This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Entertainment NewsHealth & FitnessLocal NewsNational NewsSports NewsState News

Kichcha Sudeep: K46 ಸಿನಿಮಾ ಕ್ಲೈಮ್ಯಾಕ್ಸ್‌ಗೆ ಜಬರ್ದಸ್ತ್ ಬಾಡಿ ಬೆಳೆಸಿದ ಸುದೀಪ್;‌ ಕಿಚ್ಚನ ಲುಕ್‌ಗೆ ಫ್ಯಾನ್ಸ್‌ ಫಿದಾ

Kichcha Sudeep: K46 ಸಿನಿಮಾ ಕ್ಲೈಮ್ಯಾಕ್ಸ್‌ಗೆ ಜಬರ್ದಸ್ತ್ ಬಾಡಿ ಬೆಳೆಸಿದ ಸುದೀಪ್;‌ ಕಿಚ್ಚನ ಲುಕ್‌ಗೆ ಫ್ಯಾನ್ಸ್‌ ಫಿದಾ

ಬೆಂಗಳೂರು:

ಜಿಮ್‌, ವರ್ಕೌಟ್‌ ಎಂದರೆ ದೂರವೇ ಇರುತ್ತಿದ್ದ ಕಿಚ್ಚ ಸುದೀಪ್‌, ಪೈಲ್ವಾನ್‌ ಸಿನಿಮಾಗಾಗಿ ದೇಹವನ್ನು ಕಟುಮಸ್ತಾಗಿ ಬೆಳೆಸಿಕೊಂಡಿದ್ದರು. ಆ ಮೂಲಕ ಅಭಿಮಾನಿಗಳಿಗೆ ಸುದೀಪ್‌ (Kichcha Sudeep) ಅಚ್ಚರಿ ನೀಡಿದ್ದರು. ಈಗ ಕೆ 46 (K46 Movie) ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿಯೂ ಕಿಚ್ಚ ಸುದೀಪ್‌ ಅವರು ಅವಿರತವಾಗಿ ವರ್ಕೌಟ್‌ ಮಾಡುವ ಮೂಲಕ ಭರ್ಜರಿಯಾಗಿಯೇ ದೇಹವನ್ನು ಅಣಿಗೊಳಿಸಿದ್ದಾರೆ. ಸುದೀಪ್‌ ಅವರು ತಮ್ಮ ಕಟ್ಟುಮಸ್ತು ದೇಹದ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

ಭರ್ಜರಿ ವರ್ಕೌಟ್‌ ಫೋಟೊಗಳನ್ನು ಹಂಚಿಕೊಂಡಿರುವ ಸುದೀಪ್‌,

“ವರ್ಕೌಟ್‌ ಮಾಡುವುದು ನನಗೆ ತುಂಬ ಖುಷಿ ಕೊಡುತ್ತದೆ. ಶಾಂತ ಮನಸ್ಥಿತಿ ಹಾಗೂ ಗಮನ ಕೇಂದ್ರೀಕರಿಸಲು ನಿತ್ಯವೂ ವರ್ಕೌಟ್‌ ಮಾಡುವುದು ಸಹಕಾರಿಯಾಗಿದೆ. ಕೆ 46 ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿ ಇಷ್ಟೆಲ್ಲ ವರ್ಕೌಟ್‌ ಮಾಡಿದ್ದೇನೆ” ಎಂಬ ಒಕ್ಕಣೆ ಬರೆದುಕೊಂಡಿದ್ದಾರೆ. ಫೋಟೊಗಳು ಭಾರಿ ವೈರಲ್‌ ಆಗಿದ್ದು, ಕಿಚ್ಚನ ಹೊಸ ಅವತಾರಕ್ಕೆ ಅಭಿಮಾನಿಗಳು ಮಾರುಹೋಗಿದ್ದಾರೆ.

ಕಿಚ್ಚನ ಜಬರ್ದಸ್ತ್‌ ಬಾಡಿ ನೋಡಿ
ಈಗಾಗಲೇ ಕೆ 46 ಸಿನಿಮಾದ ಟೀಸರ್‌ ಬಿಡುಗಡೆಗೊಂಡಿದೆ. ʻಕಿಚ್ಚ 46ʼ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ರಣರಣ ರಕ್ಕಸನಾಗಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಟೀಸರ್‌ನಲ್ಲಿ ಕಿಚ್ಚನ ಮಾಸ್‌ ಡೈಲಾಗ್‌ ಹೈಲೈಟ್‌ ಆಗಿದೆ. ʻಯುದ್ಧ ಹುಟ್ಟಾಕೋರ್‌ ಕಂಡ್ರು ನಂಗಗಾಗಲ್ಲ. ಯುದ್ಧಕ್ಕೆ ಹೆದರ್‌ಕೊಂಡು ಓಡೋಗರ್‌ ಕಂಡ್ರು ನಂಗಾಗಲ್ಲ. ಅಖಾಡಕ್ಕೆ ಇಳಿದು, ಎದುರಾಳಿಗಳ ಎದೆ ಬಗ್ದು ರಕ್ತ ಚೆಲ್ಲಾಡಿ, ಆ ರಕ್ತ ಸುರ್ಸ್‌ಕೊಂಡು ಓಡೋಗದನ್ನ ನೋಡೋನು ನಾನುʼʼ ಎಂಬ ಖಡಕ್‌ ಡೈಲಾಗ್‌ ಹೊಡೆದಿದ್ದಾರೆ ಕಿಚ್ಚ. ಇದೀಗ ಈ ಡೈಲಾಗ್‌ ಟ್ರೆಂಡ್‌ ಆಗುತ್ತಿದೆ.

ಕಿಚ್ಚನ ಬರ್ತ್‌ಡೇಗೆ ಭರ್ಜರಿ ಸಿದ್ಧತೆ
ಸೆಪ್ಟೆಂಬರ್‌ 2ರಂದು ಕಿಚ್ಚ ಸುದೀಪ್‌ ಅವರ ಜನ್ಮದಿನ ಇರುವುದರಿಂದ ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಸಿದ್ಧರಾಗಿದ್ದಾರೆ. ಈ ಬಾರಿ ಅಭಿಮಾನಿಗಳ ಜತೆ ಜನ್ಮದಿನ ಆಚರಿಸಿಕೊಳ್ಳಲು ಕಿಚ್ಚ ಸುದೀಪ್‌ ನಿರ್ಧರಿಸಿದ್ದಾರೆ. ಸೆಪ್ಟಂಬರ್ 1ರಂದು ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ರಾತ್ರಿ 10 ರಿಂದ ಮಧ್ಯರಾತ್ರಿ 12ರ ತನಕ ಅದ್ಧೂರಿ ಆಚರಣೆ ನಡೆಯಲಿದೆ. ಇನ್ನು ಸೆಪ್ಟೆಂಬರ್‌ 2ರಂದು ಜೆಪಿ ನಗರದ ನಿವಾಸದಲ್ಲಿ ಸುದೀಪ್‌ ಅವರು ಬೆಳಗ್ಗೆ 9ರಿಂದ ಮಧ್ಯಾಹ್ನ 1ರತನಕ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ.

Nimma Suddi
";