ಬಾಗಲಕೋಟೆ
ಮುಂದಿನ ಮೂರನಾಲ್ಕು ತಿಂಗಳಲ್ಲಿ ಎಲ್ಲ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು
ಜಿಲ್ಲಾಡಳಿತ ಭವನ ಆಡಿಟೋರಿಯಂ ಸಭಾ ಭವನದಲ್ಲಿ ಮಂಗಳವಾರದAದು ಆಯೋಜಿಸಲಾಗಿದ್ದ ಭಾಗಲಕೋಟೆ ಜಿಲ್ಲೆ ಕಾರ್ಮಿಕರ ಸಂಘಟನೆಗಳು ಹಾಗೂ ಉದ್ಯಮಿಗಳೊಂದಿಗೆ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾರ್ಮಿಕರಗಿರುವ ಸಾಕಷ್ಟು ಸಮಸ್ಯೆಗಳು ಸರಕಾರದ ಗಮನಕ್ಕೆ ಬಂದಿರುತ್ತವೆ. ಕಾರ್ಮಿಕ ಸಂಘಟನೆಗಳು ಸ್ವಲ್ಪ ಕಾಲಾವಕಾಶ ನೀಡಬೇಕು. ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ಹೋಟೆಲ್ ಗಳಲ್ಲಿ ಕೆಲಸ ಮಾಡುವರು ಸೇರಿದಂತೆ ಎಲ್ಲ ಬಗೆಯ ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಯತ್ನಿಸಲಾಗುವುದು. ಆಟೋ ಚಾಲಕರು ಸೇರಿ ಯಾವುದೇ ಚಾಲಕರು ಚಿಂತಿಸುವ ಅಗತ್ಯವಿಲ್ಲ, ಮೂರು ತಿಂಗಳ ಅವಧಿಯೊಳಗಾಗಿ ವಾಹನ ಚಾಲಕರಿಗೆ ಒಂದು ಹೋಸ ಕಾರ್ಯಕ್ರಮವನ್ನು ರೂಪಿಸಲಾಗುವುದು. ಇಂದು ಕಾರ್ಮಿಕರ ಸಂಘಟನೆಗಳು ಮತ್ತು ಉಧ್ಯಮಿಗಳು ನೀಡಿರುವ ಸಲಹೆಗಳನ್ನು ಅಳವಡಿಸಿಕೊಂಡು ಪರಿಹಾರದ ಮಾರ್ಗದಲ್ಲಿ ಕಾರ್ಮಿಕ ಇಲಾಖೆ ಮುನ್ನೆಡೆಯಲಿದೆ ಎgದರು.
ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶ ಮೊಹಮ್ಮದ ಮೊಹಿಸಿನ್ ಅವರು ಮಾತನಾಡಿ ಅರ್ಹ ಕಾರ್ಮಿಕ ಫಲಾನುಭವಿಗಳಿಗೆ ಸರಕಾರದ ಯೋಜನೆಗಳ ಲಾಭ ದೊರೆಯುವಂತೆ ಮಾಡಲಾಗುತ್ತಿದೆ. ನಿಜವಾದ ಕಾರ್ಮಿಕರಲ್ಲದವರೇ ಹೆಚ್ಚು ನೋಂದಣಿ ಮಾಡಿಸಿಕೊಂಡಿದ್ದಾರೆ. ಕಾರ್ಮಿಕರ ಕಾರ್ಡ ಪಡೆದಿದ್ದಾರೆ ಎಂಬ ದೂರುಗಳನ್ನು ಪರಿಶೀಲಿಸಲಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ದೊರೆಯಲಿದ್ದು ಯಾರೂ ಆತಂಕ ಪಡೆಬೇಕಿಲ್ಲ. ಈ ಸಧ್ಯ ಕಟ್ಟಡ ಕಾರ್ಮಿಕರಿಗೆ ಮಾತ್ರ ಕೆಲವು ಯೋಜನೆಗಳಿರುತ್ತವೆ. ಟೈಲರ್ ಗಳು ಮತ್ತು ಇತರೆ ಕಾರ್ಮಿಕರ ಮನವಿಗಳನ್ನು ಮುಖ್ಯಮಂತ್ರಿಗಳು ಹಾಗೂ ಇಲಾಖೆ ಸಚಿವರ ಗಮನಕ್ಕೆ ತಂದು ಚರ್ಚಿಸಲಾಗುವುದು ಎಂದರು.
ಜಿಲ್ಲೆಯ ವಿವಿಧ ಸ್ಥಳಗಳಿಂದ ಬಂದAತಹ ಕಾರ್ಮಿಕರ ಸಮಸ್ಯೆಗಳನ್ನು ಕಾರ್ಮಿಕ ಇಲಾಖೆ ಆಯುಕ್ತ ಗೋಪಾಲ ಕೃಷ್ಣ, ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿ ಕಾರ್ಯದರ್ಶಿ ಬಿ. ಭಾರತಿ ಅವರು ಆಲಿಸಿ, ಮನವಿಗಳನ್ನು ಸ್ವೀಕರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಮ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಶಿದರ ಕುರೇರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.