This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local NewsState News

ದಾಸರಲ್ಲಿ ಶ್ರೇಷ್ಠರು ಕನಕದಾಸರು : ಸಂಸದ ಗದ್ದಿಗೌಡರ

ದಾಸರಲ್ಲಿ ಶ್ರೇಷ್ಠರು ಕನಕದಾಸರು : ಸಂಸದ ಗದ್ದಿಗೌಡರ

ಬಾಗಲಕೋಟೆ

12ನೇ ಶತಮಾನದ ಬಸವಣ್ಣನ ಮಹಾ ಮಾನವತಾ ವಾದಿತ್ವವನ್ನು ನಾಡಿನೆಲ್ಲಡೆ ತಮ್ಮ ದಾಸ ಸಾಹಿತ್ಯದ ಮೂಲಕ ಪ್ರಸರಿಸಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕನಕದಾಸರು ದಾಸರಲ್ಲಿಯೇ ಶ್ರೇಷ್ಠ ಎನಿಸಿಕೊಂಡವರು ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ನವನಗರದ ಕಲಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂದಿನ ಕಾಲದಲ್ಲಿ ಅಸ್ಪ್ರುಷ್ಯತೆ, ಅಸಮಾನತೆ ಹಾಗೂ ಬಡವ ಬಲ್ಲಿದ ಎಂಬ ಭಾವನೆ ಆ ಸಂದಭ್ರದ ಇದ್ದುದ್ದರಿಂದ ಭಕ್ತಿಭಾವದಿಂದ ಕೀರ್ತನೆಗಳನ್ನು ಹಾಡಿ ಜನಮನದಲ್ಲಿ ಆರೈದ್ಯ ದೈವರಾದರು. ಶೋಷಿತ ವರ್ಗದಲ್ಲಿ ಜನಿಸಿದರು ಶ್ರೀಕೃಷ್ಣನ ದರ್ಶನ ಪಡೆದ ಕನಕದಾಸರು ದಾಸ ಶ್ರೇಷ್ಠರಾಗಿದ್ದಾರೆಂದು ತಿಳಿಸಿದರು.

ಕನಕದಾಸರು ಹಣದಿಂದ ಅಧಿಕಾರದಿಂದ, ದರ್ಪದಿಂದ ಏನು ಸಾಧಿಸಲು ಆಗುವುದಿಲ್ಲ. ಕರುಣೆ, ವಿಶ್ವಾಸದಿಂದ ಎಲ್ಲವೂ ಭಗವಂತನ ಕೃಪೆ ಎಂದು ಬದುಕಿದರೆ ಅದೇ ಸುಂದರವಾದ ಜೀವನ ಎಂದು ತೋರಿಸಿಕೊಟ್ಟವರು. ಇವರ ಜೀವನ ಶೈಲಿ ಹಾಗೂ ಆದರ್ಶವನ್ನು ಯುವಜಕರು, ವಿದ್ಯಾರ್ಥಿಗಳು ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕವಾಗುವುದು ಎಂದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ ಕನಕದಾಸರು ತಮ್ಮ ವೈಚಾರಿಕ ಪ್ರಜ್ಞೆ, ತನ್ಮತೆ ಭಾವದಿಂದ ಹಾಡಿದ ಹಾಡುಗಳಿಂದ ಇಂದು ಕೂಡಾ ನಮ್ಮ ನಮದಲ್ಲಿ ಜಿವಂತ ಇದ್ದಾರೆ. 12ನೇ ಶತಮಾನದಲ್ಲಿ ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂಬಂದತ ಕನಕದಾಸರು ಕೂಡಾ ಜ್ಞಾನದ ಬದಲಿಂದ ಕತ್ತಲನ್ನು ಹೋಗಲಾಡಿಸಿ ಜನರಲ್ಲಿ ಜಾಗೃತಿ ಮೂಡಿಸದವರಾಗಿದ್ದಾರೆ. ಕನಕದಾಸರ ಸಾಹಿತ್ಯ ವಸ್ತು ವಿಷಯದ ಮೇಲೆ, ಜನಸಾಮಾನ್ಯರ ಬದುಕು, ನಂಬಿಕೆ ಬಗ್ಗೆ ಬರೆದಿದ್ದಾರೆ. ಇದರಿಂದ ಜನಮನದ ಕವಿಯಾಗಿದ್ದರು ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಬೀಳಗಿ ನಿವೃತ್ತ ಪ್ರಾಚಾರ್ಯ ಡಾ.ಸಾಗರ ತೆಕ್ಕಣ್ಣವರ ಮಾತನಾಡಿ ಸಮಾಜ ಸುಧಾರಕರು ಯಾವುದೇ ಜಾತಿಗೆ ಸೇರಿದವರಲ್ಲ. ಬುದ್ದ, ಬಸವ, ಅಂಬೇಡ್ಕರ, ವಾಲ್ಮಿಕಿ ಸೇರಿದಂತ ಅನೇಕ ಮಹಾನ್ ವ್ಯಕ್ತಿಗಳು ಲೋಕಕಲ್ಯಾಣಕ್ಕಾಗಿ ಹಾಗೂ ಜನಹಿತಕ್ಕಾಗಿ ಜೀವ ಮುಡುಪಾಗಿಟ್ಟವರು. ಕನಕದಾಸರ ಸಾಹಿತ್ಯ, ಜೀವನ, ಕೀರ್ತನೆ, ಸಾಂಸ್ಕøತಿಗೆ ಕೊಟ್ಟಂದ ಕೊಡುಗೆಗಳನ್ನು ಪಾಲಕರು ತಮ್ಮ ಮಕ್ಕಳಿಗೆ ಹೇಳಿ ಕೊಟ್ಟಾಗ ಮಾತ್ರ ಜಯಂತಿ ಆಚರಿಸಿದ್ದಕ್ಕೆ ಸಾರ್ಥಕತೆ ಬರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವಾಯ್.ಮೇಟಿ ಮಾತನಾಡಿ ಕನಕದಾಸರು ಕುಲು ಕುಲ ಎಂದು ಹೊಡದಾಡದಿರಿ ಎಂದು ಹಾಡಿದ್ದರು ಕೂಡಾ ಇಂದು ಜಾತಿ ವ್ಯವಸ್ಥೆಯಲ್ಲಿ ಕುರುಬ ಸಮಾಜದವರಾಗಿದ್ದರಿಂದ ಆ ಜನಾಂಗದ ಆರಾಧ್ಯ ಭಂಡಾರ ಮತ್ತು ಡೊಳ್ಳು ಮೂಲ ಗುರುತಾಗಿವೆ. ಭಂಡಾರ ಹಣೆಗೆ ಭೂಷಣಕ್ಕೆ ಹೊರತು ತೂರಾಡುವದಕ್ಕಲ್ಲ ಎಂಬುದನ್ನು ಅರಿಯಬೇಕು. ಡೊಳ್ಳು ಸಾಂಪ್ರದಾಯಿಕ ಕಟ್ಟಿಗೆ ಹಾಗೂ ಚರ್ಮದಿಂದ ಕೂಡಿರಬೇಕೆ ಹೊರತು, ಇತರೆ ವಸ್ತುಗಳಿಂದ ಕೂಡಿರಬಾರದು ಎಂದರು.

ಪ್ರತಿ ವರ್ಷದಂತೆ ಈ ವರ್ಷವೂ ದಿ.ಭೀಮಪ್ಪ ಹನಮಪ್ಪ ಗೊರವರ ಇವರ ಸ್ಮರಣಾರ್ಥ ಕೊಡಮಾಡುವ ಜಿಲ್ಲಾ ಮಟ್ಟದ ಕನಕಸಿರಿ ಪ್ರಶಸ್ತಿ ಬಿದರಿ ಚಂದ್ರಕಲಾ ಅವರಿಗೆ ಲಸಭಿಸಿದ್ದು, ಅವರ ಅನುಪಸ್ಥಿತಿಯಲ್ಲಿ ಕೊಡಮಾಡಲಾಗಲಿಲ್ಲ. ಕಾರ್ಯಕ್ರಮದಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಸಮುದಾಯದ ಮುಖಂಡರಾದ ಬಿ.ಬಿ.ಸಿದ್ದಾಪೂರ, ಬಾಯಕ್ಕ ಮೇಟಿ, ಸರಸ್ವತಿ ಕುರುಬರ, ಹನಮಂತ ರಾಕುಂಪಿ, ಎಚ್.ಬಿ.ಗೊರವರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಪ್ರಾರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು..

*ಅದ್ದೂರಿ ಕನಕದಾಸರ ಭಾವಚಿತ್ರದ ಮೆರವಣಿಗೆ
ಕಾರ್ಯಕ್ರಮ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಎಚ್.ವಾಯ್.ಮೇಟಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಅಲ್ಲದೇ ಕುಂಬ ಹೊತ್ತ ಮಹಿಳೆಯರು ಆಕರ್ಷನೀಯ ಕೇಂದ್ರ ಬಿಂದುವಾಗಿದ್ದರು. ಮೆರವಣಿಗೆಯಲ್ಲಿ ಜನಪ್ರತಿನಿಧಗಳು, ಅಧಿಕಾರಿಗಳು ಹಾಗೂ ಸಮುದಾಯದವರು ಪಾಲ್ಗೊಂಡಿದ್ದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಾನಾಕಡೆ ಸಂಚರಿಸಿ ಕಲಾಭವನಕ್ಕೆ ಮುಕ್ತಾಯಗೊಂಡಿತು.

";