆಯ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Nimma Suddi
";