ಬಾಗಲಕೋಟೆ
ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಶಿಕ್ಷಣ ಅತ್ಯಂತ ಶಕ್ತಿಶಾಲಿಯಾಗಿದ್ದು, ಆತ್ಮಸ್ಥೆöÊರ್ಯ, ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಸಿಎ ಪ್ರವೀಣ ಪೋಕಾರ ಹೇಳಿದರು.
ನಗರದ ಬವಿವ ಸಂಘದ ನೂತನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಬಸವೇಶ್ವರ ಸಂಯುಕ್ತ ಪಪೂ ಕಾಲೇಜ್‌ನ ೨೦೨೩-೨೪ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
ಜೀವನದಲ್ಲಿ ಸಾಧನೆಗೆ ಗುರುವಿನ ಅವಶ್ಯಕತೆ ಇದೆ. ಕನ್ನಡ ಮಾಧ್ಯಮದಲ್ಲಿ ಕಲಿತ ಶಿಕ್ಷಣ ಅತ್ಯಂತ ಶಕ್ತಿಶಾಲಿಯಾಗಿದ್ದು, ಪರಿಕ್ಷಾ ಸಿದ್ಧತೆ ಮಾಡಿಕೊಂಡು ಪರೀಕ್ಷಾ ಭಯ ನಿವಾರಿಸಿಕೊಳ್ಳಬೇಕು. ಆತ್ಮಸ್ಥೆöÊರ್ಯ, ಆತ್ಮವಿಶ್ವಾಸದಿಂದ ಶಿಕ್ಷಣ ಪಡೆದು ಸಾಧನೆಯತ್ತ ದಾಪುಗಾಲು ಹಾಕಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಚಾರ್ಯ ಎಸ್.ಎಸ್.ವಂಟಮುರಿ, ಭವಿಷ್ಯ ಕೊಟ್ಟ ತಂದೆ ತಾಯಿಗಳ ಋಣ ಮರೆಯಬಾರದು. ಸಮಯ ಶಿಸ್ತಿಗೆ ಮಹತ್ವ ನೀಡಬೇಕೆಂದರು.
ಉಪಪ್ರಾಚಾರ್ಯ ಶ್ರೀಶೈಲ ಚಲವಾದಿ, ಸಾಂಸ್ಕೃತಿಕ ವಿಭಾಗದ ಸಂಯೋಜಕಿ ವಿ.ಬಿ.ಕೋಲೆ. ಕವಿತಾ ಗೋಡಿಕಾರ, ಸೌಮ್ಯ ಮಾದರ, ಚಂದ್ರಿಕಾ ಗಟ್ಟಿ, ರಂಗಪ್ಪ ಮುದ್ರಣ್ಣವರ, ಬಿ.ಎಸ್.ಕಂಠಿ, ಎಸ್.ವಿ.ಹುಲಿಕಟ್ಟಿ, ಎಸ್.ಜಿ.ಗೂಗ್ಯಾಳ, ಬಿ.ಬಿ.ಹಿರೇಗೌಡರ, ವಿ.ಬಿ.ಚಿಕ್ಕಣ್ಣವರ, ಅಶ್ವಿನಿ ಸಮಗಂಡಿ ಇತರರು ಇದ್ದರು.