ಬೆಂಗಳೂರು: ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವ ಆರೋಪಿಗಳಿಂದ ಪಂಚನಾಮೆ ನಡೆಸಿ ಮದ್ಯದ ಬಾಟಲಿ ವಶಪಡಿಸಿಕೊಂಡ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಆ ಸಂಬಂಧ ಇಬ್ಬರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದುಗೊಳಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಶಿಕ್ಷೆ ರದ್ದುಗೊಳಿಸುವಂತೆ ಕೋರಿ ದಯಾನಂದ ಮತ್ತು ಆರ್. ರವಿ ಎಂಬುವರು ಸಲ್ಲಿಸಿದ್ದ ಅರ್ಜಿ ಕುರಿತು ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಇದು ಕಾನೂನು ಬಾಹಿರ,” ಎಂದು ನ್ಯಾಯಪೀಠ ತಿಳಿಸಿದೆ.”ಅಲ್ಲದೆ, ಎಫ್‌ಐಆರ್ ದಾಖಲಿಸಿರುವುದು ಅನೂರ್ಜಿತವಾಗಿದೆ. ಹೀಗಿರುವಾಗ ಶಿಕ್ಷೆ ರದ್ದಾಗಲಿದೆ,” ಎಂದು ತಿಳಿಸಿರುವ ನ್ಯಾಯಪೀಠ, ಆರೋಪಿಗಳನ್ನು ಖುಲಾಸೆಗೊಳಿಸಿದೆ.ಅರ್ಜಿದಾರರ ಪರ ವಕೀಲರು, ”ತನಿಖಾಧಿಕಾರಿಯ ಹೇಳಿಕೆ ಅನುಸಾರ 2008ರ ನ. 24ರಂದು ಸುಮಾರು ಬೆಳಗ್ಗೆ 10.15ಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಶೋಧ ಕಾರ್ಯಾಚರಣೆ ಹಾಗೂ ವಶಪಡಿಸಿಕೊಳ್ಳುವಿಕೆ ಪ್ರಕ್ರಿಯೆ ಬೆಳಗ್ಗೆ 8.30 ರಿಂದ 8.45 ರ ಆಸುಪಾಸಿನಲ್ಲಿ ನಡೆಸಲಾಗಿದೆ.
”ಯಾವುದೇ ಆರೋಪ ಎದುರಾದಲ್ಲಿ ಮಾಹಿತಿದಾರರು ಸಹಿ ಹಾಕಿದ ದೂರಿನಿಂದ ಎಫ್‌ಐಆರ್ ದಾಖಲಿಸಬಹುದಾಗಿದೆ. ಇಲ್ಲವೇ ಪೊಲೀಸ್ ಅಧಿಕಾರಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಾರೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಈ ಪ್ರಕ್ರಿಯೆ ನಡೆದಿಲ್ಲ. ಬದಲಿಗೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದವರಿಂದ ಪಂಚನಾಮೆ ನಡೆಸಿ ಮದ್ಯ ವಶಪಡಿಸಿಕೊಂಡ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಎಫ್‌ಐಆರ್ ದಾಖಲಿಸುವ ಮೊದಲೇ ಶೋಧ ಕಾರ್ಯಾಚರಣೆ ನಡೆಸಿ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಕಾನೂನಿಗೆ ವಿರುದ್ಧವಾದ ನಡೆ. ಅಂತಹ ಎಫ್‌ಐಆರ್‌ನ ಮೇಲೆ ನ್ಯಾಯಾಲಯವು ಕ್ರಮ ಕೈಗೊಳ್ಳಬಾರದು,” ಎಂದು ಆಕ್ಷೇಪಿಸಿದರು.”ಅಲ್ಲದೆ, ಸೆಕ್ಷನ್ 313ರಡಿ ಹೇಳಿಕೆಗೆ ಸರಿಯಾದ ದಾಖಲೆಗಳಿಲ್ಲದ ವೇಳೆ ಶಿಕ್ಷೆ ದಾಖಲಿಸುವುದು ಸೂಕ್ತವಲ್ಲ ಎಂದು ಹೇಳಲಾಗಿದೆ. ಆದರೆ, ವಿಚಾರಣಾ ನ್ಯಾಯಾಲಯವು ಕಾನೂನಿನ ಅಡಿಯಲ್ಲಿ ಸ್ಥಾಪಿಸಲಾದ ಕಾರ್ಯವಿಧಾನವನ್ನು ಅನುಸರಿಸದೆ ಶಿಕ್ಷೆ ದಾಖಲಿಸಿದೆ.
, ಪ್ರಕರಣವನ್ನು ರದ್ದುಗೊಳಿಸಬೇಕು,” ಎಂದು ಕೋರಿದರು.ಹುಣಸೂರಿನ ಅಬಕಾರಿ ವಿಭಾಗದ ಸಬ್ ಇನ್‌ಸ್ಪೆಕ್ಟರ್ 2008ರ ನ.24 ರಂದು ಬೆಳಗ್ಗೆ 10:15 ರ ಸಮಯದಲ್ಲಿ ಚಲ್ಲಹಳ್ಳಿಯ ಬಳಿ ಸಿಬ್ಬಂದಿಯೊಂದಿಗೆ ಗಸ್ತು ತಿರುಗುವ ವೇಳೆ ಬಲ್ಲ ಮೂಲಗಳ ಮಾಹಿತಿ ಆಧಾರದಲ್ಲಿ ದ್ವಿ ಚಕ್ರವಾಹನದಲ್ಲಿ ವ್ಯಕ್ತಿಯೊಬ್ಬರು ಮದ್ಯ ಸಾಗಾಟ ಮಾಡುತ್ತಿರುವ ಅಂಶ ತಿಳಿದು ಬಂದಿತ್ತು.