ಬೆಂಗಳೂರು
ಬೆಳಗಾವಿ ಖಡಕ್ ತ್ರಿಮೂರ್ತಿಗಳೆಂದೆ ಹೆಸರಾದ ಡಿವೈಎಸ್‌ಪಿ ನಾರಾಯಣ ಭರಮಣಿ, ರಾಮನಗೌಡ ಹಟ್ಟಿ ಹಾಗೂ ಮಹಾಂತೇಶ ಜಿದ್ದಿ ಈ ಮೂವರು ಹೆಚ್ಚುವರಿ ಎಸ್‌ಪಿಗಳಾಗಿ ಪದೋನ್ನತಿ ಹೊಂದಿದ್ದಾರೆ.
ಸರಕಾರ ಈ ಮೂವರು ಅಧಿಕಾರಿಗಳಿಗೆ ಪದೋನ್ನತಿ ನೀಡಿದೆ. ಬೆಳಗಾವಿಯ ಸಿಂಗಮ್ ಎಂದೇ ಖ್ಯಾತಿ ಪಡೆದ ನಾರಾಯಣ ಭರಮಣಿ ಅವರನ್ನು ಧಾರವಾಡ ಜಿಲ್ಲೆ ಹೆಚ್ಚುವರಿ ಎಸ್‌ಪಿ ಆಗಿ ಪದೋನ್ನತಿ ಹೊಂದಿದ್ದಾರೆ. ರಾಮನಗೌಡ ಹಟ್ಟಿ ಅವರನ್ನು ವಿಜಯಪುರಕ್ಕೆ ಹಾಗೂ ಮಹಾಂತೇಶ ಜಿದ್ದಿ ಅವರನ್ನು ಬಾಗಲಕೋಟೆಯ ಹೆಚ್ಚುವರಿ ಎಸ್‌ಪಿ ಆಗಿ ಪದೋನ್ನತಿ ಹೊಂದಿ ನಿಯೋಜನೆಗೊಂಡಿದ್ದಾರೆ.
ಈ ಮೂವರು ಅಧಿಕಾರಿಗಳು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಮಾಜಘಾತುಕ ಶಕ್ತಿಗಳಿಗೆ ಸಿಂಹಸ್ವಪ್ನವಾಗಿದ್ದರು. ಮುಂದೆಯೋ ಸಹ ಈ ಮೂವರಿಂದ ಸಮಾಜ ತಿದ್ದುವ ಕೆಲಸ ನಡೆಯಲಿದೆ ಎಂಬುದು ಜನರ ಒತ್ತಾಸೆಯಾಗಿದೆ.
ಈ ಮೂವರೊಂದಿಗೆ ಸರಕಾರ ಒಟ್ಟು ೩೫ ಡಿವೈಎಸ್‌ಪಿಗಳಿಗೆ ಪದೋನ್ನತಿ ನೀಡಿದೆ.