ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ | ಉತ್ತಮ ರಾಸುಗಳಿಗೆ ಪ್ರಶಸ್ತಿ
ನಿಮ್ಮ ಸುದ್ದಿ ಬಾಗಲಕೋಟೆ
ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ ಅಂಗವಾಗಿ ೫ ದಿನಗಳ ಕಾಲ ನಡೆದ ನಾನಾ ತಳಿಯ ಜಾನುವಾರು ಪ್ರದರ್ಶನದಲ್ಲಿ ವೀರಾಪೂರದ ಫಕೀರಪ್ಪ ಚವಡಿ ಅವರ ಜೋಡೆತ್ತು ಜಾತ್ರಾ ಚಾಂಪಿಯನ್ ಪಟ್ಟ ಪಡೆದುಕೊಂಡವು.
ಮಂಗಳವಾರ ನಗರದ ಹೊರವಲಯದ ಕೇಸನೂರ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜಾತ್ರಾ ಚಾಂಪಿಯನ್ ಆಗಿ ಹೊರಹೊಮ್ಮಿದ ಜೋಡೆತ್ತಿಗೆ ೧೧ ತೊಲಿ ಬೆಳ್ಳಿ ಕಡೆ ಹಾಗೂ ಪ್ರಶಸ್ತಿಪತ್ರ ನೀಡಲಾಯಿತು. ನಾನಾ ರಾಸುಗಳಾದ ಹಾಲು ಹಲ್ಲಿನ ಹೋರಿ, ಎರಡು ಹಲ್ಲಿನ ಹೋರಿ, ನಾಲ್ಕು ಹಲ್ಲಿನ ಹೋರಿ, ಆರು ಹಲ್ಲಿನ ಹೋರಿ, ಜೋಡು ಎತ್ತುಗಳು, ಖಿಲಾರಿ ಆಳಕುಗಳಿಗೆ ಪ್ರಥಮ ೧೦ ತೊಲಿ ಬೆಳ್ಳಿ ಕಡೆ, ದ್ವಿತೀಯ ೮ ತೊಲಿ ಬೆಳ್ಳಿ ಕಡೆ, ತೃತೀಯ ೬ ತೊಲಿ ಬೆಳ್ಳಿ ಕಡೆ ಮತ್ತು ಪ್ರಶಸ್ತಿಪತ್ರ ನೀಡಲಾಯಿತು.
ಹಾಲು ಹಲ್ಲಿನ ಹೋರಿ:ನಕ್ಕರಗುಂದಿ ಗ್ರಾಮದ ಪರಸಪ್ಪ ಕುರಿ ಅವರ ಹೋರಿ (ಪ್ರಥಮ), ತುಳಸಿಗೇರಿಯ ಭೀಮಣ್ಣ ಜೈನಾಪೂರ (ದ್ವಿತೀಯ), ಶಿರೂರಿನ ಸಿದ್ದಪ್ಪ ಗಾಳಿ (ತೃತೀಯ), ಎರಡು ಹಲ್ಲಿನ ಹೋರಿ:ಬಾಗಲಕೋಟೆಯ ಸಂಗಣ್ಣ ಯಮನಾಳ (ಪ್ರಥಮ), ನಿಂಗಾಪೂರದ ರಂಗಪ್ಪ ಮಾದರ (ದ್ವಿತೀಯ), ಸೀಮಿಕೇರಿಯ ತಮ್ಮಣ್ಣಪ್ಪ ಪಿಂಡರಕಿ (ತೃತೀಯ), ನಾಲ್ಕು ಹಲ್ಲಿನ ಹೋರಿ:ಹುನಗುಂದನ ಪರಸಪ್ಪ ಆಲೂರ (ಪ್ರಥಮ), ಮುದ್ದೇಬಿಹಾಳದ ಸುಭಾಸ್ ಮಾದಗುಂಡಿ (ದ್ವತೀಯ), ನಿಂಗಾಪೂರದ ಮಹಾಂತೇಶ ಎಮ್ಮಿ ಅವರ ಹೋರಿ (ತೃತೀಯ) ಸ್ಥಾನ ಪಡೆದುಕೊಂಡವು.
ಆರು ಹಲ್ಲಿನ ಹೋರಿ:ನಿಂಗಾಪೂರದ ಸಂಗಪ್ಪ ಸಂಗಮದ ಹೋರಿ (ಪ್ರಥಮ), ಜಮ್ಮನಕಟ್ಟಿಯ ನಿಂಗಪ್ಪ ಕೋಳ್ಳಿ (ದ್ವಿತೀಯ), ತುಳಸಿಗೇರಿಯ ಮಳಿಯಪ್ಪ ಕೆಂಗಲಗುತ್ತಿ (ತೃತೀಯ), ಜೋಡು ಎತ್ತುಗಳು:ಹಿರೇಮಾಗಿಯ ಬಾಲಪ್ಪ ಹೊಸೂರ ಎತ್ತುಗಳು (ಪ್ರಥಮ), ಶಿರೂರಿನ ನಾಗಪ್ಪ ಅಚನೂರ (ದ್ವಿತೀಯ), ದಾದನಟ್ಟಿಯ ರಮೇಶ ರಾಜನಾಳ (ತೃತೀಯ), ಖಿಲಾರಿ ಆಕಳು:ಹಂಚಿನಾಳಿನ ವಿಠಲ ಅಂಬಿಗೇರ ಆಕಳು (ಪ್ರಥಮ), ಮುತ್ತಲದಿನ್ನಿಯ ಮಲ್ಲಪ್ಪ ಕಲ್ಲಾರಿ (ದ್ವಿತೀಯ) ಹಾಗೂ ಮನ್ನಿಕಟ್ಟಿ ಗ್ರಾಮದ ಪರಸಪ್ಪ ಕೊಳಮಲಿ ಆಕಳು (ತೃತೀಯ) ಸ್ಥಾನ ಪಡೆದುಕೊಂಡವು.
ಈ ಸಂದರ್ಭದಲ್ಲಿ ಮಾತನಾಡಿದ ಎಪಿಎಂಸಿ ಸಹಾಯಕ ನಿರ್ದೇಶಕ ಎಸ್.ಎನ್.ಪತ್ತಾರ, ೫ ದಿನ ಉತ್ತಮ ರೀತಿಯಲ್ಲಿ ಜಾನುವಾರು ಜಾತ್ರೆ ನಡೆದಿದೆ. ಜಾತ್ರೆ ಹಮ್ಮಿಕೊಳ್ಳುವ ಉದ್ದೇಶ ಜಾನುವಾರುಗಳ ಸಂಪತ್ತು ಹೆಚ್ಚಿಸುವದಾಗಿದ್ದು, ಇನ್ನಷ್ಟು ಜನರು ಜಾನುವಾರು ಜಾತ್ರೆಯ ಪ್ರಯೋಜನ ಪಡೆದುಕೊಳ್ಳಲು ತಿಳಿಸಿದರು. ಸಮಿತಿಯ ಸದಸ್ಯರಾದ ಮಲ್ಲು ದ್ಯಾವನ್ನವರ, ಮುರುಗೆಪ್ಪ ವೈಜಾಪೂರ ಮಾತನಾಡಿದರು.
ಮುರನಾಳ ಗ್ರಾಪಂ ಅಧ್ಯಕ್ಷೆ ಬಸವ್ವ ತೆಗ್ಗಿ, ಯಲ್ಲಪ್ಪ ಅಮಾತಗೌಡ್ರ, ಕೃಷ್ಣಪ್ಪ ನಾಯಕ, ನಾಗಪ್ಪ ಸೊನ್ನದ, ಶೇಖಪ್ಪ ಹೆರಕಲ್ಲ, ಎಂ.ಎA.ಹುಲ್ಲೂರ, ಶೀತಮ್ಮ ಮೇಟಿ, ಪ್ರಗತಿಪರ ರೈತ ಚನಬಸಪ್ಪ ಲಾಗಲೋಟಿ, ಸಂಗಮೇಶ ಯಮನಾಳ, ಶ್ರೀಶೈಲ ಗೌರಿ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಪಾಗದ, ಎಪಿಎಂಸಿ ಕಾರ್ಯದರ್ಶಿ ಎನ್.ಎ.ಲಕ್ಕುಂಡಿ, ಸಹಾಯಕ ಕಾರ್ಯದರ್ಶಿ ಆರ್.ಎಸ್.ದಂಡೀನ, ಬಗಲಿ ಇತರರು ಇದ್ದರು.