ಕಲಬುರಗಿ: ಯುರೋಪ್‌ನ ಅತಿದೊಡ್ಡ ದೇಶಗಳಲ್ಲಿ ಒಂದಾಗಿರುವ ಉಕ್ರೇನ್ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕಾಗಿ ಹೋಗಿದ್ದ ಕಲಬುರಗಿಯ ಯುವಕರು ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಹೋಗಿದವರು ಉಕ್ರೇನ್ ಬಾರ್ಡರ್ನಲ್ಲಿ ಯುದ್ದಕ್ಕೆ ನಿಯೋಜನೆಗೊಂಡಿದ್ದಾರೆ. ತರಬೇತಿ ನಡೆದಿದೆ ಅಂತಾ ಹೇಳಿ ನಮ್ಮನ್ನ ಬಾರ್ಡರ್ ನಲ್ಲಿ ನಿಯೋಜನೆ ಮಾಡಿದ್ದಾರೆ ಎಂದು ಸಿಲುಕಿಕೊಂಡ ಯುವಕನೋರ್ವವ ತಂದೆ ಅಳಲು ತೋಡಿಕೊಂಡಿದ್ದು, ಉದ್ಯೋಗಕ್ಕಾಗಿ ತೆರಳಿದ್ದ ಯುವಕರನ್ನು ರಷ್ಯಾ ಯುದ್ಧಕ್ಕೆ ಬಳಸಿಕೊಳ್ಳುತ್ತಿದೆ ಎಂದು ಇತ್ತೀಚೆಗೆ ಹೈದರಾಬಾದ್ನಲ್ಲಿ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಹೇಳಿಕೆ ನೀಡಿದರು.
ಕೆಲಸಕ್ಕಾಗಿ ಕಲಬುರಗಿಯ 4 ಯುವಕರು ಸೇರಿ ಭಾರತದ 6 ಯುವಕರು ಬಾಬಾ ಏಜೆಂಟ್ ಮೂಲಕ 2023 ಡಿಸೆಂಬರ್ 5 ರಂದು ರಷ್ಯಾಕ್ಕೆ ತೆರಳಿದ್ದರು. ಸೆಕ್ಯುರಿಟಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಕ ಪ್ರತಿಯೊಬ್ಬ ಯುವಕರ ಬಳಿ ಮೂರು ಲಕ್ಷ ಹಣ ಪಡೆದುಕೊಂಡಿದ್ದ.ಈಗ ಕೆಲಸ ಸಿಗುವ ಆಸೆಯಲ್ಲಿ ಉಕ್ರೇನ್ಗೆ ಹೋದ ಯುವಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕಳಬುರಗಿಯ ಆಳಂದ ತಾಲೂಕಿನ ನರೋಣದ ಸೈಯದ್ ಇಲಿಯಾಸ್ ಹುಸೇನ್, ಮೊಹಮ್ಮದ್ ಸಮೀರ್ ಅಹಮದ್, ಸೋಫಿಯಾ ಮೊಹಮ್ಮದ್ ರಷ್ಯಾದಲ್ಲಿ ಸಿಲುಕಿಕೊಂಡಿದ್ದಾರೆ.
ಉಕ್ರೇನ್ ನಲ್ಲಿರೋ ಹುಡುಗನ ತಂದೆ ನವಾಜ್ ಕಾಳಗಿ, ನನ್ನ ಮಗನಿಗೆ ಏಜೆಂಟ್ಗಳು ಮೋಸ ಮಾಡಿದ್ದಾರೆ. ಅವನು ಸಮಸ್ಯೆಯಲ್ಲಿದ್ದಾನೆ. ನನ್ನ ಮಕ್ಕಳಿಗೆ ಮೋಸ ಆಗಿದೆ ಭಾರತದ ಅನೇಕ ಜನರಿಗೆ ಮೋಸ ಆಗಿದೆ ಎಂದು ಕಣ್ಣೀರು ಹಾಕಿದ್ದಾರೆ. ಉಕ್ರೇನ್ ಬಾರ್ಡರ್ನಲ್ಲಿ ಯುದ್ದದಲ್ಲಿ ನಿಯೋಜನೆ ಮಾಡಿದ್ದಾರೆ. ತರಬೇತಿ ನಡೆದಿದೆ ಅಂತಾ ಹೇಳಿ ಬಾರ್ಡರ್ ನಲ್ಲಿ ನಿಯೋಜನೆ ಮಾಡಿದ್ದಾರೆ. ಮತ್ತೊಬ್ಬ ಯುವಕನನ್ನ ಎಲ್ಲಿ ಹಾಕಿದ್ದಾರೆ ಅಂತಾ ಇದುವರೆಗೂ ಗೊತ್ತಾಗಿಲ್ಲ ಎಂದು ಯುವಕನ ತಂದೆ ಅಳಲು ತೋಡಿಕೊಂಡಿದ್ದಾರೆ.