ಗಜೇಂದ್ರಗಡ
ಕನ್ನಡ ಮಠದ ಕನ್ನಡ ಸ್ವಾಮೀಜಿ ಎಂದು ಪ್ರಸಿದ್ದರಾಗಿದ್ದ ಚಿಂಚಣಿಯ ಸಿದ್ದಸಂಸ್ಥಾನ ಮಠದ ಪೂಜ್ಯ ಅಲ್ಲಮಪ್ರಭು ಸ್ವಾಮೀಜಿ ಇಂದು ಲಿಂಗೈಕ್ಯರಾಗಿದ್ದಾರೆ.
ಪೂಜ್ಯರು ಶಿರೋಳ ತೋಂಟದಾರ್ಯ ಶಾಖಾ ಮಠದ ಪೀಠಾಧ್ಯಕ್ಷರು ಆಗಿದ್ದರು. ಜೊತೆಗೆ ಚಿಕ್ಕೋಡಿ ತಾಲೂಕಿನ ಚಿಂಚಣಿಯ ಸಿದ್ದಸಂಸ್ಥಾನ ಮಠದ ಪೀಠಾಧಿಕಾರಿಗಳು ಆಗಿದ್ದರು.
ಶ್ರೀಗಳ ಗುರುಗಳಾಗಿದ್ದ ಲಿಂ. ಗದುಗಿನ ತೋಂಟದ ಡಾ.ಸಿದ್ದಲಿಂಗ ಸ್ವಾಮೀಜಿ ಅವರ ಸೂಚನೆ ಹಾಗೂ ಮಾರ್ಗದರ್ಶನದಲ್ಲಿ ಚಿಂಚಣಿ ಮಠವನ್ನ ಸಂಪೂರ್ಣವಾಗಿ ಕನ್ನಡದ ಮಠವನ್ನಾಗಿ ಪರಿವರ್ತಿಸಿದ್ದರು.
ಗಡಿ ಭಾಗದಲ್ಲಿ ಕನ್ನಡ ಬೆಳೆಸುವ ಪಣತೊಟ್ಟಿದ್ದ ಶ್ರೀಗಳು ತಮ್ಮ ಸೇವೆಯನ್ನ ಕನ್ನಡ ತಾಯಿಗೆ ಮುಡುಪಾಗಿಟ್ಟಿದ್ದರು. ಶ್ರೀಮಠದಿಂದ ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಅನೇಕ ಪುಸ್ತಕ ಪ್ರಕಟನೆ ಮಾಡಿದ್ದರು. ನಾಡಿನ ಅನೇಕ ಕವಿ, ಸಾಹಿತಿಗಳನ್ನ ಶ್ರೀಮಠಕ್ಕೆ ಕರೆಸಿ, ಕನ್ನಡದ ಕಂಪು ಗಡಿಯಲ್ಲಿ ಮೊಳಗಿಸುವ ಕಾಯಕದಲ್ಲಿ ನಿರತರಾಗಿದ್ದರು.
ಕನ್ನಡದ ಸ್ವಾಮೀಜಿಗಳು ಲಿಂಗೈಕ್ಯರಾಗಿರುವುದು ಕರುನಾಡಿಗೆ ನಷ್ಟ…
ಪೂಜ್ಯರೇ ಹೋಗಿ ಬನ್ನಿ… ಗಡಿಭಾಗದಲ್ಲಿ ನೀವು ಬಿತ್ತಿದ ಕನ್ನಡದ ಸಸಿಗಳು ಹೆಮ್ಮರವಾಗಿವೆ. ಫಲ ನೀಡುತ್ತಿವೆ. ತಮ್ಮ ಕನ್ನಡ ಕಾಯಕ ಸದಾ ಅಮರ…!
ಶರಣು ಶರಣಾರ್ಥಿಗಳು….