ಬಾಗಲಕೋಟೆ
ಪತ್ರಕರ್ತರಲ್ಲಿ ಸತ್ಯ, ನಿಖರತೆಯನ್ನು ಖಾತ್ರಿಪಡಿಸುವ ಗುಣವಿರಬೇಕು ಎಂದು ಹುನಗುಂದ ಸರಕಾರಿ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಎಸ್.ಕೆ.ಹೂಲಗೇರಿ ಹೇಳಿದರು.
ಜಿಲ್ಲೆಯ ಹುನಗುಂದ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಜಗತ್ತಿನ ಮೊದಲ ಪತ್ರಿಕೆ ಮಾರ್ನಿಂಗ್ ಶೋ ಹಾಗೂ ಲಂಡನ್ ಟೈಮ್ಸ್. ಇಡೀ ವಿಶ್ವದಲ್ಲೇ ಸಾವಿರಾರು ವರ್ಷಗಳ ಇತಿಹಾಸ ಪತ್ರಿಕಾರಂಗ ಹೊಂದಿದೆ. ಇದೀಗ ಅದು ಉದ್ಯಮವಾಗಿ ಬೆಳವಣಿಗೆ ಹೊಂದಿದೆ. ಪತ್ರಕರ್ತರು ಪ್ರತಿ ವಿಷಯದಲ್ಲೂ ಸತ್ಯತೆ ಅರಿಯಬೇಕು. ಅದನ್ನು ನಿಖರವಾಗಿ ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಸ್ವಾತಂತ್ರö್ಯ ಧ್ವನಿ ಅಡಗದಂತೆ ನೋಡಿಕೊಳ್ಳಬೇಕು. ನ್ಯಾಯಸಮ್ಮತ, ಸಮಾನತೆ, ನಿಷ್ಪಕ್ಷಪಾತದ ಮೂಲಕ ಮಾನವೀಯತೆ ಅರಿತು ಮುಂದೆ ಸಾಗಬೇಕು ಎಂದು ಕಿವಿ ಮಾತು ಹೇಳಿದರು.
ಹಿರಿಯ ಪತ್ರಕರ್ತ ಅಮರೇಶ ನಾಗೂರ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕು ಸಂಘ ತನ್ನದೇ ಅದ ನೀತಿ ಸಂಹಿತೆ ಇಟ್ಟುಕೊಂಡು ಮುನ್ನಡೆದಿದೆ. ಹಲವು ಕಾರ್ಯಾಗಾರದ ಮೂಲಕ ಪತ್ರಕರ್ತರಿಗೆ ತರಬೇತಿ ನೀಡಲಾಗಿದೆ. ಯುವ ಪತ್ರಕರ್ತರು ಅಧ್ಯಯನ ಶೀಲರಾಗಬೇಕು. ದೀಪ ಎಲ್ಲರಿಗೂ ಬೆಳಕು ನೀಡಿ ತನ್ನನ್ನು ತಾನು ಸುಟ್ಟುಕೊಳ್ಳುವಂತೆ ಪತ್ರಕರ್ತರ ಪರಿಸ್ಥಿತಿ ಇದೆ. ಪತ್ರಕರ್ತರ ವೇಷದಲ್ಲಿ ಬರುವವರು ಸಮಾಜಕ್ಕೆ ಅನಿಷ್ಠ ಪದ್ಧತಿ ಇದ್ದಂತೆ. ಅದು ತೊಲಗಬೇಕು. ಸಮಾಜದಲ್ಲಿ ಅಭಿವೃದ್ಧಿಗೆ ಪತ್ರಕರ್ತರ ಕೊಡುಗೆ ಅಪಾರ ಎಂದರು.
ಕಾನಿಪ ಜಿಲ್ಲಾಧ್ಯಕ್ಷ ಆನಂದ ಧಲಬಂಜನ, ಪತ್ರಿಕಾ ರಂಗ ಸಾಕಷ್ಟು ಬೆಳವಣಿಗೆ ಹೊಂದಿದೆ. ಜಿಲ್ಲಾ ಸಂಘಟನೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚೆಗೆ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಪತ್ರಕರ್ತರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಪತ್ರಿಕಾರಂಗ ಇದೀಗ ಪತ್ರಿಕೋದ್ಯಮವಾಗಿದೆ. ಬಂಡವಾಳಶಾಹಿಗಳ ಕೈಕೆಳಗೆ ದುಡಿಯುವ ಪರಿಸ್ಥಿತಿ ಬಂದೊದಗಿದೆ. ಕಾಲಕ್ಕೆ ತಕ್ಕಂತೆ ಪತ್ರಕರ್ತರು ಬದಲಾವಣೆ ಆಗಬೇಕಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಗುರುಮಹಾಂತ ಸ್ವಾಮೀಜಿ, ಆಡಳಿತ ಯಂತ್ರದ ಶುದ್ದೀಕರಣದಲ್ಲಿ ಪತ್ರಿಕಾ ರಂಗದ ಕೊಡುಗೆ ಅಪಾರವಾಗಿದೆ. ಜನರ ಕಲ್ಯಾಣಕ್ಕೆ ಈ ಕ್ಷೇತ್ರ ಬಹುದೊಡ್ಡ ಕೊಡುಗೆ ನೀಡಿದೆ. ಪತ್ರಕರ್ತರು ಸುದ್ದಿಯ ಹುಡುಕಾಟದ ಕೆಲಸ ಮಾಡಬೇಕು. ಲೋಕಕಲ್ಯಾಣದ ಗುರಿಯೊಂದಿಗೆ ಮಾನವೀಯತೆಯ ರಕ್ಷಣೆಗಾಗಿ ಹಲವು ಪತ್ರಕರ್ತರು ಜೀವ ಬಲಿ ಕೊಟ್ಟಿದ್ದಾರೆ. ಆದರೆ ಅವರಿಗೆಲ್ಲ ಆರ್ಥಿಕ ಭದ್ರತೆಯಿಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಸರಕಾರ ಹಾಗೂ ಸಮಾಜ ಚಿಂತಿಸಬೇಕು ಎಂದರು.
ತಹಸೀಲ್ದಾರ್ ನಿಂಗಪ್ಪ ಬಿರಾದಾರ, ತಾಪಂ ಇಒ ಎಂ.ಎಚ್.ದೇಶಪಾAಡೆ, ಪ್ರಾಚಾರ್ಯ ಎಚ್.ಸುರೇಶ, ಕಾನಿಪ ಜಿಲ್ಲಾಧ್ಯಕ್ಷ ಆನಂದ ಧಲಬಂಜನ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರಿಯಾಜ್‌ಅಹಮ್ಮದ ಸರಕಾವಸ್, ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ, ಅತಿಥಿಗಳಾಗಿ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಜಬ್ಬಾರ ಕಲಬುರ್ಗಿ, ಮಲ್ಲಿಕಾರ್ಜುನ ದರಗಾದ, ಜಾಕಿರಹುಸೇನ್ ತಾಳಿಕೋಟಿ, ಅಮರೇಶ ನಾಗೂರ, ಮಹಿಬೂಬ್ ಸರಕಾವಸ ಅವರನ್ನು ಸನ್ಮಾನಿಸಲಾಯಿತು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಹಾಂತೇಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಂ.ಎಚ್.ಹೊಸಮನಿ, ಎಫ್.ಎಂ.ಪಿಂಜಾರ, ವಿಜಯ ಸಿಂಗದ, ಮುತ್ತಣ್ಣ ಬಳಿಗಾರ, ಜಗದೀಶ ಹದ್ಲಿ, ಮಲ್ಲಿಕಾರ್ಜುನ ಬಂಡರಗಲ್, ಮಹಾಂತೇಶ ತೋಪಟಕಟ್ಟಿ, ರವಿ.ಡಿ.ಎಸ್., ಸಂಗಮೇಶ ಹೂಗಾರ, ರಮೇಶ ತಾರಿವಾಳ, ಬಸವರಾಜ ಬಡಿಗೇರ, ಬಸವರಾಜ ಕಮ್ಮಾರ, ವಿರೇಶ ಕುರ್ತಕೋಟಿ, ಗುರು ಹಿರೇಮಠ, ಶರಣಪ್ಪ ಹಳಪೇಟಿ, ಬಸವರಾಜ ನಿಡಗುಂದಿ, ಅಂದಾನಪ್ಪ ಸುಂಕದ, ಚಂದ್ರು ಗಂಗೂರ, ಹಿರಿಯರಾದ ರಾಮನಗೌಡ ಬೆಳ್ಳಿಹಾಳ, ಶಿವಪ್ಪ ನಾಗೂರ ಇತರರು ಇದ್ದರು.