This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಮಕ್ಕಳ ಮನೋಸ್ಥಿತಿ ಅರಿತು ಶಿಕ್ಷಣ ನೀಡಿ:ಸಚಿವ ಕಾರಜೋಳ

ನಿಮ್ಮ ಸುದ್ದಿ ಬಾಗಲಕೋಟೆ

ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಮನೋವಿಜ್ಞಾನಿಯಾಗಿ, ತತ್ವಜ್ಞಾನಿಯಾಗಿ ಮಕ್ಕಳ ಮನಸ್ಥಿತಿ ಅರಿತು ಶಿಕ್ಷಣ ನೀಡುವಂತಾಗಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಕೇವಲ ಸಂಬಳಕ್ಕಾಗಿ ಕೆಲಸ ಮಾಡದೇ ಉತ್ತಮ ಭವಿಷ್ಯ ನಿರ್ಮಿಕಸುವ ಕಾರ್ಯವಾಗಬೇಕು. ಪ್ರತಿ ಶಾಲೆಗೆ ಮೂಲಭೂತ ಸೌಕರ್ಯ, ಪ್ರತಿ ಶಾಲೆಗೆ ಉತ್ತಮ ಗ್ರಂಥಾಲಯ, ಗಣಕಯಂತ್ರ ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ ಎಂದರು.

ಶಿಕ್ಷಣಕ್ಷೇತ್ರದ ಮಹಾನ್ ವ್ಯಕ್ತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸಾಮಾಜಿಕ ಚಿಂತನೆ, ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅವೀಸ್ಮರಣೆ ಸೇವೆಗಾಗಿ ಅವರ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಕಳೆದ ವರ್ಷದಿಂದ ಕೊರೊನಾ ಸೋಂಕು ರೋಗದಿಂದಾಗಿ ಮಕ್ಕಳಿಗೂ, ಶಾಲೆಗೂ, ಶಿಕ್ಷಕರಿಗೂ ಸಂಬಂಧವಿಲ್ಲದಂತಾಗಿತ್ತು. ಅಂತಹ ಸಂದರ್ಭದಲ್ಲಿಯೂ ಕೊರೊನಾ ನಿಯಮ ಪಾಲಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಶಿಕ್ಷಣ ನೀಡಿದ್ದಿರಿ ಅದಕ್ಕಾಗಿ ತಮ್ಮೆಲ್ಲರಿಗೂ ಅಭನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳು ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಆಚರಣೆ ದಿನದಂದು ರಾಜ್ಯದ ೭೫೦ ಶಾಲೆಗಳನ್ನು ಆಯ್ಕೆ ಮಾಡಿ ಪ್ರತಿ ಶಾಲೆಗೆ ೧೦ ಲಕ್ಷ ರೂ.ಗಳನ್ನು ನೀಡುವುದಾಗಿ ತಿಳಿಸಿದ್ದು, ಆ ಹಣದಿಂದ ಕಂಪ್ಯೂಟರ ಶಿಕ್ಷಣ, ಶುದ್ದ ಕುಡಿಯುವ ನೀರು, ಶೌಚಾಲಯ ಹಾಗೂ ಮಕ್ಕಳ ಉಪಯುಕ್ತ ಕಾರ್ಯಕ್ಕಾಗಿ ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಅವರು ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ಅಪಾರ ಗೌರವವಿದೆ. ಡಿಜಟಲೀಕರಣದತ್ತ ಮುನ್ನಡೆಯುತ್ತಿರುವ ಕಾಲಘಟ್ಟದಲ್ಲಿ ಮಕ್ಕಳ ಭವಿಷ್ಯ ರೂಪಿಸಲು ಪ್ರತಿಯೊಬ್ಬ ಶಿಕ್ಷಕ ಹೆಚ್ಚು ಶ್ರಮಿಸಬೇಕಿದೆ. ಒಳ್ಳೆಯ ನಾಗರಿಕರನ್ನು ತಯಾರು ಮಾಡುವ ಕಾರ್ಯ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅದ್ಯಕ್ಷ ಬಸಲಿಂಗಪ್ಪ ನಾವಲಗಿ, ಜಿಲ್ಲಾ ಪಂಜಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಟಿ.ಭೂಬಾಲನ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಇಳಕಲ್ ಡಯಟ್‌ನ ಪ್ರಾಚಾರ್ಯ ಬಿ.ಕೆ.ನಂದನೂರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ವಂದಿಸಿದರು. ಸಂಗಮೇಶ ಸಣ್ಣತಂಗಿ ನಿರೂಪಿಸಿದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಸನ್ಮಾನ
ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ೧೪ ಜನ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ೭ ಜನ ಪ್ರೌಢಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಪ್ರಾಥಮಿಕ ಶಾಲಾ ವಿಭಾಗ :
ಬಾದಾಮಿ ತಾಲೂಕಿನ ಭಾಗವ್ವ ಆಲೂರ, ಎಂ.ಎಸ್.ನೆರಬೆAಚಿ, ಬಾಗಲಕೋಟೆ ತಾಲೂಕಿನ ರಮೇಶ ಮಾಯಪ್ಪನವರ, ಎ.ಬಿ.ಡೊಂಬರ, ಐ.ಡಿ.ಅತ್ತಾರ, ಬೀಳಗಿ ತಾಲೂಕಿನ ಜೆ.ಬಿ.ಕಲಾದಗಿ, ಮೋಹನ್‌ಕುಮಾರ ಎಸ್, ಹುನಗುಂದ ತಾಲೂಕಿನ ಸೋಮಪ್ಪ ಗರೇಬಾಳ, ಜಮಖಂಡಿ ತಾಲೂಕಿನ ಕಟ್ಟೆಪ್ಪ ಪೂಜಾರ, ಸೈಯದ್ ಕೊಡಗಲಿ, ಸಿ.ಪಿ.ಹಿರೇಮಠ, ಮುಧೋಳ ತಾಲೂಕಿನ ಗಣಪತಿ ಕೋಲಾರ, ಸುರೇಶ ಗಿಂಡಿ, ಬಾದಾಮಿ ತಾಲೂಕಿನ ವೀರಣ್ಣ ಶೆಟ್ಟರ.

ಪ್ರೌಢಶಾಲಾ ವಿಭಾಗ :
ಎಂ.ಜಿ.ಚೌಧರಿ, ಪಿ.ಬಿ.ಭಜಂತ್ರಿ, ವೀರಭದ್ರಪ್ಪ ಮೊಕಾಶಿ, ಎಸ್.ಸಿ.ರಂಜಣಗಿ, ಮುಕ್ತಾರ ನಾಯಕವಾಡಿ, ಬಿ.ಬಿ.ಕೌಜಲಗಿ ಹಾಗೂ ರವಿಕುಮಾರ ಮದರಖಂಡಿ.

Nimma Suddi
";