ಬಾಗಲಕೋಟೆ
ಕಿತ್ತೂರು ಸಂಸ್ಥಾನದಲ್ಲಿ ಶಸ್ತಾçಸ್ತಗಳನ್ನು ಹಿಡಿದು ಬ್ರೀಟಿಷರ ವಿರುದ್ದ ಹೋರಾಡಿದ ರಾಣಿ ಚೆನ್ನಮ್ಮಾಜಿ ಕೇವಲ ಒಂದೇ ಸಮೂದಾಯಕ್ಕೆ ಸೀಮಿತವಾಗದೇ ಎಲ್ಲ ನಾರಿ ಕೂಲಕ್ಕೂ ಮತ್ತು ಸಮೂದಾಯಕ್ಕೆ ಮಾದರಿಯಾಗಿದ್ದಾಳೆ ಎಂದು ಶಾಸಕ ಹೆಚ್.ವಾಯ್ ಮೇಟಿ ಹೇಳಿದರು.
ನವನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಿತ್ತೂರಿನ ಪ್ರಜೆಗಳನ್ನು ತನ್ನ ಮಕ್ಕಳಂತೆ ಕಂಡು, ನಾರಿ ಶಕ್ತಿ ಯಾವ ರೀತಿ ಇರುತ್ತದೆ ಎಂಬುದನ್ನು ಅಂದಿನ ಕಾಲದಲ್ಲಿಯೇ ತೋರಿಸಿಕೊಟ್ಟ ದಿಟ್ಟ ಮಹಿಳೆ ರಾಣಿ ಚೆನ್ನಮ್ಮಾಜಿ. ಇಂತಹ ಮಹಿಳೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಆದರೆ ರಾಣಿ ಚೆನ್ನಮ್ಮ ಜಯಂತಿಯನ್ನು ಕಾಟಾಚಾರಕ್ಕೆ ಎಂಬAತೆ ಕೇವಲ ಐವತ್ತು ಅರವತ್ತು ಜನರೊಂದಿಗೆ ಆಚರಿಸುತ್ತಿರುವುದು, ವಿಷಾದನೀಯ. ಎಲ್ಲ ಮಹಿಳೆಯರಿಗೂ ಆದರ್ಶವಾಗಿರುವ ರಾಣಿ ಚೆನ್ನಮ್ಮ ಜಯಂತಿಯನ್ನು ಎಲ್ಲ ಸಮೂದಾಯದವರೂ ಸೇರಿ ಅರ್ಥಪೂರ್ಣವಾಗಿ ಆಚರಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಸAಸದ ಪಿ.ಸಿ.ಗದ್ದಿಗೌಡರ ಅವರು ಮಾತನಾಡಿ ಇಂದು ಸಾಕಷ್ಟು ಸಂಖ್ಯೆಯ ಮಹಿಳೆಯರು ದೇಶ ಸೇವೆಗೈಯಲು ಸೈನ್ಯವನ್ನು ಸೇರುತ್ತಿದ್ದಾರೆಂದರೆ ಅದಕ್ಕೆ ಕಿತ್ತೂರು ರಾಣಿ ಚೆನ್ನಮ್ಮರಂತಹ ವೀರ ಮಹಿಳೆಯರೇ ಕಾರಣ. ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ರಾಣಿ ಚೆನ್ನಮ್ಮಾಜಿ ಸ್ಪೂರ್ತಿಯಾಗಿದ್ದಾರೆ. ಚೆನ್ನಮ್ಮಾಜಿಯ ತ್ಯಾಗಮಯ ಜೀವನ ಆದರ್ಶ ಎಲ್ಲರಿಗೂ ಮಾದರಿಯಾಗಲಿ ಎಂದು ಹೇಳಿದರು.
ಎಮ್ ಎಲ್ ಸಿ ಪಿ.ಹೆಚ್.ಪೂಜಾರ ಅವರು ಮಾತನಾಡಿ ರಾಜ್ಯದಲ್ಲಿ ಸ್ವಾತ್ಯಂತ್ರದ ಕಿಡಿಯನ್ನು ಹೊತ್ತಿಸಿದ ಮೊದಲ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮಾಜಿ. ತೊಟ್ಟಿಲು ತೂಗುವ ಕೈ ಶಸ್ತಾçಸ್ತçವನ್ನೂ ಹಿಡಿಯಬಲ್ಲದು ಎಂದು ತೋರಿಸಿಕೊಟ್ಟವಳು ರಾಣಿ ಚೆನ್ನಮ್ಮ. ಬ್ರೀಟಿಷರ ವಿರುದ್ದ ತನ್ನ ನಾಡಿನ ರಕ್ಷಣೆಗಾಗಿ ಪ್ರಾಣವನ್ನೇ ನೀಡಿದ ರಾಣಿ ಚೆನ್ನಮ್ಮಾಜಿ ಆದರ್ಶ ಗುಣಗಳು ಎಲ್ಲರಲ್ಲಿ ಬರಬೇಕು ಎಂದು ತಿಳಿಸಿದರು.
ಸಾಹಿತಿ ಗಿರಿಜಾ ಎಸ್ ಪಾಟೀಲ ವಿಶೇಷ ಉಪನ್ಯಾಸ ನೀಡಿ ಕನ್ನಡ ನಾಡಿನ ಹೆಮ್ಮೆಯ ನಾರಿ ಕಿತ್ತೂರು ರಾಣಿ ಚೆನ್ನಮ್ಮಳ ರಕ್ತದ ಕಣ ಕಣದಲ್ಲೂ ದೇಶ ಪ್ರೇಮವಿತ್ತು. ಪ್ರತಿ ಮನೆ ಮನೆಯಲ್ಲೂ ರಾಣಿ ಚೆನ್ನಮ್ಮಳಂತಹ ಹೆಣ್ಣು ಮಗು ಹುಟ್ಟಿದಾಗ ನಮ್ಮ ದೇಶದ ಸಂರಕ್ಷಣೆ ಸಹಜವಾಗಿಯೇ ಆಗುತ್ತದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಡಳಿತ ಭವನ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ವಿವಿಧ ಜಾನಪದ ಕಲಾ ತಂಡಗಳೊAದಿಗೆ ನವನಗರದ ಬಸ್ ನಿಲ್ದಾಣ, ಎಲ್ ಐ ಸಿ ವೃತ್ತ ಮಾರ್ಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಮೇರವಣಿಗೆ ಮಾಡಲಾಯಿತು. ಗುಳೇದಗುಡ್ಡ ಸಂಗೀತ ಕಲಾವಿದರು ಸುಗಮ ಸಂಗೀತ ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ವಂದಿಸಿದರು. ಶಂಕರಲಿAಗ ದೇಸಾಯಿ ನಿರೂಪಿಸಿದರು.
ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ತಹಶೀಲ್ದಾರ ಅಮರೇಶ ಪಮ್ಮಾರ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.