This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Education NewsLocal NewsNational NewsState News

Job Alert: 1377 ಹುದ್ದೆಗಳ ಭರ್ತಿಗೆ ನವೋದಯ ವಿದ್ಯಾಲಯ ಸಮಿತಿಯಿಂದ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ

Job Alert: 1377 ಹುದ್ದೆಗಳ ಭರ್ತಿಗೆ ನವೋದಯ ವಿದ್ಯಾಲಯ ಸಮಿತಿಯಿಂದ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ

ಬೆಂಗಳೂರು: ನವೋದಯ ವಿದ್ಯಾಲಯ ಸಮಿತಿ (Navodaya Vidyalaya Samiti)ಯು ದೇಶದಾದ್ಯಂತ ತನ್ನ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (Navodaya Vidyalaya Samiti Recruitment 2024). ಬರೋಬ್ಬರಿ 1,377 ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಬಹುದು. ಈ ಹಿಂದೆ ಅರ್ಜಿ ಸಲ್ಲಿಕೆಗೆ ಏಪ್ರಿಲ್‌ 30 ಕೊನೆಯ ದಿನ ಎಂದು ಹೇಳಲಾಗಿತ್ತು. ಇದೀಗ ಕಾಲಾವಧಿಯನ್ನು ವಿಸ್ತರಿಸಲಾಗಿದ್ದು, ಕೊನೆಯ ದಿನ ಮೇ 7. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಸ್ಟಾಫ್‌ ನರ್ಸ್‌ 121 ಹುದ್ದೆ, ವಿದ್ಯಾರ್ಹತೆ: ಬಿಎಸ್ಸಿ ನರ್ಸಿಂಗ್ ಅಸಿಸ್ಟಂಟ್ ಸೆಕ್ಷನ್‌ ಆಫೀಸರ್ (ಎಎಸ್‌ಒ) 5 ಹುದ್ದೆ, ವಿದ್ಯಾರ್ಹತೆ: ಯಾವುದೇ ಪದವಿ
ಆಡಿಟ್ ಅಸಿಸ್ಟಂಟ್ 12 ಹುದ್ದೆ, ವಿದ್ಯಾರ್ಹತೆ: ಬಿ.ಕಾಂ
ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್ 4 ಹುದ್ದೆ, ವಿದ್ಯಾರ್ಹತೆ: ಸ್ನಾತಕೊತ್ತರ ಪದವಿ
ಲೀಗಲ್ ಅಸಿಸ್ಟಂಟ್ 1 ಹುದ್ದೆ, ವಿದ್ಯಾರ್ಹತೆ: ಕಾನೂನು ಪದವಿ
ಸ್ಟೆನೋಗ್ರಾಫರ್ 23 ಹುದ್ದೆ, ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಜತೆಗೆ ಟೈಪಿಂಗ್ ಸ್ಕಿಲ್
ಕಂಪ್ಯೂಟರ್ ಆಪರೇಟರ್ 2 ಹುದ್ದೆ, ವಿದ್ಯಾರ್ಹತೆ: ಸಿಎಸ್‌, ಐಟಿ ವಿಷಯಗಳಲ್ಲಿ ಬಿಇ / ಬಿ.ಟೆಕ್ / ಬಿಸಿಎ/ ಬಿಎಸ್ಸಿ
ಕ್ಯಾಟರಿಂಗ್ ಸೂಪರ್‌ವೈಸರ್ 78 ಹುದ್ದೆ, ಹೋಟೆಲ್‌ ಮ್ಯಾನೇಜ್‌ಮೆಂಟ್‌ ಪದವಿ
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ 21 ಹುದ್ದೆ, ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಜತೆಗೆ ಟೈಪಿಂಗ್ ಸ್ಕಿಲ್
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (ಜೆಎಸ್‌ಎ) 360
ಇಲೆಕ್ಟ್ರೀಷಿಯನ್ ಕಮ್ ಪ್ಲಂಬರ್ 128 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್‌ ಇಲೆಕ್ಟ್ರೀಷಿಯನ್ ಅಂಡ್ ವೈರಿಂಗ್
ಲ್ಯಾಬ್‌ ಅಟೆಂಡಂಟ್ 161 ಹುದ್ದೆ, ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ / ಪಿಯುಸಿ ಜತೆಗೆ ಲ್ಯಾಬೋರೇಟರಿ ಟೆಕ್ನಿಕಲ್ ಸ್ಕಿಲ್‌
ಮೆಸ್‌ ಹೆಲ್ಪರ್ 442 ಹುದ್ದೆ, ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್‌ (ಎಂಟಿಎಸ್) 19 ಹುದ್ದೆ, ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ

ವಯೋಮಿತಿ
ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 37 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವಿಭಾಗಕ್ಕೆ 3 ವರ್ಷ, ಎಸ್‌ಸಿ / ಎಸ್‌ಟಿ ವಿಭಾಗಕ್ಕೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ
ಸ್ಟಾಫ್‌ ನರ್ಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 1,500 ರೂ. ಮತ್ತು ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳು 500 ರೂ. ಪಾವತಿಸಬೇಕು. ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ / ಒಬಿಸಿ ವಿಭಾಗದವರು 1,000 ರೂ. ಮತ್ತು ಇತರ ವರ್ಗದವರು 500 ರೂ. ಅರ್ಜಿ ಶುಲ್ಕವಾಗಿ ಪಾವತಿಸಬೇಕು.

Navodaya Vidyalaya Samiti Recruitment 2024ರ ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Nimma Suddi
";