ಶ್ರೀರಾಮನೂರು ಇನ್ಮೊಂದೆ ಭಕ್ತಿಯ ಶ್ರದ್ಧಾ ಸೇವಾ ಕೇಂದ್ರ
ಹಿಂದು ಭಕ್ತರ ಹೃದಯ ಶ್ರೀರಾಮನೂರು
———————–
ಜಗತ್ತಿನಲ್ಲಿಯೇ ಹಿಂದೂ ಧರ್ಮ ದೇವಸ್ಥಾನಗಳ ತವರೂರು ಎಂದು ಕರೆಸಿಕೊಳ್ಳುವ ಭಾರತದಲ್ಲಿ ದೇವರು ಮತ್ತು ದೇವಸ್ಥಾನಕ್ಕೆ ಇರುವಷ್ಟು ಪ್ರಾಮುಖ್ಯತೆ ಜಗತ್ತಿನ ಯಾವ ರಾಷ್ಟ್ರದಲ್ಲಿಯೂ ಇಲ್ಲ
ಅನೇಕ ಸಾಮ್ರಾಜ್ಯಗಳು ದಾಳಿಕೋರರು ದಾಳಿ ಅತಿಕ್ರಮಣ ಮಾಡಿ ಹಿಂದೂ ದೇವಸ್ಥಾನಗಳನ್ನು ಸಂಪೂರ್ಣ ಅಧೋಗತಿಗೆ ತಳ್ಳಿ ಹೋದ ಮೇಲೆಯೂ ಭಾರತದಲ್ಲಿ ಮತ್ತೆ ಹಿಂದು ದೇವಸ್ಥಾನಗಳು ತನ್ನ ವೈಭವೀಕರಣದೊಂದಿಗೆ ಮುನ್ನಲೆಗೆ ಬರುತ್ತಿವೆ
ಅನೇಕ ಸಾಮ್ರಾಜ್ಯಗಳ ಆಕ್ರಮಣ ಮಾಡಿ ಲೂಟಿ ನಂತರವೂ ದೇವಸ್ಥಾನಗಳಲ್ಲಿರುವ ಸಂಪತ್ತಷ್ಟೇ ದೋಚಿ ಹೋಗಬಹುದಿತ್ತು ಆದರೆ ಅವರಿಗೆ ಗೊತ್ತಿತ್ತು ಹಿಂದೂ ಧರ್ಮದ ಆತ್ಮ ಇರೋದೇ ದೇವಾಲಯಗಳಲ್ಲಿ ಎಂದು ಹಿಂದು ದೇವಾಲಯ ನಿಶ್ಯಕ್ತಗೊಳಿಸಬೇಕು
ಅಂದರೆ ಇಡೀ ದೇವಸ್ಥಾನಗಳ ಕೊಳ್ಳೆ ಹೊಡೆದು ಹಾಳು ಮಾಡಬೇಕು ಎಂದೇನಿಲ್ಲ ಕೇವಲ ಗರ್ಭಗುಡಿಯ ಮೂರ್ತಿ ಬಗ್ನಗೊಳಿಸಿದರೆ ಸಾಕು ಅಲ್ಲಿಗೆ ಆ ಹಿಂದೂ ದೇವಾಲಯದ ಪೂಜೆ ನಿಂತು ಬಿಡುತ್ತದೆ ಇದನ್ನು ತಿಳಿದುಕೊಂಡಿದ್ದ ದಾಳಿ ಕೋರರು
ಭಾರತದ ಬಹುತೇಕ ದೇವಾಲಯಗಳನ್ನು ಎಲ್ಲ ತರದಲ್ಲೂ ನಾಶ ಮಾಡಿದರು ಸಾವಿರಾರು ವರ್ಷಗಳ ದಾಳಿ ಕೋರರು ಬ್ರಿಟಿಷರ ದಾಳಿಯ ತನಕವೂ ಸಂಪತ್ತು ಲೂಟಿ ಮತ್ತು ದೇವಸ್ಥಾನ ಹಾಳು ಮಾಡುತ್ತಲೇ ಬಂದರೂ ಸಮಾಧಾನವಾಗಲಿಲ್ಲ ಹಿಂದುಗಳು ದೇವಸ್ಥಾನದ ಮೇಲೆ ತಮ್ಮ ನೆಲೆ ಕಂಡುಕೊಳ್ಳುತ್ತಿದ್ದ ಸಾಕಷ್ಟು ಸಂಪತ್ತು ವೈಭವ ಕಳೆದುಕೊಂಡ ನಂತರವೂ ತನ್ನ ವೈಭವೀಕರಣ ಮತ್ತೆ ನಿರ್ಮಾಣ ಮಾಡಿಕೊಳ್ಳುವಲ್ಲಿ ಹಿಂದೂಸ್ಥಾನದ ದೇವಸ್ಥಾನಗಳು ಜಿರ್ಣೋದ್ದಾರವಾಗುತ್ತಿರುವುದು ಹಿಂದೂಗಳಿಗೆ ಉಮ್ಮಸ್ಸು ನೀಡುತ್ತಿದೆ
ನಮ್ಮ ಗುರುಕುಲಗಳು ಸನಾತನ ಪದ್ದತಿಗಳು ಧರ್ಮ ಗ್ರಂಥಗಳು ದೇವಾಲಯಗಳು ಸಂಪತ್ತು ಪುರಾತನ ವೈಭವ ಅಪಾರಜ್ಞಾನ ಭಂಡಾರ ಎಲ್ಲವೂ ದಾಳಿಕೋರರ ಅಟ್ಟಹಾಸಕ್ಕೆ ಬಲಿಯಾಗಿ ಶಾಶ್ವತವಾಗಿ ಈ ದೇಶ ಬಿಟ್ಟು ಹೋಗಿದ್ದವು ಸ್ವತಂತ್ರ ನಂತರ ದೇವಸ್ಥಾನಗಳ ಅಭಿವೃದ್ಧಿ ಮಾಡುವಂತಿಲ್ಲ ಯಾವ ಸ್ಥಿತಿಯಲ್ಲಿವೆ ಅದೇ ಸ್ಥಿತಿಯಲ್ಲಿ ಮುಂದುವರೆಯಬೇಕು ಬದಲಾಯಿಸುವಂಥ ಇಲ್ಲ ಎಂಬ ಕಾನೂನು ಜಾರಿಗೆ ತಂದ ಪ್ರಯುಕ್ತ ದೇವಸ್ಥಾನಗಳು ಅಭಿವೃದ್ಧಿ ಮರೆಮಾಚಾಯಿತು
ಸುಮಾರು ಎರಡು ದಶಕಗಳಿಂದ ಎಚ್ಚೆತ್ತುಕೊಂಡ ಭಾರತೀಯ ಜನರು ಸರ್ಕಾರಗಳು ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸಿ ಜನರನ್ನು ಆಕರ್ಷಿಸುವಂತೆ ಮಾಡುತ್ತಾ ಬಂದಿರುವ ಪರಿಣಾಮ ಸರ್ಕಾರಕ್ಕೆ ಆದಾಯವು ಬರತೊಡಗಿತ್ತು ಇದರಿಂದ ಹಿಂದೂ ದೇವಸ್ಥಾನಗಳ ಅಭಿವೃದ್ಧಿ ಪರ್ವವೂ ಪ್ರಾರಂಭವಾಯಿತು ದೇಶದಲ್ಲಿ ಅನೇಕ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುವಂತೆ ಹೆಚ್ಚು ಗಮನಹರಿಸಿದ ಸರ್ಕಾರಗಳು ಕಾಶಿ ದೇವಸ್ಥಾನ ಜಿರುಣೋದ್ಧಾರದ ನಂತರ ಹಿಂದುಗಳ ದೇವರ ಸಾಮ್ರಾಜ್ಯ ಅಯೋಧ್ಯ ರಾಮ ಮಂದಿರ ಹೊಸ ಕಟ್ಟಡ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದ ನಂತರ ಭಕ್ತರಿಂದ ಪ್ರಾರಂಭವಾದ ದೇಣಿಗೆ ಸಂಗ್ರಹ ಕಾರ್ಯ ನಂತರ ಕೂಡಿದ ಧೆಣಿಗೆ ಮತ್ತು ಕಾಣಿಕೆಯ ಬೃಹತ್ ಪ್ರಮಾಣ ಮೊತ್ತ ಸಂಗ್ರಹವಾದದ ವಾಗಿದ್ದರಿಂದ ಸಂಪೂರ್ಣ ದೇವಸ್ಥಾನವನ್ನು ಭಕ್ತರಿಂದಲೇ ಬಂದ ಕಾಣಿಕೆಯಲ್ಲಿ ನಿರ್ಮಾಣ ಮಾಡಬೇಕೆನ್ನುವ ಶ್ರೀ ರಾಮ ಟ್ರಸ್ಟಿ ನಿರ್ಧಾರದಂತೆ ನಿರ್ಮಾಣ ಮಾಡಲಾಗುತ್ತಿದ್ದು ಅಯೋಧ್ಯ ನಗರಿಯ ಇನ್ನುಳಿದ ಅಭಿವೃದ್ಧಿ ಕಾರ್ಯವನ್ನು ಕೇಂದ್ರ ರಾಜ್ಯ ಸರ್ಕಾರ ಸಹೋಗದಲ್ಲಿ ನಿರ್ಮಾಣ ಮಾಡುತ್ತಿರುವುದು ಹಿಂದುಗಳಿಗೆ ಬಲಬಂದಂತಾಗಿದೆ
ನೂತನವಾಗಿ ನಿರ್ಮಾಣವಾಗುತ್ತಿರುವ ನೂತನ ರಾಮಮಂದಿರಕ್ಕೆ ಕರ್ನಾಟಕದಿಂದ ಒಟ್ಟು ನಾಲ್ಕು ಕೊಡುಗೆಗಳು ವಿಶೇಷತೆ ಪಡೆದಿದೆ ದೇವಸ್ಥಾನ ನಿರ್ಮಾಣದ ಟ್ರಸ್ಟಿಯ ಉಡುಪಿ ಪೇಜಾವರ ಮಠದ ಶ್ರೀಗಳ ಸದಸ್ಯರಾಗಿರುವುದು ಒಂದನೇ ಕೊಡುಗೆ ಆದರೆ ಶಿರಸಿ ಮೂಲದ ಶ್ರೀ ಗೋಪಾಲ್ ನಾಗರಕಟ್ಟೆ ಕಟ್ಟಡ ಸಮಿತಿಯ ಉಸ್ತುವಾರಿಯಾಗಿರುತ್ತಾರೆ ಬಾಲ ರಾಮನ ಮೂರ್ತಿ ಕೆತ್ತನೆಗೆ ಕರ್ನಾಟಕದ ಹೆಗ್ಗಡದೇವನಕೋಟೆಯ ಕಲ್ಲು ಹೋಗಿರುವುದು ಕರ್ನಾಟಕದ ಮತ್ತೊಂದು ಕೊಡುಗೆ ರಾಮನ ಸಂಪೂರ್ಣ ದೇವಸ್ಥಾನದ ಪ್ಲೀಂತ ಕೆಳಗೆ (ಕಟ್ಟೆಗೆ) ಹಾಕಲು ಕರ್ನಾಟಕ ಕಲ್ಲನ್ನು ಬಳಸಿರುವುದು ಮತ್ತೊಂದು ವಿಶೇಷ ಹೀಗೆ ನಾಲ್ಕು ತರಹದ ವಿಶೇಷ ಸೇವೆ ಕರ್ನಾಟಕದಿಂದ ಶ್ರೀ ರಾಮನ ದೇವಸ್ಥಾನಕ್ಕೆ ಅರ್ಪಿತವಾಗಲಿರುವುದು, ಕರ್ನಾಟಕ ಕನ್ನಡಿಗರ ಎಲ್ಲ ರಾಜ್ಯಗಳಂತೆ ಕರ್ನಾಟಕ ರಾಜ್ಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಣೆಯಾಗಿದ್ದು ಎಲ್ಲರೂ ಹೆಮ್ಮೆಯ ವಿಷಯವಾಗಿದೆ
ವಿಶ್ವದ ಮೊದಲ ರಾಜಧಾನಿ ಎನಿಸಿಕೊಂಡಿರುವ ಅಯೋಧ್ಯ ಸರಿಯು ನದಿಯ ತೀರದ ಮೇಲೆ ಮನು ರಾಜನಿಂದ ನಿರ್ಮಿತವಾದ ಅಯೋಧ್ಯನಗರಿ ಇನ್ನು ಮುಂದೆ ಹಿಂದುಗಳ ಸಾಮ್ರಾಜ್ಯವಾಗಿ ಭಾರತದಲ್ಲಿ ಹಿಂದೂ ದೇವಸ್ಥಾನಗಳ ರಾಜಧಾನಿಯಾಗಿ ಅಭಿವೃದ್ಧಿಯಾಗಲಿದೆ ಎಂದು ಮನಗಂಡಿರುವ ಕೇಂದ್ರ ಸರ್ಕಾರ ಇದೇ ಉದ್ದೇಶಕ್ಕಾಗಿ ಅಯೋಧ್ಯೆಯ ರಾಮಮಂದಿರವನ್ನು ಕಟ್ಟುವ ಅಚಲದಿಂದಲೇ ಜಗತ್ತಿನ ಇತಿಹಾಸ ಪುಟ ಸೇರಲಿದೆ ಬೃಹತ್ ಆಕಾರದ ದೇವಸ್ಥಾನ ನಿರ್ಮಿಸಿ ಹಿಂದುಗಳ ಅಚ್ಚು ಮೆಚ್ಚಿನ ರಾಮನ ದೇವಸ್ಥಾನವನ್ನು ಸರಕಾರ ಕಟ್ಟಡ ಕಟ್ಟಲು ಕೈಗೆತ್ತಿಕೊಂಡ ನಂತರ ಹಿಂದುಗಳ ಸಂಗ್ರಹಿಸಿದ ಧೆಣಿಗೆಯ ಮೊತ್ತದಿಂದಲೇ ರಾಮಮಂದಿರ ಪೂರ್ಣಗೊಳ್ಳಲಿದೆ ಎನ್ನುವುದು ಹಿಂದುಗಳ ಮೇಲಿನ ಭರವಸೆ ನಂಬಿಕೆಗಳು ಹೆಚ್ಚಾಗ ತೊಡಗಿವೆ ರಾಮನ ಮಂದಿರವು ಜಗತ್ತಿನಲ್ಲಿಯೇ ವಿಶಿಷ್ಟತೆಯಿಂದ ಕೂಡಿದ ದೇವಸ್ಥಾನವಾಗಿ ನಿರ್ಮಾಣವಾಗುತ್ತಿದೆ ಒಂದು ದಿನಕ್ಕೆ ಒಂದು ಲಕ್ಷ ಭಕ್ತರಿಗೆ ಸಾವಿರ ವರ್ಷಗಳ ಭೂಕಂಪಕ್ಕೆ ನಲುಗದ ದೇವಸ್ಥಾನ ನಿರ್ಮಾಣವಾಗುತ್ತಿದೆ ಕಬ್ಬಿಣ ರಹಿತ ವಾಗಿರುವ ಈ ಕಟ್ಟಡ ಬರಿ ಕಲ್ಲುಗಳಿಂದ ನಿರ್ಮಾಣವಾಗುತ್ತಿದೆ ರಾಮನ ದೇವಸ್ಥಾನ ಪ್ಲಿಂತಗೆ ದಕ್ಷಿಣ ಭಾರತದ ಕರ್ನಾಟಕದ ಕಲ್ಲನ್ನು ಹಾಕಿರುವುದು ಇನ್ನೊಂದು ವಿಶೇಷ ರಾಮನ ದೇವಸ್ಥಾನದ ಮಣ್ಣು ಸಡಿಲವಿರುವುದರಿಂದ ಸುಮಾರು ಆರುವರೆ ಎಕರೆ ಜಾಗದಲ್ಲಿ 48 ರಿಂದ 50 ಅಡಿಗಳ ವರೆಗೆ ಆಳ ತೆಗೆದು ಈ ಆಳದಲ್ಲಿ ಸುಮಾರು 48 ಲೇಯರ್ ಸಿಮೆಂಟ್ ಕಡಿ ಉಸುಗು ಮಿಶ್ರಣ ಮಾಡಿ ಕಾಂಕ್ರೀಟ್ ತುಂಬುತ್ತಾ ವೈಬ್ರೇಶನ್ ಪ್ರಶರ್ ಹಾಕಿ ಕಬ್ಬಿಣ ರಹಿತವಾಗಿ ನಿರ್ಮಾಣ ಮಾಡುತ್ತಿರುವುದು ರಾಮಮಂದಿರದ ಇನ್ನೊಂದು ವಿಶೇಷವಾಗಿದೆ
ದೇವಸ್ಥಾನದ ನಿರ್ಮಾಣ ಕಾರ್ಯವನ್ನು ದೇಶದ ಪ್ರತಿಷ್ಠಿತ ಸಂಸ್ಥೆಯಾದ ಎಲ್‌ಎನ್‌ಟಿ ಸಂಸ್ಥೆ ನಿರ್ಮಾಣ ಮಾಡುವ ಹೊಣೆ ಹೊತ್ತಿದೆ, ಮೇಲ್ತುವಾರಿ ಲೆಕ್ಕಪತ್ರದ ವ್ಯವಹಾರಗಳ ಮೇಲ್ವಿಚಾರಣೆ ಟಾಟಾ ಸಂಸ್ಥೆ ನಿರ್ವಹಿಸುತ್ತಿದೆ ಎರಡು ಸಂಸ್ಥೆಗಳ ಸಮ್ಮಿಲನದಲ್ಲಿ ಸುಮಾರು 180 ರಿಂದ 185 ಇಂಜಿನಿಯರ್ಸುಗಳು ದೇವಸ್ಥಾನ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿರುತ್ತಾರೆ ರಾಮ ಮಂದಿರ ದೇವಸ್ಥಾನದ ಗರ್ಭಗುಡಿಯ ಮೂರ್ತಿ ನಿರ್ಮಾಣ ಕಾರ್ಯ ಮೂವರು ಶಿಲ್ಪ ಕಾರರಿಂದ ನಡೆದಿದ್ದು ಈ ಮೂರ್ತಿ ಕೆತ್ತಲು ನಮ್ಮ ಕರ್ನಾಟಕದ ಹೆಗ್ಗಡದೇವನಕೋಟೆಯ ಕಲ್ಲಿನಲ್ಲಿ ನಿರ್ಮಾಣವಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆ ಎನಿಸುತ್ತಿದೆ ಐದು ವರ್ಷದ ಬಾಲಕನ ರೂಪದ ವಿಗ್ರಹ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾನವಾಗಲಿದ್ದು ಹಿಂದುಗಳ ದೇವರ ಸಾಮ್ರಾಜ್ಯ ಅಯೋಧ್ಯೆಯ ರಾಮಮಂದಿರ ನಿರ್ಮಾಣವಾಗುತ್ತಿದ್ದು ಭಾರತದ ಇತಿಹಾಸದ ಪುಟ ಸೇರಲಿದೆ ರಾಮನ ದೇವಸ್ಥಾನ ಭಕ್ತರ ಧೆಣಿಗೆಯಿಂದಲೇ ನಿರ್ಮಾಣವಾಗುತ್ತಿರುವುದರಿಂದ ರಾಮನ ದರ್ಶನಕ್ಕೆ ಬರುವ ಪ್ರತಿಯೊಬ್ಬರಿಗೂ ಶಾಶ್ವತ ಉಚಿತ ದರ್ಶನ ನೀಡಲು ಅಯೋಧ್ಯ ರಾಮಮಂದಿರದ ಕಮಿಟಿ ನಿರ್ಧಾರ ಮಾಡಿರುವುದು ಹಿಂದುಗಳಿಗೆ ಮತ್ತಷ್ಟು ಪುಷ್ಟಿಯನ್ನು ನೀಡಿದಂತಾಗಿದೆ
ಸರಕಾರ ನೀಡಿರುವ 70 ಎಕರೆ ಜಾಗದ ದಕ್ಷಿಣ ಭಾಗಕ್ಕೆ 6.20 ಎಕರೆ ಜಾಗದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಅತ್ಯಂತ ವಿಶಿಷ್ಟ ವಿಶೇಷವಾಗಿದೆ ಈ ದೇವಸ್ಥಾನ ನಾಗರ ಶೈಲಿಯಲ್ಲಿದ್ದು ರಾಜಸ್ಥಾನದ ಚಂದ್ರಕಾಂತ ಸೋಂಪುರ ಮಾರ್ಗದರ್ಶನದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿದ್ದು ಒಟ್ಟು ರಾಮನ ಮೂರು ಮೂರ್ತಿಗಳ ನಿರ್ಮಾಣವಾಗುತ್ತಿದ್ದು ಒಂದು ಮೂರ್ತಿಯನ್ನು ಗರ್ಭಗುಡಿಯಲ್ಲಿ ಇನ್ನೆರಡು ಮೂರ್ತಿಯನ್ನು ಹೊರಗಿನ ಭಾಗದಲ್ಲಿ ಸ್ಥಾಪಿಸಿ ರಾಮನ ಸುತ್ತಮುತ್ತ ಅನೇಕ ದೇವರ ಮೂರ್ತಿಗಳ ಪ್ರತಿಷ್ಠಾಪನೆ ಕೂಡ ಮಾಡಲಾಗುವುದು ಇಷ್ಟೆಲ್ಲ ವಿಶೇಷತೆಯಿಂದ ಕೂಡಿದ ರಾಮಮಂದಿರ ಪ್ರಪಂಚದ ಜನರ ಸೆಳೆಯುವಂತೆ ನಾಗರ ಶೈಲಿಯ ಆಧುನಿಕತೆಯ ವಿನ್ಯಾಸದೊಂದಿಗೆ ನಿರ್ಮಾಣವಾಗುತ್ತಿದೆ ಭವ್ಯತೆಹೊಂದಿಗೆ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೆ ನಮ್ಮ ಕರ್ನಾಟಕದ ವಿಶ್ವ ಹಿಂದೂ ಪರಿಷತ್ತಿನ ಶಿರಸಿ ಮೂಲದ ಗೋಪಾಲ್ ಜಿ ಕಟ್ಟಡದ ಮೇಲೂ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಮತ್ತೊಂದು ಕರ್ನಾಟಕದ ಮೆರಗನ್ನು ಹೆಚ್ಚಿಸಿದೆ ಉಡುಪಿಯ ಪೇಜಾವರ ಮಠದ ಶ್ರೀಗಳು ಅಯೋಧ್ಯ ರಾಮಮಂದಿರ ನಿರ್ಮಾಣದ ಟ್ರಸ್ಟಿ ಗಳಾಗಿದ್ದು ಕರ್ನಾಟಕದ ಮತ್ತೊಂದು ವಿಶೇಷ ಹೀಗೆ ಜಗತ್ಪ್ರಸಿದ್ಧ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಕರ್ನಾಟಕದ ಪಾಲು ಬೇರೆ ಬೇರೆ ಕ್ಷೇತ್ರದಲ್ಲಿ ಅನೇಕ ತಮ್ಮ ಸೇವೆಯನ್ನು ಸಲ್ಲಿಸುತ್ತಿದೆ 2020 ಆಗಸ್ಟ್ ಐದರಂದು ನಿರ್ಮಾಣ ಕಾರ್ಯ ಪ್ರಾರಂಭಿಸಿದ ರಾಮಮಂದಿರ ಟ್ರಸ್ಟ್ ರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹಕ್ಕೆ ಕರೆ ಕೊಟ್ಟಾಗ ಭಾರತದ್ಯಾಂತ 3200 ಕೋಟಿ ಸಂಗ್ರಹವಾಗಿರುವುದು ಮತ್ತು ಈ ಸಂಗ್ರಹವಾಗಿರುವ ಹಣದಲ್ಲಿಯೇ ದೇವಸ್ಥಾನವನ್ನು ನಿರ್ಮಿಸುತ್ತೇವೆ ಎನ್ನುವ ಟ್ರಸ್ಟಿಗಳ ದೃಢ ನಿರ್ಧಾರ ಹೊಂದಿದ್ದು ಇನ್ನುಳಿದ ಸಹಕಾರ ಸಹಾಯವನ್ನು ಸರ್ಕಾರಗಳು ಮಾಡಲಿವೆ
ಅಯೋಧ್ಯೆಯ ರಾಮ ಮಂದಿರ ಸಂಪೂರ್ಣ ಕಲ್ಲಿನಿಂದ ನಿರ್ಮಾಣ ಮಾಡಲಾಗುತ್ತಿದ್ದು ರಾಜಸ್ಥಾನದ ಬನ್ಸಿಪಾಲಪುರದ ಕಲ್ಲನ್ನು ಬಳಸಿ ನಿರ್ಮಾಣ ಮಾಡುತ್ತಿದ್ದು ಈ ಕಲ್ಲುಗಳ ಕೆತ್ತನೆ ಕಾರ್ಯ ಕೂಡ ಅನೇಕ ನಿಪುಣತೆ ಹೊಂದಿದ ಶಿಲ್ಪಿಗಳಿಂದ ನಡೆಯುತ್ತಿದೆ 2024 ಜನವರಿ 22ರಂದು ಉದ್ಘಾಟನೆಗೊಳ್ಳಲಿರುವ ರಾಮಮಂದಿರ ದೇವಸ್ಥಾನ ಸಂಪೂರ್ಣ ಕೆತ್ತನೆ ಕಾರ್ಯ ಮುಗಿಯ ಬೇಕಾದರೆ ಸುಮಾರು ಐದು ಆರು ವರ್ಷಗಳ ಕಾಲ ನಡೆಯಬಹುದೆಂದು ಅಂದಾಜಿಸಲಾಗಿದೆ ಈವರೆಗೆ ಅಯೋಧ್ಯ ರಾಮನೂರಿನ ಚಿತ್ರಣನವೇ ಬೇರೆಯಾಗಿತ್ತು ಇನ್ಮಂದೆ ಅಯೋಧ್ಯ ರಾಮನೂರಿನ ಚಿತ್ರಣವು ಆಧುನಿಕತೆಯ ವೈಭವೀಕರಣದೊಂದಿಗೆ ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವ ಮನ ಸೆಳೆಯುವುದರ ಜೊತೆಗೆ ಮನಸ್ಸಿನಲ್ಲಿ ಅಚ್ಚಳಿಯದ ಹಾಗೆ ಉಳಿಯುವಂತೆ ದೇವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಈ ದೇವಸ್ಥಾನವು ತುಂಬಾ ವಿಭಿನ್ನ ವಿಶೇಷತೆ ಯಿಂದ ಕೂಡಿದೆ ಒಟ್ಟು ಮೂರು ಅಂತಸ್ತು ಬಿಲ್ಡಿಂಗ್ ಹೊಂದಿರುವ ಈ ದೇವಸ್ಥಾನವು ಕೆಳಗಡೆ ಬಾಲ ರಾಮನ ಮೂರ್ತಿ ಮಂದಿರ ಮೊದಲನೇ ಮಹಡಿ ಯಲ್ಲಿ ವಿವಿಧ ದೇವರ ಮೂರ್ತಿಗಳ ಮತ್ತು ರಾಮನ ದರ್ಬಾರನ ಸಂಪೂರ್ಣ ಚಿತ್ರಣ ಇರಲಿದೆ ಹಲವು ವಿಶೇಷತೆಯೊಂದಿಗೆ ವಿಭಿನ್ನವಾಗಿ ನಿರ್ಮಾಣವಾಗುತ್ತಿರುವ ಅಯೋಧ್ಯ ರಾಮ ಮಂದಿರವು ಬರಿ ಪ್ರವಾಸಿ ತಾಣವಾಗಿರದೆ ಬರುವ ಭಕ್ತರ ಭಕ್ತಿಯ ಶ್ರದ್ಧಾ ಸೇವಾ ಕೇಂದ್ರವಾಗಲಿದೆ
ನೂತನ ರಾಮನ ದೇವಸ್ಥಾನದ ನಿರ್ಮಾಣದ ಜೊತೆಗೆ ಅಯೋಧ್ಯ ನಗರದ ಸಂಪೂರ್ಣ ಚಿತ್ರಣ ಬದಲಾಗಲಿದ್ದು ಇಡೀ ಅಯೋಧ್ಯ ನಗರವನ್ನೇ ಹೊಸ ವಿನ್ಯಾಸದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ ಅಯೋಧ್ಯೆಯಲ್ಲಿನ ಬಸ್ ಸ್ಟ್ಯಾಂಡ್ ರೈಲ್ವೆ ಸ್ಟೇಷನ್ ರಸ್ತೆಗಳು ಎಲ್ಲವುಗಳನ್ನು ಆಧುನಿಕತೆ ಶೈಲಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಸರಕಾರ ಸಾಕಷ್ಟು ಹಣವನ್ನು ವ್ಯಹಿಸಿ ಅಚ್ಚುಕಟ್ಟಾಗಿ ಸಂಪೂರ್ಣ ಅಯೋಧ್ಯವನ್ನು ಅಭಿವೃದ್ಧಿ ಮಾಡುತ್ತಿದೆ ಉದ್ಯಮಕ್ಕೆ ಅನುಕೂಲವಾಗುವ ದೃಷ್ಟಿಯಿಂದ ರಾಮಮಂದಿರ ಸಮೀಪದಲ್ಲಿ ಜಾಗವನ್ನು ಗುರುತಿಸಿ ಅಭಿವೃದ್ಧಿಪಡಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಯೋಧ್ಯವನ್ನು ಗುರುತಿಸುವಂತೆ ಮಾಡುವ ಪಣವನ್ನು ಸ್ಥಳೀಯ ಹಾಗೂ ಕೇಂದ್ರ ಸರ್ಕಾರಗಳು ಮಾಡುತ್ತಿದ್ದು ಅಯೋಧ್ಯೆಯಲ್ಲಿ ವಾಸಿಸುವ ಜನರಿಗೆ ನಂಬಿಕೆ ಬರವಸೆ ವಿಶ್ವಾಸ ದ್ವೀಗುಣಗೊಳಿಸಿದೆ.
ಕೋಟ್ಯಾಂತರ ಹಿಂದುಗಳ ಕನಸು ನನಸಾಗುವ ಸಮಯ ಸಮೀಪಿಸಿದ್ದು ದೇವನಗರಿ ಭಾರತದ ಭಕ್ತಿ ಲೋಕದ ಕೇಂದ್ರ ಬಿಂದು ರಾಮನೂರಿನ ಭವ್ಯ ಮಂದಿರದಲ್ಲಿ ದಶರಥ ಪುತ್ರ ಜಾನಕಿ ವಲ್ಲಭ ಮರ್ಯಾದ ಪುರುಷೋತ್ತಮ ಗರ್ಭಗುಡಿಯ ರಾಮನ ಭವ್ಯವಾದ ಮೂರ್ತಿಯೊಂದಿಗೆ ಸುಂದರ ಸುಸಜ್ಜಿತವಾದ ರಾಮ ಮಂದಿರ ಅಯೋಧ್ಯೆಯಲ್ಲಿ ಉದ್ಘಾಟನೆಗೆ ಕೋಟ್ಯಾಂತರ ಹಿಂದುಗಳು ಎದುರು ನೋಡುತ್ತಿದ್ದು ಹಿಂದುಗಳ ಪ್ರೀತಿಯ ಪ್ರಸಿದ್ಧ ದೇವಾಲಯವಾಗಿ ಹೊರಹೊಮ್ಮಲಿದೆ ಹಿಂದುಗಳ ಭಕ್ತಿಯ ಶ್ರದ್ದಾ ಸೇವಾ ಕೇಂದ್ರವಾಗಿ ವಿಶೇಷತೆಗಳನ್ನು ಹೊಂದಿದ ರಾಮಮಂದಿರ ಸಾವಿರಾರು ವರ್ಷಗಳ ಇತಿಹಾಸ ತಿಳಿಸುವ ಭವ್ಯ ಮಂದಿರವಾಗಿ ರಾಮಮಂದಿರ ನಿರ್ಮಾಣವಾಗಿತರುವದು ಭಾರತೀಯರ ಮತ್ತು ಹಿಂದುಗಳ ಪಾಲಿಗೆ ಶಕ್ತಿ ತಂದಿದೆ ಬರುವ ಜನವರಿ 22 2024 ರಂದು ಉದ್ಘಾಟನೆಗೊಂಡ ನಂತರವೂ ಅನೇಕ ಕೆಲಸಗಳೊಂದಿಗೆ ಅಚ್ಚುಕಟ್ಟಾದ 70 ಎಕರೆ ಪ್ರದೇಶದಲ್ಲಿ ವಿಸ್ತೀರ್ಣವಾದ ಭವ್ಯ ರಾಮಮಂದಿರದ ಜೊತೆಗೆ ಅನೇಕ ದೇವಾಲಯಗಳು ಪ್ರಸಾದ ನಿಲಯ ಸೋಲಾರ್ ಪಾರ್ಕ್ ಕಸ ಸಂಸ್ಕರಣ ಘಟಕ ಹೀಗೆ ಹಲವು ವಿಶೇಷತೆಯ ಪ್ರಯೋಗಾಲಯಗಳು ಎಲ್ಲ ತರಹದ ವಿಶೇಷತೆ ಹೊಂದಿದ ದೇವಾಲಯ ಪ್ರಪಂಚದಲ್ಲಿಯೇ ಇತಿಹಾಸ ನಿರ್ಮಿಸುವ ದೇವಾಲಯವಾಗಲಿದೆ
••• ಜಗದೀಶ.ಎಸ್.ಗಿರಡ್ಡಿ
ಲೇಖಕರು
9902470856.