This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsLocal NewsState News

ಕಾಯಕ ನಿಷ್ಟರು ನುಲಿಯ ಚಂದಯ್ಯ : ಶಾಸಕ ಮೇಟಿ

ಕಾಯಕ ನಿಷ್ಟರು ನುಲಿಯ ಚಂದಯ್ಯ : ಶಾಸಕ ಮೇಟಿ

ಬಾಗಲಕೋಟೆ

ಕಾಯಕದ ಮೂಲಕವೇ ಆತ್ಮೋನ್ನತಿ ಕಂಡು, ಕಾರ್ಯಕ ನಿಷ್ಟೇಯನ್ನು ಮೆರೆದವರು ನುಲಿಯ ಚಂದಯ್ಯನವರು ಎಂದು ಬಾಗಲಕೋಟೆ ಶಾಸಕ ಎಚ್.ವಾಯ್.ಮೇಟಿ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಅವರು ಕಾಯಕ ದಾಸೋಹ ಮತ್ತು ಸತ್ಯ ನಿಷ್ಠೆಯ ಮೂಲಕ ವಿಶ್ವ ಮಾನವ ಕೋಟಿಗೆ ಅರಿವಿನ ಬೆಳಕನ್ನು ನೀಡಿದ ಶರಣರ ಪೈಕಿ ನುಲಿಯ ಚಂದಯ್ಯ ಅಗ್ರಮಾನ್ಯರಾಗಿದ್ದಾರೆ ಎಂದರು.

ಇಂತಹ ಮಹಾನ್ ಶರಣರ ತತ್ವ, ಸಿದ್ದಾಂತವನ್ನು ನಾವೆಲ್ಲರೂ ಪಾಲಿಸಬೇಕಾಗ ಅಗತ್ಯವಿದೆ. ನವನಗರದ ೪೭ನೇ ಸೆಕ್ಟರನಲ್ಲಿರುವ ಸಮುದಾಯದ ಭವನ ನಿರ್ಮಾಣ ಅರ್ಧಕ್ಕೆ ನಿಂತಿದ್ದು, ಅದನ್ನು ಪೂರ್ಣಗೊಳಿಸುವ ಭರವಸೆಯನ್ನು ಶಾಸಕರು ನೀಡಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಬಾದಾಮಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಚಂದ್ರಶೇಖರ ಹೆಗಡೆ ಮಾತನಾಡಿ ೧೨ನೇ ಶತಮಾನ ಸಾಮಾಜಿಕ ಕ್ರಾಂತಿಯ ಕಾಲಘಟ್ಟವಾಗಿದ್ದು, ಹಗ್ಗವನ್ನು ತಯಾರು ಮಾಡಿ ಮಾರುವ ಕಾಯಕವನ್ನು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಮಾಡುತ್ತಾ ಬಸವಣ್ಣನವರಿಗೆ ಪ್ರಿಯರಾದವರು ನುಲಿ ಚಂದಯ್ಯನವರು. ಬಸವಣ್ಣನವರ ಅನುಭವ ಮಂಟಪದಿಂದ ಪ್ರಭಾವಿತರಾಗಿ ಕಾಯಕ ಸಿದ್ದಾಂತವನ್ನು ತೋರಿಸಿಕೊಟ್ಟಿದ್ದಾರೆ. ಲಿಂಗ ನಿಷ್ಟೆಗಿಂತ ಕಾರ್ಯಕ ನಿಷ್ಠೆ ಎಂದು ಕಾಯಕ ತತ್ವ ಆರಿಸಿಕೊಂಡು ನಿರಂತರವಾಗಿ ತೊಡಗಿಸಿಕೊಂಡವರಾಗಿದ್ದಾರೆ ಎಂದರು.

ತಾನು ಹೊಸೆದ ಹಗ್ಗವನ್ನು ಮಾರಲು ಕಲ್ಯಾಣ ಬೀದಿಯಲ್ಲಿ ಲಿಂಗದೇವನನ್ನು ತೊಡಗಿಸಿದ ಕೀರ್ತಿ ನುಲಿಯ ಚಂದಯ್ಯನಿಗೆ ಸಲ್ಲುತ್ತದೆ. ಕೆರೆಯ ನೀರಲ್ಲಿ ಹುಲ್ಲು ಕೊಯ್ಯುತ್ತಿದ್ದಾಗ ಕೊರಳಲ್ಲಿದ್ದ ಇಷ್ಟಲಿಂಗ ಜಾರಿ ನೀರಿನಲ್ಲಿ ಬಿದ್ದುಹೋಯಿತು. ಕಾಯಕದಲ್ಲಿ ಮೈಮರೆತ ಚಂದಯ್ಯ ಅದನ್ನು ಮೇಲೆತ್ತಿಕೊಳ್ಳಲಿಲ್ಲ. ಲಿಂಗವೇ ಅವರನ್ನು ಹಿಂಬಾಲಿಸಿತು. ಅದನ್ನು ಸ್ವೀಕರಿಸಲು ನಿರಾಕರಿಸಿದಾಗ ಲಿಂಗದೇವ ಮತ್ತು ಚಂದಯ್ಯನವರ ನಡುವೆ ರಾಜಿ ಮಾಡಿಸಿದ ಮಡಿವಾಳ ಮಾಚಿದೇವರು ಲಿಂಗವನ್ನು ಸ್ವೀಕರಿಸಲು ಸಲಹೆ ನೀಡುತ್ತಾರೆ. ಆದರೆ ಚಂದಯ್ಯ ತಾನು ನುಲಿದ ಹಗ್ಗಗಳನ್ನು ಮಾರುವ ಕಾಯಕವನ್ನು ಲಿಂಗದೇವನಿಗೆ ವಹಿಸುತ್ತಾನೆ. ಈ ಹಗ್ಗಗಳನ್ನು ಬಸವಣ್ಣನಿಗೆ ಹೆಚ್ಚು ಹಣಕ್ಕೆ ಮಾರಿ ಹಣತಂದಾಗ ಚಂದಯ್ಯ ಅದನ್ನು ಸ್ವೀಕರಿಸದೇ ಹೆಚ್ಚುವರಿ ಹಣವನ್ನು ಬಸವಣ್ಣನಿಗೆ ಒಪ್ಪಿಸಲು ಕಟ್ಟಪ್ಪಣೆ ಮಾಡುವ ಬಗೆಗಿನ ಕತೆಯಾಗಿ ಖ್ಯಾತವಾಗಿದೆ ಎಂದರು.

ಸಮುದಾಯದ ಮುಖಂಡರಾದ ಸುರೇಶ ಭಜಂತ್ರಿ ಮತ್ತು ಅಶೋಕ ಭಜಂತ್ರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಸಮುದಾಯದ ಮುಖಂಡರಾದ ಬಿ.ಎಚ್.ಭಜಂತ್ರಿ, ಬೀಮಸಿ, ಮೋಹನ ಕಟ್ಟಿನಮನಿ, ರಮೇಶ ಭಜಂತ್ರಿ, ಶೇಖರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಜಿಲ್ಲಾಡಳಿತ ಭನದಲ್ಲಿ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಗರದ ನಾನಾ ಕಡೆ ಸಂಚರಿಸಿ ಡಾ.ಬಿ.ಆರ್.ಅಂಬೇಡ್ಕರ ಭವನಕ್ಕೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಕುಂಬಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಆಕರ್ಷನೀಯ ಕೇಂದ್ರ ಬಿಂದು ಆಗಿದ್ದರು.

ಅರ್ಜಿ ಆಹ್ವಾನ
———————
ಬಾಗಲಕೋಟೆ:

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ, ಬಾಗಲಕೋಟೆ ವತಿಯಿಂದ ಅನುಷ್ಟಾನಗೊಳ್ಳುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಜಿಲ್ಲೆಗೆ ೦೩ ಜನ ಫಲಾನುಭವಿಗಳನ್ನು ಕುರಿ/ಮೇಕೆ (೦೬+೧) ಘಟಕದ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಯಾ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳ, ಪಶು ಆಸ್ಪತ್ರೆ ಇವರಿಂದ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಪ್ರಕಟಣೆ ದಿನಾಂಕದಿಂದ ೧೦ ದಿನಗಳ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊನಂ. ೮೬೬೦೨೬೪೮೧೪ ಸಂಪರ್ಕಿಸುವಂತೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

";